ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇರೆ ತಂಡಗಳಿಗೆ ಖರೀದಿಸಲು ಅವಕಾಶವಿತ್ತು ಆದರೆ..; RCB ನಿಷ್ಠೆ ಬಗ್ಗೆ ಮನಬಿಚ್ಚಿ ಮಾತಾಡಿದ ವಿರಾಟ್ ಕೊಹ್ಲಿ

IPL 2022: RCBs Virat Kohli reveals why he rejected offers from other teams

ವಿರಾಟ್ ಕೊಹ್ಲಿ, ಈ ಹೆಸರು ಕೇಳಿದರೆ ಸಾಕು ಇಡೀ ಕ್ರಿಕೆಟ್ ಜಗತ್ತು ಎದ್ದು ನಿಲ್ಲುತ್ತದೆ. ಕಳೆದ 15 ವರ್ಷಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ತಾರೆಯಾಗಿ ಮಿನುಗುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನ ಹಲವು ದಾಖಲೆಗಳಿಗೆ ಸರದಾರನಾಗಿದ್ದು, ಪ್ರೀತಿಯ ಅಭಿಮಾನಿಗಳಿಂದ 'ರನ್ ಮಷಿನ್', 'ಕಿಂಗ್ ಕೊಹ್ಲಿ' ಎಂದು ಕರೆಸಿಕೊಂಡಿದ್ದಾರೆ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಎಲ್ಲಾ 15 ಸೀಸನ್‌ಗಳನ್ನು ಒಂದೇ ತಂಡಕ್ಕಾಗಿ ಆಡಿದ ಏಕೈಕ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿ(RCB) ತಮ್ಮ ನಿಷ್ಠೆಯನ್ನು ತೋರಿದ್ದಾರೆ.

2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಆರ್‌ಸಿಬಿಯ ಭಾಗವಾಗಿರುವ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಮನದಾಳ ಹಂಚಿಕೊಂಡಿದ್ದು, "ಅನೇಕ ಫ್ರಾಂಚೈಸಿಗಳಿಗೆ ತಮ್ಮನ್ನು ಆಯ್ಕೆ ಮಾಡಲು ಅವಕಾಶವಿತ್ತು. ಆದರೆ ನನ್ನ ವೃತ್ತಿಜೀವನದ ಆರಂಭದಲ್ಲಿ ಯಾರೂ ಬೆಂಬಲಿಸಲಿಲ್ಲ ಮತ್ತು ನನ್ನ ಸಾಮರ್ಥ್ಯದಲ್ಲಿ ಆರ್‌ಸಿಬಿ ಇರಿಸಿದ ನಂಬಿಕೆಯನ್ನು ಯಾರೂ ಇರಿಸಲಿಲ್ಲ,'' ಎಂದು ಸ್ವತಃ ಅವರೇ ಹೇಳದ್ದಾರೆ.

ಯಾರೂ ನನ್ನನ್ನು ಬೆಂಬಲಿಸಲಿಲ್ಲ

ಯಾರೂ ನನ್ನನ್ನು ಬೆಂಬಲಿಸಲಿಲ್ಲ

"ಮೊದಲ ಮೂರು ವರ್ಷಗಳಲ್ಲಿ ಆರ್‌ಸಿಬಿ ಫ್ರಾಂಚೈಸಿ ನನಗೆ ಏನು ಅವಕಾಶಗಳನ್ನು ನೀಡಿದೆ ಮತ್ತು ಅದು ಅತ್ಯಂತ ವಿಶೇಷವಾದ ವಿಷಯವಾಗಿದೆ. ಏಕೆಂದರೆ ನಾನು ಹೇಳಿದಂತೆ ಅನೇಕ ತಂಡಗಳಿಗೆ ಅವಕಾಶವಿತ್ತು, ಆದರೆ ಅವರು ನನ್ನನ್ನು ಬೆಂಬಲಿಸಲಿಲ್ಲ, ಅವರು ನನ್ನನ್ನು ನಂಬಲಿಲ್ಲ," ಎಂದು ಸ್ಟಾರ್ ಸ್ಪೋರ್ಟ್ಸ್‌ನ ಆರ್‌ಸಿಬಿಯ ಫ್ರಾಂಚೈಸಿ ಶೋನಲ್ಲಿ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದರು.

