ಐಪಿಎಲ್: ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್‌, 39ನೇ ಅರ್ಧ ಶತಕ

ಚೆನ್ನೈ: ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 39ನೇ ಅರ್ಧ ಶತಕ ಬಾರಿಸಿದ್ದಾರೆ. ಚೆನ್ನೈನಲ್ಲಿ ಭಾನುವಾರ (ಏಪ್ರಿಲ್ 18) ನಡೆದ ಐಪಿಎಲ್ 10ನೇ ಪಂದ್ಯದಲ್ಲಿ ಎಬಿಡಿ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಈ ಸಾಧನೆ ಮಾಡಿದ್ದಾರೆ.

ಐಪಿಎಲ್ 2021: ಆರ್‌ಸಿಬಿ ಪರ ಮತ್ತೊಂದು ಭರ್ಜರಿ ಅರ್ಧ ಶತಕ ಸಿಡಿಸಿದ ಮ್ಯಾಕ್ಸ್‌ವೆಲ್

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕಾದಾಡಿದ್ದವು. ಈ ವೇಳೆ ಆರ್‌ಸಿಬಿ ಪರ 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಎಬಿ ಡಿ ವಿಲಿಯರ್ಸ್ 34 ಎಸೆತಗಳಿಗೆ 76 ರನ್ ಬಾರಿಸಿದರು. ಇದರಲ್ಲಿ 9 ಫೋರ್, 3 ಸಿಕ್ಸರ್ ಸೇರಿತ್ತು.

ಹರ್ಭಜನ್ ಸಿಂಗ್ ಅವರ 18.5ನೇ ಓವರ್‌ನಲ್ಲಿ ಎಬಿಡಿ ಅರ್ಧ ಶತಕ ಪೂರೈಸಿದರು. 27 ಎಸೆತಗಳಲ್ಲಿ ಎಬಿಡಿ ಬ್ಯಾಟಿಂಗ್‌ ಅರ್ಧ ಶತಕ ಬಂದಿತ್ತು. ಎಬಿಡಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 76 (34), ದೇವದತ್ ಪಡಿಕ್ಕಲ್ 25 ರನ್‌ ನೊಂದಿಗೆ ಆರ್‌ಸಿಬಿ 20 ಓವರ್‌ಗೆ 4 ವಿಕೆಟ್ ಕಳೆದು 204 ರನ್ ಗಳಿಸಿತ್ತು.

ಐಪಿಎಲ್ 2021: ಡೆಲ್ಲಿ vs ಪಂಜಾಬ್: ಮಹತ್ವದ ಮೈಲಿಗಲ್ಲುಗಳ ಮೇಲೆ ಅಶ್ವಿನ್, ರಾಹುಲ್, ರಹಾನೆ ಚಿತ್ತ

37ರ ಹರೆಯದ ಡಿ ವಿಲಿಯರ್ಸ್ 172 ಐಪಿಎಲ್ ಪಂದ್ಯಗಳಲ್ಲಿ 40.77ರ ಸರಾಸರಿಯಲ್ಲಿ 4974 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕ, 39 ಅರ್ಧ ಶತಕಗಳು ಸೇರಿವೆ. ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿಡಿ ಅಂತಾರಾಷ್ಟ್ರೀಯ ಟಿ20ಐನಲ್ಲಿ 78 ಪಂದ್ಯಗಳಲ್ಲಿ 1672 ರನ್ ಬಾರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, April 18, 2021, 17:59 [IST]
Other articles published on Apr 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X