ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಲಕ್ನೋ ಸೂಪರ್ ಜೈಂಟ್ಸ್‌ ತಂಡದ 3 ಸಂಭಾವ್ಯ ಮೊದಲ ಆಯ್ಕೆಯ ವಿದೇಶಿ ಆಟಗಾರರು

LSG

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿದ್ದು, ಇದೇ ಮೊದಲ ಬಾರಿಗೆ ಒಟ್ಟು 10 ತಂಡಗಳು ಟೂರ್ನಮೆಂಟ್‌ನಲ್ಲಿ ಸ್ಪರ್ಧೆ ನಡೆಸಲಿದೆ. ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್‌ ಒಂದೆಡೆಯಾದ್ರೆ, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿವೆ.

ಲಕ್ನೋ ಸೂಪರ್‌ ಜೈಂಟ್ ಬಲಿಷ್ಠ ಪಡೆಯನ್ನೇ ರಚಿಸಿದ್ದು, ಕೆ.ಎಲ್ ರಾಹುಲ್ (17 ಕೋಟಿ), ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೊಯ್ನಿಸ್ (9.2 ಕೋಟಿ), ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ (4 ಕೋಟಿ) ಅನ್ನು ಹರಾಜಿನಲ್ಲಿ ಖರೀದಿಸಿದೆ.

ಈ ಆಟಗಾರರ ಜೊತೆಗೆ 2021 ಐಪಿಎಲ್ ಸೀಸನ್‌ನಲ್ಲಿ ಎರಡನೇ ಗರಿಷ್ಠ ವಿಕೆಟ್ ಪಡೆದ ಪೇಸರ್ ಅವೇಶ್ ಖಾನ್‌ರನ್ನ 10 ಕೋಟಿ ಕೊಟ್ಟು ತನ್ನದಾಗಿಸಿಕೊಂಡಿದೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮತ್ತು ಕೃನಾಲ್ ಪಾಂಡ್ಯರನ್ನ ಕ್ರಮವಾಗಿ 8.75 ಕೋಟಿ ಮತ್ತು 8.25 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿದೆ.

ಇಷ್ಟಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ (6.25 ಕೋಟಿ), ಆಲ್‌ರೌಂಡರ್ ದೀಪಕ್ ಹೂಡ (5.75 ಕೋಟಿ) ನನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇಂಗ್ಲೆಂಡ್ ಪೇಸರ್ ಮಾರ್ಕ್‌ವುಡ್‌ಗೆ 7.50 ಕೋಟಿ ನೀಡಿದ್ದು, ಆದ್ರೆ ಭುಜದ ಗಾಯದಿಂದಾಗಿ ಮಾರ್ಕ್ ವುಡ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತನ್ನ ಸ್ಕ್ವಾಡ್‌ನಲ್ಲಿ ಹಲವಾರು ಆಯ್ಕೆಗಳನ್ನ ಹೊಂದಿದೆ. ಅವುಗಳಲ್ಲಿ ಈ ಮೂವರು ವಿದೇಶಿ ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

1) ಮಾರ್ಕಸ್ ಸ್ಟೋಯ್ನಿಸ್

1) ಮಾರ್ಕಸ್ ಸ್ಟೋಯ್ನಿಸ್

ಆಸ್ಟ್ರೇಲಿಯಾ ಮೂಲದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಲಕ್ನೋ ಸೂಪರ್ ಜೈಂಟ್ಸ್ ಹರಾಜಿನಲ್ಲಿ ಖರೀದಿಯಾದ ಉತ್ತಮ ಆಯ್ಕೆಗಳನ್ನ ಒಬ್ಬರಾಗಿದ್ದಾರೆ. ಈತ ಇನ್ನಿಂಗ್ಸ್‌ ಅನ್ನು ಓಪನಿಂಗ್ ಕೂಡ ಮಾಡಬಲ್ಲ ಮತ್ತು ಫಿನಿಷ್ ಕೂಡ ಮಾಡಬಲ್ಲ ಆಲ್‌ರೌಂಡರ್ ಆಗಿದ್ದಾನೆ.

ಬ್ಯಾಟಿಂಗ್‌ನಲ್ಲಿ ಅಬ್ಬರ ಮೆರೆಯುವ ಸ್ಟೋಯ್ನಿಸ್ ಎರಡು, ಮೂರು ಓವರ್‌ಗಳು ಬೌಲಿಂಗ್ ಕೂಡ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಕಳೆದ ಎರಡು ಸೀಸನ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿರುವ ಮಾರ್ಕಸ್ ಸ್ಟೋಯ್ನಿಸ್ 17 ಪಂದ್ಯಗಳಲ್ಲಿ 148.52 ಸ್ಟ್ರೈಕ್‌ರೇಟ್‌ನ್ಲಿ 352 ರನ್ ಕಲೆಹಾಕಿದ್ದಾನೆ. ಇದರ ಜೊತೆಗೆ 13 ವಿಕೆಟ್ ಕೂಡ ಉರುಳಿಸಿದ್ದಾನೆ.