2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್)ನಿಂದ ಭಾರತದ ಈ U19 ತಾರೆಯನ್ನು ಆಯ್ಕೆ ಮಾಡುವ ಮೊದಲ ಅವಕಾಶ ಹೊಂದಿತ್ತು. ಆದರೆ ಅವರ ಆಯ್ಕೆ ಆಗಿದ್ದು, ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್. ಕೆಲವೇ ತಿಂಗಳುಗಳ ಹಿಂದೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಎರಡನೇ ಬಾರಿಗೆ U19 ವಿಶ್ವಕಪ್ ಎತ್ತಿಹಿಡಿಯಲು ಕಾರಣರಾದ ಸ್ಥಳೀಯ ಹುಡುಗ ಮತ್ತು ತಂಡದ ನಾಯಕ ಕೊಹ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಆಯ್ಕೆ ಆಗಿರಲಿಲ್ಲ.

ಎಂದೆಂದಿಗೂ ಆರ್‌ಸಿಬಿ ಆಟಗಾರನಾಗಿ ಉಳಿಯುತ್ತೇನೆ

ಎಂದೆಂದಿಗೂ ಆರ್‌ಸಿಬಿ ಆಟಗಾರನಾಗಿ ಉಳಿಯುತ್ತೇನೆ

ನಂತರ ಯುವ ಆಟಗಾರನಾಗಿದ್ದ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ಆಯ್ಕೆ ಮಾಡಿತು ಮತ್ತು ಅಂದಿನಿಂದ ಬಲಗೈ ಬ್ಯಾಟ್ಸ್‌ಮನ್ ದಾಖಲೆಯ 217 ಐಪಿಎಲ್ ಪಂದ್ಯಗಳಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದಾರೆ, ಐಪಿಎಲ್‌ನಲ್ಲಿ 6469 ರನ್ ಗಳಿಸಿದ್ದು, ಇದು ಒಂದೇ ತಂಡದ ಪರವಾಗಿ ಯಾವುದೇ ಆಟಗಾರ ಮಾಡದ ಸಾಧನೆ ಮಾಡಿದ್ದಾರೆ.

ಕೊಹ್ಲಿಯನ್ನು 2013ರಲ್ಲಿ ಆರ್‌ಸಿಬಿಯ ಪೂರ್ಣಾವಧಿಯ ನಾಯಕ ಎಂದು ನೇಮಿಸಲಾಯಿತು ಮತ್ತು ಐಪಿಎಲ್ 2021ರವರೆಗೆ ತಂಡವನ್ನು ಮುನ್ನಡೆಸಿದರು. ಕೊಹ್ಲಿ 140 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದು, ಅದರಲ್ಲಿ 66 ಗೆಲುವು ಮತ್ತು 70 ಸೋಲು ಕಂಡಿದ್ದಾರೆ. IPL 2022ರ ಮೆಗಾ ಹರಾಜಿಗೂ ಮೊದಲು ಮತ್ತು RCBಯಿಂದ ಉಳಿಸಿಕೊಳ್ಳುವ ಮುನ್ನ, ವಿರಾಟ್ ಕೊಹ್ಲಿ ತಾನು ಎಂದೆಂದಿಗೂ ಆರ್‌ಸಿಬಿ ಆಟಗಾರನಾಗಿ ಉಳಿಯುತ್ತೇನೆ ಎಂದು ಘೋಷಿಸಿದರು.

ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ

ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ

"ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬ ಬಗ್ಗೆ ಯೋಚಿಸಿದೆ. ಮೆಗಾ ಹರಾಜಿಗೆ ನನ್ನ ಹೆಸರು ಹಾಕಲು ನನ್ನನ್ನು ಹಲವು ಬಾರಿ ಸಂಪರ್ಕಿಸಲಾಗಿತ್ತು. ನಂತರ ನಾನು ಯೋಚಿಸಿದ್ದು, ಪ್ರತಿಯೊಬ್ಬರಿಗೂ ಅವರು ಬದುಕುವ X ಸಂಖ್ಯೆಯ ವರ್ಷ ಬದುಕುತ್ತಾರೆ ಮತ್ತು ನಂತರ ಸಾಯುತ್ತಾರೆ ಆದರೆ ಜೀವನ ಮುಂದುವರಿಯುತ್ತದೆ ಎಂದು''.

