ಕೊಹ್ಲಿಯ 973 ರನ್‌ಗಳ ದಾಖಲೆ ಮುರಿಯಲು ನನಗೆ 10 ಮ್ಯಾಚ್ ಸಾಕು: ಯುಜುವೇಂದ್ರ ಚಾಹಲ್

ಚಾಹಲ್ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಹೇಳಿದ್ದೇನು | Oneindia Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿ ಮಿಂಚುಹರಿಸುತ್ತಿರುವ ಯುಜುವೇಂದ್ರ ಚಾಹಲ್ ವಿರಾಟ್ ಕೊಹ್ಲಿ ದಾಖಲೆ ಮೇಲೆ ಕಣ್ಣಿಟ್ಟಿದ್ದಾರಂತೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಅಸಾಧ್ಯ ದಾಖಲೆಯನ್ನು ಮುರಿಯಲು ತನ್ನಿಂದ ಸಾಧ್ಯ ಎಂಬ ಮಾತನ್ನು ಚಾಹಲ್ ಹೇಳಿದ್ದಾರೆ. ಅದು ಕೂಡ ಕೇವಲ ಹತ್ತು ಪಂದ್ಯಗಳಲ್ಲಿ ತಾನಿ ಈ ದಾಖಲೆಯನ್ನು ಮುರಿಯಲಿದ್ದೇನೆ ಎಂದಿದ್ದಾರೆ ಯುಜುವೇಂದ್ರ ಚಾಹಲ್.

ಯುಜುವೇಂದ್ರ ಚಾಹಲ್ ತಮಾಷೆ ವ್ಯಕ್ತಿತ್ವದ ಆಟಗಾರ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳಿಗೆ ಬಿಡಿಸಿ ಹೇಳಬೇಕಿಲ್ಲ. ತಾನು ಆರಂಭಿಕನಾಗಿ ಕಣಕ್ಕಿಳಿಯುತ್ತೇನೆ ಎಂಬ ಮಾತನ್ನು ಈ ಹಿಂದೆಯೂ ಅನೇಕ ಬಾರಿ ತಮಾಷೆಯಾಗಿ ಹೇಳಿದ್ದಾರೆ ಚಾಹಲ್. ಈಗ ರಾಜಸ್ಥಾನ್ ರಾಯಲ್ಸ್ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿಯೂ ಚಾಹಲ್ ಆರಂಭಿಕನಾಗಿ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಅವಕಾಶ ತನಗೆ ದೊರೆತಲ್ಲಿ ತಾನು ಜೋಸ್ ಬಟ್ಲರ್ ದಾಖಲೆಯನ್ನು ಮುರಿಯುವ ಜೊತೆಗೆ ವಿರಾಟ್ ಕೊಹ್ಲಿಯ ದಾಖಲೆಯನ್ನೂ ಮುರಿಯುವುದಾಗಿ ಹೇಳಿದ್ದಾರೆ.

ಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕಥಾಮಸ್‌ ಕಪ್‌: ಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಅದ್ಭುತ ಪ್ರದರ್ಶನ ನೀಡಿರುವ ಚಾಹಲ್

ಅದ್ಭುತ ಪ್ರದರ್ಶನ ನೀಡಿರುವ ಚಾಹಲ್

31ರ ಹರೆಯದ ಯುಜುವೇಂದ್ರ ಚಾಹಲ್ ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಬೌಲಿಂಗ್ ನಡೆಸಿ ಮಿಂಚಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡದಿಂದ ಬೇರ್ಪಟ್ಟು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿರುವ ಚಾಹಲ್ ಈ ಬಾರಿಯ ಆವೃತ್ತಿಯಲ್ಲಿ ಈವರೆಗೆ 13 ಪಂದ್ಯಗಳನ್ನು ಆಡಿದ್ದು 24 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

"ಕೊಹ್ಲಿಯ ದಾಖಲೆಯನ್ನೂ ಮುರಿಯುವೆ"