2021ರ ಟಿ20 ವಿಶ್ವಕಪ್‌ನಲ್ಲಿ ಆಸೀಸ್ ಪರ ಸ್ಟೋಯ್ನಿಸ್ ಅಷ್ಟೇನು ಉತ್ತಮ ಆಟವಾಡಲಿಲ್ಲ. ಆದ್ರೆ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಓರ್ವ ಉತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಬಲ್ಲ ಆಟಗಾರನಾಗಿದ್ದಾನೆ.

IPL 2022 Tickets: ಆನ್‌ಲೈನ್‌ನಲ್ಲಿ ಐಪಿಎಲ್ ಟಿಕೆಟ್ ದರ ಎಷ್ಟಿದೆ? ಬುಕ್‌ ಮಾಡುವುದು ಹೇಗೆ?

2) ಕ್ವಿಂಟನ್ ಡಿಕಾಕ್

2) ಕ್ವಿಂಟನ್ ಡಿಕಾಕ್

ಲಕ್ನೋ ಸೂಪರ್ ಜೈಂಟ್ಸ್‌ ಪರ ಇಬ್ಬರು ವಿದೇಶಿ ಓಪನಿಂಗ್ ಬ್ಯಾಟ್ಸ್‌ಮನ್‌ಗಳು ಲಭ್ಯವಿದ್ದು, ವೆಸ್ಟ್‌ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಎವಿನ್ ಲಿವಿಡ್ (2 ಕೋಟಿ) ಬದಲಿಗೆ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್‌ರನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.

ನಾಯಕ ಕೆ.ಎಲ್ ರಾಹುಲ್ ಬಲಗೈ ಬ್ಯಾಟರ್ ಆಗಿರುವುದರಿಂದ, ಎಡಗೈ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಉತ್ತಮ ಆಯ್ಕೆಯಾಗಿದ್ದಾರೆ.

2019ರಿಂದ 2021ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಡಿಕಾಕ್ 2019 ಮತ್ತು 2020ರಲ್ಲಿ 500 ರನ್‌ಗಳನ್ನ ಕಲೆಹಾಕಿದ್ದಾರೆ. ಅದ್ರಲ್ಲೂ ಈ ಎರಡು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಟೈಟಲ್ ಗೆಲ್ಲಲು ಸಹಾಯಕಾರಿಯಾಗಿದ್ದಾರೆ.

ಆದ್ರೆ ಕಳೆದ ಸೀಸನ್‌ನಲ್ಲಿ ಕ್ವಿಂಟನ್ ಡಿಕಾಕ್ 11 ಪಂದ್ಯಗಳಲ್ಲಿ 116.01 ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 297 ರನ್ ಕಲೆಹಾಕಿದ್ದರು. ಇಷ್ಟಾದರೂ 246 ಟಿ೨೦ ಪಂದ್ಯಗಳನ್ನಾಡಿರುವ ಅನುಭವವಿರುವ ಡಿಕಾಕ್ 7324 ರನ್ ಕಲೆಹಾಕಿದ್ದಾರೆ. ಹೀಗಾಗಿ ವಿದೇಶಿ ಆಟಗಾರರ ಖೋಟಾದಲ್ಲಿ ಈತನಿಗೆ ಸ್ಥಾನ ಸಿಗುವುದು ಬಹುತೇಕ ಗ್ಯಾರೆಂಟಿಯಾಗಿದೆ.

ಐಪಿಎಲ್ 2022: ಈ 3 ಕಾರಣಗಳಿಂದ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಲಾಗದೇ ಟೂರ್ನಿಯಿಂದ ಹೊರಬೀಳಬಹುದು!

3) ಜೇಸನ್ ಹೋಲ್ಡರ್

3) ಜೇಸನ್ ಹೋಲ್ಡರ್

ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಲಕ್ನೋ ಸೂಪರ್ ಜಾಯಿಂಟ್ಸ್ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಲ್ಲ ವಿದೇಶಿ ಆಟಗಾರನಾಗಿದ್ದಾನೆ. ಈತನ ಬೌಲಿಂಗ್‌ನಲ್ಲಿ ಬ್ರಿಲಿಯಂಟ್ ವೇರಿಯೇಷನ್ ಅನ್ಉ ಕಾಣಬಹುದಾಗಿದ್ದು, ಬ್ಯಾಟಿಂಗ್‌ನಲ್ಲಿ ಅಬ್ಬರಿಸಬಲ್ಲ.

ಕಳೆದ ಕೆಲವು ಸೀಸನ್‌ಗಳಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಆಡಿರುವ ಹೋಲ್ಡರ್ IPL 2021ರ ಸೀಸನ್‌ನಲ್ಲಿ 8 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದಾರೆ. ಅದ್ರಲ್ಲೂ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ವಿಂಡೀಸ್ ಮಾಜಿ ನಾಯಕನಿಗಿದೆ.

30 ವರ್ಷದ ಜೇಸನ್ ಹೋಲ್ಡರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 15 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಲಕ್ನೋ ತಂಡವು ವಿದೇಶಿ ಆಟಗಾರನ ಸ್ಥಾನದಲ್ಲಿ ಜೇಸನ್‌ ಹೋಲ್ಡರ್‌ಗೆ ಸ್ಥಾನ ನೀಡುವುದು ಖಚಿತ.

Story first published: Friday, March 18, 2022, 18:15 [IST]
Other articles published on Mar 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X