ಐಪಿಎಲ್ 2022: ತನ್ನ ಮದುವೆಯನ್ನೇ ಮುಂದೂಡಿ ಆರ್‌ಸಿಬಿ ಸೇರಿಕೊಂಡಿದ್ದ ರಜತ್ ಪಾಟಿದಾರ್!

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಹೀರೋ ಆಗಿ ಮಿಂಚಿದ್ದಾರೆ ರಜತ್ ಪಾಟಿದಾರ್. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಯುವ ಬ್ಯಾಟರ್ ಭರ್ಜರಿ ಶತಕ ಸಿಡಿಸಿದ್ದಾರೆ. ಒತ್ತಡದ ಸಂದರ್ಭದಲ್ಲಿ ಬಂದ ಈ ಪ್ರದರ್ಶನಕ್ಕೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಬಾರಿಯ ಹರಾಜಿನಲ್ಲಿ ಮೊದಲಿಗೆ ಯಾವುದೇ ತಂಡಕ್ಕೂ ಬೇಡವಾಗಿದ್ದ ರಜತ್ ಪಾಟಿದಾರ್ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ನಂತರ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡವನ್ನು ಸೇರಿಕೊಂಡ ಪಾಟಿದಾರ್ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದಿದ್ದು ಮಾತ್ರವಲ್ಲದೆ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

IPL 2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ RCB ಹೀರೋ ಆಗಿದ್ದೇಗೆ?IPL 2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ RCB ಹೀರೋ ಆಗಿದ್ದೇಗೆ?

ಆದರೆ ಈ ಬಾರಿ ಆರ್‌ಸಿಬಿ ತಂಡಕ್ಕೆ ತಡವಾಗಿ ಸೇರ್ಪಡೆಯಾದ ರಜತ್ ಪಾಟಿದಾರ್ ಈ ಟೂರ್ನಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ನಿಗದಿಯಾಗಿದ್ದ ತಮ್ಮ ಮದುವೆಯನ್ನೇ ಮುಂದೂಡಿದ್ದಾರೆ ಎಂಬ ಕುತೂಹಲಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.

ಮೇ ತಿಂಗಳಿನಲ್ಲಿ ನಿಗದಿಯಾಗಿತ್ತು ಪಾಟಿದಾರ್ ಮದುವೆ

ಮೇ ತಿಂಗಳಿನಲ್ಲಿ ನಿಗದಿಯಾಗಿತ್ತು ಪಾಟಿದಾರ್ ಮದುವೆ

ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಜತ್ ಪಾಟಿದಾರ್ ಯಾವುದೇ ತಂಡಕ್ಕೆ ಹರಾಜಾಗಿರಲಿಲ್ಲ. ಹೀಗಾಗಿ ನೇ ತಿಂಗಳಿನಲ್ಲಿ ತಮ್ಮ ಮದುವೆ ಕಾರ್ಯಕ್ರಮವನ್ನು ನಿಗದಿಗೊಳಿಸಿದ್ದರು ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ನಂತರ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡದಿಂದ ಕರೆ ಬಂದ ಕಾರಣ ತಮ್ಮ ಮದುವೆಯನ್ನು ಮುಂದೂಡಿ ಐಪಿಎಲ್ ವೇದಿಕೆಯನ್ನು ಬಳಸಿಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.

