ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನಲ್ಲಿ ತಾನಾಡಿದ ಇತರ ತಂಡಗಳಿಗಿಂತ 'ಆರ್‌ಸಿಬಿ ಅತ್ಯುತ್ತಮ ಅಭಿಮಾನಿ ಬಳಗ' ಎಂದ ದಿನೇಶ್ ಕಾರ್ತಿಕ್

IPL 2022: Dinesh Karthik Says RCB Is the Best Fan Base In The IPL

ಭಾರತದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಲ್ಲೊಬ್ಬರು. ಐಪಿಎಲ್ 2022ರ ಮೊದಲು ಈ ಪಂದ್ಯಾವಳಿಯಲ್ಲಿ ಹಲವಾರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈ ವರ್ಷದ ಐಪಿಎಲ್ ಮೆಗಾ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 5.50 ಕೋಟಿ ರೂ.ಗೆ ಖರೀದಿಸಿತು.

ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ತೀವ್ರ ಪೈಪೋಟಿಯನ್ನು ಸೋಲಿಸಿ ಆರ್‌ಸಿಬಿ ಅಂತಿಮವಾಗಿ ದಿನೇಶ್ ಕಾರ್ತಿಕ್‌ರನ್ನು ಪಡೆಯಿತು. ಕಾರ್ತಿಕ್ ನಂತರ ಐಪಿಎಲ್ 2022ರಲ್ಲಿ ತಂಡಕ್ಕಾಗಿ ಕೆಲವು ಅತ್ಯುತ್ತಮ ಪ್ರದರ್ಶನಗಳೊಂದಿಗೆ ಆರ್‌ಸಿಬಿ ತನ್ನಲ್ಲಿ ಇರಿಸಿದ ನಂಬಿಕೆಯನ್ನು ಉಳಿಸಿಕೊಂಡರು. ಐಪಿಎಲ್ 2022 ಪ್ಲೇಆಫ್‌ಗೆ ಆರ್‌ಸಿಬಿ ಅರ್ಹತೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ನಂತರ ಆರ್‌ಸಿಬಿ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಕನಸು ಕೊನೆಗೂ ಕನಸಾಗಿಯೇ ಉಳಿಯಿತು.

ಆರ್‌ಸಿಬಿ ಅಭಿಮಾನಿಗಳ ಬಳಗವು ಅತ್ಯುತ್ತಮ

ಆರ್‌ಸಿಬಿ ಅಭಿಮಾನಿಗಳ ಬಳಗವು ಅತ್ಯುತ್ತಮ

ತೀವ್ರ ಹೀನಾಯ ಸೋಲಿನ ನಂತರ, ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ಬಗ್ಗೆ ಮಾತನಾಡಿದರು. ವಿಕೆಟ್‌ಕೀಪರ್-ಬ್ಯಾಟರ್ ಅವರು ಐಪಿಎಲ್‌ನಲ್ಲಿ ಇದುವರೆಗೆ ಭಾಗವಾಗಿದ್ದರಲ್ಲಿ ಆರ್‌ಸಿಬಿ ಅಭಿಮಾನಿಗಳ ಬಳಗವು ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿನೇಶ್ ಕಾರ್ತಿಕ್ ಅವರ ಸಂಪೂರ್ಣ ಐಪಿಎಲ್ ವೃತ್ತಿಜೀವನದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ XI ಪಂಜಾಬ್, ಮುಂಬೈ ಇಂಡಿಯನ್ಸ್, ಆರ್‌ಸಿಬಿ (2022ರ ಋತುವಿನ ಮೊದಲು), ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗಾಗಿ ಆಡಿದ್ದಾರೆ.

ನಾನು ಭಾಗವಾಗಿರುವ ಅತ್ಯುತ್ತಮ ಅಭಿಮಾನಿಗಳ ಬಳಗ

ನಾನು ಭಾಗವಾಗಿರುವ ಅತ್ಯುತ್ತಮ ಅಭಿಮಾನಿಗಳ ಬಳಗ

"ನಾನು ಐಪಿಎಲ್‌ನಲ್ಲಿ ಅನೇಕ ತಂಡಗಳ ಭಾಗವಾಗಿದ್ದೇನೆ. ಆದರೆ ಇದು (ಆರ್‌ಸಿಬಿ) ನಾನು ಭಾಗವಾಗಿರುವ ಅತ್ಯುತ್ತಮ ಅಭಿಮಾನಿಗಳ ಬಳಗವಾಗಿದೆ. ಏಕೆಂದರೆ ನಾನು ಮೈದಾನದಲ್ಲಿ ಪಡೆದ ಹರ್ಷೋದ್ಗಾರಗಳು ನನಗೆ ಬೇರೆಲ್ಲಿಯೂ ಸಿಕ್ಕಿಲ್ಲ. ನಿಮ್ಮಂತಹ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಈ ವಯಸ್ಸಿನಲ್ಲಿ ನಾನು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇನೆ ಅದೆಲ್ಲವೂ ಸಿಕ್ಕಿದೆ,'' ಎಂದು ಕಾರ್ತಿಕ್ ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಹ್ಯಾಂಡಲ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