ತನಗೆ ಆರಂಭಿಕನಾಗಿ ಆಡುವ ಅವಕಾಶ ದೊರೆತರೆ ಜೋಸ್ ಬಟ್ಲರ್ ಈವರೆಗೆ 13 ಪಂದ್ಯಗಳಲ್ಲಿ ಸಿಡಿಸಿರುವ 627 ರನ್‌ಗಳ ದಾಖಲೆಯನ್ನು ಮುರಿಯಲಿದ್ದೇನೆ ಎಂದಿದ್ದಾರೆ ಚಾಹಲ್. ಅಲ್ಲದೆ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿಯ ದಾಖಲೆಯನ್ನು ಕೂಡ ತಾನು ಮುರಿಯಲಿದ್ದು ಅದಕ್ಕಾಗಿ ಕೇವಲ 10 ಇನ್ನಿಂಗ್ಸ್‌ಗಳನ್ನು ಮಾತ್ರವೇ ಬಳಸಿಕೊಳ್ಳಲಿದ್ದೇನೆ ಎಂದಿದ್ದಾರೆ.

ಚಾಹಲ್ ಹೇಳಿದ್ದೇನು

ಚಾಹಲ್ ಹೇಳಿದ್ದೇನು

"ನನಗೆ ಆರಂಭಿಕನಾಗಿ ಆಡುವ ಅವಕಾಶ ದೊರೆತರೆ ನಾನು ಎಲ್ಲಾ ದಾಖಲೆಯನ್ನು ಕೂಡ ಮುರಿಯಲಿದ್ದೇನೆ. ಕೇವಲ ಜೋಸ್ ಬಟ್ಲರ್ ಮಾತ್ರವಲ್ಲ. ವಿರಾಟ್ ಕೊಹ್ಲಿಯ ದಾಖಲೆಯನ್ನು ಮಾತ್ರವೇ ಉಳಿದುಕೊಳ್ಳುತ್ತದೆ. ನಾನು ಆ ದಾಖಲೆಯನ್ನು ಕೂಡ ಮುರಿಯಲಿದ್ದೇನೆ. ಆ ದಾಖಲೆಯನ್ನು ನಾನು ಕೇವಲ 10 ಇನ್ನಿಂಗ್ಸ್‌ಗಳಲ್ಲಿ ಮುರಿಯುತ್ತೇನೆ. ಅದಕ್ಕಾಗಿ ನಾನು ಪ್ರತಿ ಪಂದ್ಯದಲ್ಲಿಯೂ ಶತಕ ದಾಖಲಿಸಿದರೆ ಸಾಕಲ್ಲವೇ" ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ ಚಾಹಲ್.

ಕೊಹ್ಲಿ ದಾಖಲೆ ಈ ಆವೃತ್ತಿಯಲ್ಲಿಯೂ ಮುರಿಯುವುದು ಅಸಾಧ್ಯ

ಕೊಹ್ಲಿ ದಾಖಲೆ ಈ ಆವೃತ್ತಿಯಲ್ಲಿಯೂ ಮುರಿಯುವುದು ಅಸಾಧ್ಯ

ಇನ್ನು ಈ ಬಾರಿಯ ಆವೃತ್ತಿಯಲ್ಲಿ ಅದ್ಭುತ ಆರಂಭವನ್ನು ಪಡೆದ ಆರ್‌ಆರ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೊಹ್ಲಿಯ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ(973)ಯನ್ನು ಮುರಿಯಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಜೋಸ್ ಬಟ್ಲರ್ ವೈಫಲ್ಯವನ್ನು ಅನುಭವಿಸಿದ್ದು ಸದ್ಯಕ್ಕೆ ವಿರಾಟ್ ಕೊಹ್ಲಿಯ ದಾಖಲೆ ಮುರಿಯುವುದು ಅಸಾಧ್ಯ ಎನಿಸಿಕೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Monday, May 16, 2022, 15:35 [IST]
Other articles published on May 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X