ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡವನ್ನು ಕಟ್ಟುವುದು ಹೀಗಲ್ಲ: ಮಯಾಂಕ್ ಅಗರ್ವಾಲ್ ಕೈಬಿಟ್ಟ ಪಂಜಾಬ್ ಕಿಂಗ್ಸ್ ನಡೆಗೆ ದೊಡ್ಡ ಗಣೇಶ್ ಕಿಡಿ

IPL 2023: Dodda Ganesh express his disappointment on Punjab Kings for Mayank Agarwal’s Non-Retention

16ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಡಿಸೆಂಬರ್ 23ರಂದು ಮುನ್ನ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೆ ಮುನ್ನ ಆಟಗಾರರ ಬಿಡುಗಡೆ ಹಾಗೂ ರೀಟೆನ್ಶನ್ ಪ್ರಕ್ರಿಯೆ ನಡೆದಿದೆ. ನವೆಂಬರ್ 15 ಆಟಗಾರರ ರೀಟೆನ್ಶನ್ ಹಾಗೂ ಬಿಡುಗಡೆ ಪ್ರಕ್ರಿಯೆಗೆ ಅಂತಿಮ ದಿನವಾಗಿದ್ದು ಎಲ್ಲಾ ತಂಡಗಳ ಯಾವೆಲ್ಲಾ ಆಟಗಾರರು ಹರಾಜಿಗೆ ಬಿಡುಗಡೆಯಾಗಿದ್ದಾರೆ ಹಾಗೂ ರೀಟೈನ್ ಆಗಿದ್ದಾರೆ ಎಂಬುದು ಈಗ ಅಧಿಕೃತವಾಗಿದೆ.

ಪೈಕಿ ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು ನಾಯಕ ಮಯಾಂಕ್ ಅಗರ್ವಾಲ್ ಅವರನ್ನೇ ತಂಡದಿಂದ ಕೈಬಿಟ್ಟಿದೆ. ಶಿಖರ್ ಧವನ್ ಅವರನ್ನು ಮುಂದಿನ ಆವೃತ್ತಿಗೆ ನಾಯಕನನ್ನಾಗಿ ಪಂಜಾಬ್ ಕಿಂಗ್ಸ್ ನೇಮಕ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಈ ನಿರ್ಧಾರದ ಬಗ್ಗೆ ಸಾಕಷ್ಟು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕಿಡಿಕಾರಿದ್ದಾರೆ.

IND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠIND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠ

ನಾಯಕನಾಗಿ ಮಿಂಚಲು ವಿಪಲವಾದ ಮಯಾಂಕ್ ಅಗರ್ವಾಲ್

ನಾಯಕನಾಗಿ ಮಿಂಚಲು ವಿಪಲವಾದ ಮಯಾಂಕ್ ಅಗರ್ವಾಲ್

ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಮಯಾಂಕ್ ಅಗರ್ವಾಲ್ ತಂಡದ ಪರ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದರು. 13 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್ ಕೇವಲ 196 ರನ್‌ ಗಳಿಸಲಷ್ಟೇ ಶಕ್ತವಾಗಿದ್ದರು. ಇನ್ನು ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಮಯಾಂಕ್ ಅಗರ್ವಾಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ನಿರ್ಧಾರ ಕೂಡ ಸೂಕ್ತ ನಿರ್ಧಾರ ಎನಿಸಿರಲಿಲ್ಲ. ಇದು ಫಲಿತಾಂಶದ ಮೇಲೂ ಪರಿಣಾಮ ಬಿದ್ದಿತ್ತು.

ದೊಡ್ಡ ಗಣೇಶ್ ಅಸಮಾಧಾನ

ದೊಡ್ಡ ಗಣೇಶ್ ಅಸಮಾಧಾನ

ಇನ್ನು ಪಂಜಾಬ್ ಕಿಂಗ್ಸ್ ತಂಡ ನಾಯಕತ್ವದಿಂದ ಮಯಾಂಕ್ ಅಗರ್ವಾಲ್ ಅವರನ್ನು ಕೆಳಗಿಳಿಸಿ ತಂಡದಿಂದಲೇ ಕೈಬಿಟ್ಟ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕಿಡಿಕಾರಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ದೊಡ್ಡ ಗಣೇಶ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಪಂಜಾಬ್ ಪರವಾಗಿ ಮಯಾಂಕ್ ಅಗರ್ವಾಲ್ ನಾಲ್ಕು ಅದ್ಬುತ ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಒಂದು ಕೆಟ್ಟ ಆವೃತ್ತಿಯಿಂದಾಗಿ ಅವರು ತಂಡದಿಂದಲೇ ಹೊರಬಿದ್ದಿದ್ದಾರೆ. ಈ ಕಾರಣದಿಂದಾಗಿಯೇ ಸಿಎಸ್‌ಕೆ ಹಾಗೂ ಎಂಐ ತಂಡಗಳು ಭಿನ್ನ ಎನಿಸಿಕೊಳ್ಳುವುದು. ತಮ್ಮಲ್ಲಿರುವ ಆಟಗಾರರನ್ನು ಬಳಸಿಕೊಂಡೇ ಈ ಎರಡು ಯಶಸ್ವಿ ತಂಡಗಳು ತಂಡವನ್ನು ಕಟ್ಟುವುದು ನಿಜಕ್ಕೂ ವಿಶೇಷ" ಎಂದಿದ್ದಾರೆ ದೊಡ್ಡ ಗಣೇಶ್.

ದೊಡ್ಡ ಮೊತ್ತದೊಂದಿಗೆ ಹರಾಜಗಿಳಿಯಲಿದೆ ಪಂಜಾಬ್

ದೊಡ್ಡ ಮೊತ್ತದೊಂದಿಗೆ ಹರಾಜಗಿಳಿಯಲಿದೆ ಪಂಜಾಬ್

ಇನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಿನ ಮಿನಿ ಹರಾಜು ಪ್ರಕ್ರಿಯೆಗೆ ದೊಡ್ಡ ಮೊತ್ತದ ಪರ್ಸ್‌ನೊಂದಿಗೆ ಸಿದ್ಧವಾಗಿದೆ. 32.2 ಕೋಟಿಯಷ್ಟು ಮೊತ್ತವನ್ನು ಪಂಜಾಬ್ ಕಿಂಗ್ಸ್ ತಂಡ ಹೊಂದಿದ್ದು ಮೂರು ವಿದೇಶಿ ಆಟಗಾರರ ಸ್ಥಾನ ಬಾಕಿಯಿದೆ. ಹೀಗಾಗಿ ಈ ಮುಂಬರುವ ಐಪಿಎಲ್‌ನಲ್ಲಿ ಸಂಪೂರ್ಣ ಹೊಸತನದೊಂದಿಗೆ ಕಣಕ್ಕಿಳಿಯಲಿದೆ. ಶಿಖರ್ ಧವನ್ ನಾಯಕತ್ವದಲ್ಲಿ ತಂಡ ಬಲಿಷ್ಠವಾಗಿ ಕಣಕ್ಕಿಳಿಯುವ ವಿಶ್ವಾಸದಲ್ಲಿದೆ. ಐಪಿಎಲ್‌ನಲ್ಲಿ ಈವರೆಗೆ ಟ್ರೋಫಿ ಗೆಲ್ಲಲು ವಿಫಲವಾಗಿರುವ ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ಕೂಡ ಒಂದಾಗಿದ್ದು ಮುಂದಿನ ಐಪಿಎಲ್‌ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, November 16, 2022, 17:03 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X