"ಟ್ರೋಫಿಗಳನ್ನು ಗೆದ್ದ ಅನೇಕ ಮಹಾನ್ ವ್ಯಕ್ತಿಗಳು ಇರುತ್ತಿದ್ದರು. 'ಓಹ್ ಅವನು ಐಪಿಎಲ್ ಚಾಂಪಿಯನ್ ಅಥವಾ ಅವನು ವಿಶ್ವಕಪ್ ಚಾಂಪಿಯನ್' ಎಂದು ಡ್ರೆಸ್ಸಿಂಗ್ ರೂಂನಲ್ಲಿ ಯಾರೂ ನಿಮ್ಮನ್ನು ಹಾಗೆ ಸಂಬೋಧಿಸುವುದಿಲ್ಲ. ನೀವು ಒಳ್ಳೆಯವರಾಗಿದ್ದರೆ, ಜನ ನಿಮ್ಮನ್ನು ಇಷ್ಟಪಡುತ್ತಾರೆ. ನೀವು ಕೆಟ್ಟವರಾಗಿದ್ದರೆ, ಅವರು ನಿಮ್ಮಿಂದ ದೂರವಿರುತ್ತಾರೆ ಮತ್ತು ಅಂತಿಮವಾಗಿ ಅದುವೇ ಜೀವನ,'' ಎಂದು ವಿರಾಟ್ ಕೊಹ್ಲಿ ಹೇಳಿದ್ದು, ಆರ್‌ಸಿಬಿ ಫ್ರಾಂಚೈಸಿಯೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುವುದಾಗಿ ತಿಳಿಸಿದರು.

ಟ್ರೋಫಿ ಗೆಲ್ಲದ ಬಗ್ಗೆ ಯಾವುದೇ ವಿಷಾದವಿಲ್ಲ

ಟ್ರೋಫಿ ಗೆಲ್ಲದ ಬಗ್ಗೆ ಯಾವುದೇ ವಿಷಾದವಿಲ್ಲ

"ನಾನು ನನ್ನ ಜೀವನವನ್ನು ಹೇಗೆ ಅನುಸರಿಸುತ್ತೇನೆ ಎಂಬುದಕ್ಕೆ ಆರ್‌ಸಿಬಿಯೊಂದಿಗಿನ ನಿಷ್ಠೆಯು ನನಗೆ ತುಂಬಾ ದೊಡ್ಡದಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿರುವ ಐದು ಜನರು ಓಹ್ ಅಂತಿಮವಾಗಿ ನೀವು xyz ಪ್ರಾಂಚೈಸಿ ಜೊತೆ ಸೇರಿ ಐಪಿಎಲ್ ಅನ್ನು ಗೆಲ್ಲುತ್ತೀರಿ ಎಂದು ಹೇಳುತ್ತಾರೆ. ಇದನ್ನು ಕೇಳಿ ನೀವು ಐದು ನಿಮಿಷಗಳ ಕಾಲ ಚೆನ್ನಾಗಿರುತ್ತೀರಿ, ಆದರೆ ಆರನೇ ನಿಮಿಷದಲ್ಲಿ ನೀವು ಜೀವನದ ಇತರ ಕೆಲವು ಸಮಸ್ಯೆಗಳಿಂದ ದುಃಖಿತರಾಗಬಹುದು. ಹಾಗಾಗಿ ಇದು ನನಗೆ ಪ್ರಪಂಚದ ಅಂತ್ಯವಲ್ಲ,"ವೆಂದರು.

ಐಪಿಎಲ್‌ನಲ್ಲಿ 15 ವರ್ಷಗಳ ಕಾಲ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದರೂ, ಟ್ರೋಫಿ ಮಾತ್ರ ವಿರಾಟ್ ಕೊಹ್ಲಿಯ ಕೈಯಿಂದ ದೂರ ಉಳಿದಿದೆ. ಆದರೆ ಶ್ರೇಷ್ಠ ಕ್ರಿಕೆಟಿಗನಿಗೆ ಅದರ ಬಗ್ಗೆ ಯಾವುದೇ ವಿಷಾದವಿರುವುದಿಲ್ಲ. ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನು ಮತ್ತು ಅನುಷ್ಕಾ ಹಲವು ವಿಷಯಗಳ ಕುರಿತು ಚರ್ಚಿಸುವ ವೇಳೆ ಮೂರನೇ ವ್ಯಕ್ತಿಯ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಬೇರೆ ಯಾವುದೂ ಇಲ್ಲ ಅಥವಾ ಯಾರ ಅಭಿಪ್ರಾಯವೂ ಮುಖ್ಯವಲ್ಲ ಎಂದು ಅವರು ಹೇಳಿದರು.

Story first published: Thursday, May 5, 2022, 12:24 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X