"ತುಂಬಾ ಧನ್ಯವಾದಗಳು, ನೀವು ನನ್ನ ಜೀವನದಲ್ಲಿ ಬಹಳಷ್ಟು ಅರ್ಥವನ್ನು ಹೊಂದಿದ್ದೀರಿ. ಏಕೆಂದರೆ ನೀವು ಜನರ ಮುಖದಲ್ಲಿ ನಗುವನ್ನು ಮೂಡಿಸಲು ಸಾಧ್ಯವಾದಾಗ, ನೀವು ಕ್ರೀಡೆಯನ್ನು ಆಡಲು ನಿಜವಾದ ಕಾರಣ ಅದು. ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ, ನಾನು ಈ ಫ್ರ್ಯಾಂಚೈಸ್ ಅಲ್ಲಿ ಕಂಡುಕೊಂಡಿದ್ದೇನೆ ಮತ್ತು ಅಕ್ಷರಶಃ ನನ್ನನ್ನು ತೆರೆದ ತೋಳುಗಳಿಂದ ಸ್ವೀಕರಿಸಿದ ಈ ಅಭಿಮಾನಿಗಳ ಬಳಗವನ್ನು ಹೊಂದಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ,'' ಎಂದು ತಿಳಿಸಿದರು.

ನನ್ನ ಬಗ್ಗೆ ಮಾತನಾಡುವ ರೀತಿಗೆ ಸಂತೋಷ

ನನ್ನ ಬಗ್ಗೆ ಮಾತನಾಡುವ ರೀತಿಗೆ ಸಂತೋಷ

"ನಾವು ತಂಡವಾಗಿ ಮಾಡಿದ್ದನ್ನು, ಸಾಧಿಸಿದ್ದನ್ನು ನಾನು ಅನೇಕ ರೀತಿಯಲ್ಲಿ ಆಶೀರ್ವದಿಸಿಕೊಂಡಿದ್ದೇನೆ. ಆದರೆ ಮುಖ್ಯವಾಗಿ, ನನ್ನ ಸಾಮಾಜಿಕ ಮಾಧ್ಯಮದಲ್ಲಿ Instagram, Facebook, Twitter, ಈ ಎಲ್ಲಾ ಮಾಧ್ಯಮಗಳಲ್ಲಿ ಬಂದಿರುವ ಅಭಿಮಾನಿಗಳು ಮತ್ತು ಅವರು ನನ್ನ ಬಗ್ಗೆ ಮಾತನಾಡುವ ರೀತಿಗೆ ಸಂತೋಷಗೊಂಡಿದ್ದೇನೆ. ನಿಮ್ಮೆಲ್ಲರನ್ನು ಪ್ರಸಕ್ತ ವರ್ಷದಲ್ಲಿ ಸ್ವಲ್ಪಮಟ್ಟಿಗೆ ನಿರಾಸೆಗೊಳಿಸಿದೆ ಎಂದು ನಾನು ಭಾವಿಸುತ್ತೇ,ನೆ ಆದರೆ ಮುಂದಿನ ಋತುವಿನಲ್ಲಿ ನಾವು ನಿಜವಾಗಿಯೂ ಪ್ರಯತ್ನಿಸುತ್ತೇವೆ," ಎಂದು ದಿನೇಶ್ ಕಾರ್ತಿಕ್ ಹೇಳಿದರು.

16 ಪಂದ್ಯಗಳಲ್ಲಿ ಅಸಾಧಾರಣ ಸರಾಸರಿ 55 ಮತ್ತು 183.33 ಸ್ಟ್ರೈಕ್-ರೇಟ್‌

16 ಪಂದ್ಯಗಳಲ್ಲಿ ಅಸಾಧಾರಣ ಸರಾಸರಿ 55 ಮತ್ತು 183.33 ಸ್ಟ್ರೈಕ್-ರೇಟ್‌

ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಲು ದಿನೇಶ್ ಕಾರ್ತಿಕ್ ಅನಿವಾರ್ಯವಾಗಿತ್ತು. ಅವರು ಈ ಋತುವಿನಲ್ಲಿ ತಂಡದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಆಗಾಗ ಅಂತಿಮ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಬರುತ್ತಿದ್ದರು ಎಂಬುದು ತಿಳಿದಿರಬೇಕಾದ ವಿಷಯ.

ನಿಜವಾಗಿಯೂ ದೊಡ್ಡ ಮೊತ್ತ ಗಳಿಸಲು ಸೀಮಿತ ಅವಕಾಶಗಳೊಂದಿಗೆ, ದಿನೇಶ್ ಕಾರ್ತಿಕ್ 16 ಪಂದ್ಯಗಳಲ್ಲಿ ಅಸಾಧಾರಣ ಸರಾಸರಿ 55 ಮತ್ತು 183.33 ಸ್ಟ್ರೈಕ್-ರೇಟ್‌ನಲ್ಲಿ 330 ರನ್ ಗಳಿಸಲು ಯಶಸ್ವಿಯಾದರು. ವಾಸ್ತವವಾಗಿ ಕಾರ್ತಿಕ್ ಅವರ ಸ್ಟ್ರೈಕ್-ರೇಟ್ ಈ ಋತುವಿನಲ್ಲಿ 200ಕ್ಕಿಂತ ಹೆಚ್ಚು ರನ್ ಗಳಿಸಿದ ಯಾವುದೇ ಆಟಗಾರನಿಗಿಂತ ಅತ್ಯುತ್ತಮವಾಗಿತ್ತು.

Story first published: Saturday, May 28, 2022, 16:38 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X