ಜುಲೈನಲ್ಲಿ ಸಪ್ತಪದಿ ತುಳಿಯಲಿದ್ದಾರೆ ರಜತ್

ಜುಲೈನಲ್ಲಿ ಸಪ್ತಪದಿ ತುಳಿಯಲಿದ್ದಾರೆ ರಜತ್

ರಜತ್ ಪಾಟಿದಾರ್ ತಂದೆ ಮನೋಹರ್ ಪಾಟಿದಾರ್ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿರುವ ಪತ್ರಿಕೆ ಮೇ 9ರಂದು ರಜತ್ ಪಾಟಿದಾರ್ ಮದುವೆ ನಿಗದಿಯಾಗಿತ್ತು ಎಂದು ವರದಿ ಮಾಡಿದೆ. "ನಾವು ಈ ಮದುವೆಯನ್ನು ಅದ್ದೂರಿಯಾಗಿ ಆಯೋಜನೆ ಮಾಡಿರಲಿಲ್ಲ. ಹಾಗಾಗಿ ನಾವು ಆಮಂತ್ರಣ ಪತ್ರಿಕೆಗಳನ್ನು ಕೂಡ ಪ್ರಿಂಟ್ ಮಾಡಿರಲಿಲ್ಲ. ಕೆಲವೇ ಜನರಿಗಾಗಿ ಹೋಟೆಲ್‌ಅನ್ನು ಬುಕ್ ಮಾಡಿ ಮದುವೆಗೆ ಯೋಜನೆ ಹಾಕಿಕೊಂಡಿದ್ದೆವು" ಎಂದಿದ್ದಾರೆ ರಜತ್ ಪಾಟಿದಾರ್ ತಂದೆ ಮನೋಹರ್ ಪಾಟಿದಾರ್. ಇನ್ನು ಐಪಿಎಲ್ ಮುಕ್ತಾಯದ ಬಳಿಕ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯ ಇರುವ ಕಾರಣ ಜುಲೈ ತಿಂಗಳಿನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ಪಾಟಿದಾರ್ ತಂದೆ ತಿಳಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಪಾಟಿದಾರ್

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಪಾಟಿದಾರ್

ಇನ್ನು ಕಳೆದ ಆವೃತ್ತಿಯಲ್ಲಿಯೂ ಪಾಟಿದಾರ್ ಆರ್‌ಸಿಬಿ ತಂಡದ ಭಾಗವಾಗಿದ್ದರು. 2021ರ ಆವೃತ್ತಿಯಲ್ಲಿ 4 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದ ಪಾಟಿದಾರ್ 71 ರನ್‌ಗಳನ್ನು ಮಾತ್ರವೇ ಗಳಿಸಿಕೊಂಡಿದ್ದರು. ಹೀಗಾಗಿ ಅವರನ್ನು ಹರಾಜಿನಲ್ಲಿ ಮತ್ತೆ ಸೇರ್ಪಡೆಗೊಳಿಸುವ ಮನಸ್ಸು ಮಾಡಿರಲಿಲ್ಲ ಆರ್‌ಸಿಬಿ ಮ್ಯಾನೇಜ್‌ಮೆಂಟ್. ಆದರೆ ಆರ್‌ಸಿಬಿ ಹರಾಜಿನಲ್ಲಿ ಸೇರ್ಪಡೆಗೊಳಿಸಿದ್ದ ನವನೀತ್ ಸಿಸೋಡಿಯಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ರಜತ್ ಪಾಟಿದಾರ್ ಅವರನ್ನು ಬದಲಿ ಆಟಗಾರನಾಗಿ ಮೂಲಬೆಲೆ 20 ಲಕ್ಷಕ್ಕೆ ಸೇರ್ಪಡೆಗೊಳಿಸಿತು ಆರ್‌ಸಿಬಿ.

ಇವತ್ತು ಈ ಆಟಗಾರನ ವಿಕೆಟ್ ಬೇಗ ಪಡ್ಕೊಂಡ್ರೆ RCB ಫೈನಲ್ ಗೇರೋದು ಗ್ಯಾರೆಂಟಿ | #cricket | Oneindia Kannada
ರಜತ್ ಪಾಟಿದಾರ್ ಆಟಕ್ಕೆ ತಲೆದೂಗಿದ ಕೊಹ್ಲಿ

ರಜತ್ ಪಾಟಿದಾರ್ ಆಟಕ್ಕೆ ತಲೆದೂಗಿದ ಕೊಹ್ಲಿ

ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನಿಡಿದ ರಜತ್ ಪಾಟಿದಾರ್ ಬ್ಯಾಟಿಂಗ್ ಬಗ್ಗೆ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಐಪಿಎಲ್‌ನಲ್ಲಿ ಒತ್ತಡದ ಸಂದರ್ಭದಲ್ಲಿ ನಾನು ಕಂಡ ಅತ್ಯುತ್ತಮ ಪ್ರದರ್ಶನಗಳಲ್ಲಿ ಇದು ಒಂದು. ಈ ಇನ್ನಿಂಗ್ಸ್‌ನ ಅದ್ಭುತ ಹೊಡೆತಗಳು ಬ್ಯಾಟಿಂಗನ್ನು ಮತ್ತೊಂದು ಹಂತಕ್ಕೇರಿಸಿದೆ" ಎಂದು ವಿರಾಟ್ ಕೊಹ್ಲಿ ರಜತ್ ಪಾಟಿದಾರ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 26, 2022, 17:56 [IST]
Other articles published on May 26, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X