ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023 ಹರಾಜು: ವಿದೇಶದ ಈ ನಗರದಲ್ಲಿ ಐಪಿಎಲ್ ಮಿನಿ ಹರಾಜು ನಡೆಸಲು ಯೋಜನೆ?

IPL 2023: IPL Mini Auction Likely To Be Held In Istanbul, Bengaluru Also In The Race

ಡಿಸೆಂಬರ್ 16ರಂದು ಐಪಿಎಲ್ 2023 ಆವೃತ್ತಿಯ ಮಿನಿ ಹರಾಜು ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಈ ಬಾರಿ ಮಿನಿ ಹರಾಜು ವಿದೇಶದಲ್ಲಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಸ್ತಾನ್‌ಬುಲ್ ಅನ್ನು ಸಂಭಾವ್ಯ ಸ್ಥಳವೆಂದು ಗುರುತಿಸುವುದರೊಂದಿಗೆ ಮೊದಲ ಬಾರಿಗೆ ಸಾಗರೋತ್ತರ ಹರಾಜನ್ನು ಯೋಜಿಸುತ್ತಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಸಹ ಪರಿಗಣಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಐಪಿಎಲ್ ಹರಾಜು ಡಿಸೆಂಬರ್ 16 ರಂದು ಬಿಸಿಸಿಐ ಮತ್ತು ಐಪಿಎಲ್ ಜಿಸಿಯೊಂದಿಗೆ 10 ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಪಾಕ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಆಟಗಾರನನ್ನು ಮುಂದಿನ ಪಂದ್ಯದಿಂದ ಹೊರಗಿಡಲು ಗವಾಸ್ಕರ್ ಸಲಹೆಪಾಕ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಆಟಗಾರನನ್ನು ಮುಂದಿನ ಪಂದ್ಯದಿಂದ ಹೊರಗಿಡಲು ಗವಾಸ್ಕರ್ ಸಲಹೆ

ಐಪಿಎಲ್ 16 ರ ಕಿರು-ಹರಾಜು ಇಸ್ತಾನ್‌ಬುಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಕ್ರಿಕ್‌ಬುಜ್ ವರದಿ ಮಾಡಿದೆ. ಟರ್ಕಿಯ ರಾಜಧಾನಿಯಾಗಿರುವ ಇಸ್ತಾನ್‌ಬುಲ್ ಅಧಿಕಾರಿಗಳ ಮೊದಲ ಆಯ್ಕೆಯಾಗಿದೆ. ಐಪಿಎಲ್ ಅಧ್ಯಕ್ಷರಾಗಿ ಅರುಣ್ ಸಿಂಗ್ ಧುಮಾಲ್ ಆಯ್ಕೆಯಾಗಿದ್ದಾರೆ. ಈ ಬಾರಿ ಐಪಿಎಲ್ ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರಿಕೆಯನ್ನು Viacom 18 ಪಡೆದುಕೊಂಡಿದೆ. ಬಿಸಿಸಿಐ ಟರ್ಕಿಯಲ್ಲಿ ಮಿನಿ ಹರಾಜು ನಡೆಸುವ ಬಗ್ಗೆ ಪ್ರಾಂಚೈಸಿಗಳ ಆಯ್ಕೆಗೆ ಬಿಟ್ಟಿದೆ. ನವೆಂಬರ್ ಮೊದಲ ವಾರದಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ಫ್ರಾಂಚೈಸಿಗಳ ಜೊತೆ ಚರ್ಚೆ ಬಳಿಕ ಅಂತಿಮ ತೀರ್ಮಾನ

ಫ್ರಾಂಚೈಸಿಗಳ ಜೊತೆ ಚರ್ಚೆ ಬಳಿಕ ಅಂತಿಮ ತೀರ್ಮಾನ

ಬಿಸಿಸಿಐ ಮತ್ತು ಐಪಿಎಲ್ ಅಧಿಕಾರಿಗಳು ಎಲ್ಲಾ ಫ್ರಾಂಚೈಸಿಗಳೊಂದಿಗೆ ಸ್ಥಳದ ಕುರಿತು ಮಾತುಕತೆ ನಡೆಸುತ್ತಿದ್ದು, ನಿಯಮಿತ ಆತಿಥೇಯ ಬೆಂಗಳೂರು ಕೂಡ ಸ್ಪರ್ಧೆಯಲ್ಲಿದೆ. ಐಪಿಎಲ್ ಮತ್ತು ಹರಾಜು ಜಾಗತಿಕವಾಗಿ ಭಾರಿ ಜನಪ್ರಿಯತೆಯನ್ನು ಹೊಂದಿರುವುದರಿಂದ, ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಪರವಾಗಿದ್ದಾರೆ. ಆದರೆ, ಹಿಂದೆ ಫ್ರಾಂಚೈಸಿಗಳು ಇದು ದುಬಾರಿ ವೆಚ್ಚದ ಪ್ರಕ್ರಿಯೆ ಎಂದು ವಾದಿಸಿದ್ದಾರೆ.

ಈ ಮೊದಲು, ಸಿಂಗಾಪುರದಲ್ಲಿ ಐಪಿಎಲ್ ಹರಾಜು ನಡೆಸಲಾಯಿತು, ಲಂಡನ್ ಕೂಡ ಹಿಂದೆ ಹರಾಜಿನ ಸ್ಥಳವಾಗಿದೆ. ಆದಾಗ್ಯೂ, ಮಾಧ್ಯಮ ಹಕ್ಕುಗಳು ಸಾವಿರಾರು ಕೋಟಿ ರುಪಾಯಿಗೆ ಮಾರಾಟವಾಗುವುದರೊಂದಿಗೆ ಇತ್ತೀಚೆಗೆ ಐಪಿಎಲ್ ಕೇಂದ್ರ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಆದ್ದರಿಂದ, ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಹೆಚ್ಚು ಉತ್ಸಾಹ ತೋರುತ್ತಿದೆ.

ಟಿ20 ವಿಶ್ವಕಪ್: ಯಶಸ್ಸಿಗೆ ಕಾರಣ ಹೇಳಿದ ಯುವ ಆಲ್‌ರೌಂಡರ್ ಸ್ಯಾಮ್ ಕರನ್

 ಮಿನಿ ಹರಾಜು ಒಂದು ದಿನದ ಪ್ರಕ್ರಿಯೆ

ಮಿನಿ ಹರಾಜು ಒಂದು ದಿನದ ಪ್ರಕ್ರಿಯೆ

ಇಸ್ತಾಂಬುಲ್ ಅಂತಿಮಗೊಳಿಸುವ ಬಗ್ಗೆ ಇನ್ನು ಎಲ್ಲಾ ಫ್ರಾಂಚೈಸಿಗಳು ಒಪ್ಪಿಗೆ ನೀಡಿಲ್ಲ. ಆದರೆ, ಈ ಬಗ್ಗೆ ಪ್ರಮುಖ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ. ನವೆಂಬರ್ ಮೊದನೇ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಕ್ರಿಕೆಟ್ ಅಧಿಕಾರಿಗಳು ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ

ಐಪಿಎಲ್ 16 ರ ಮಿನಿ-ಹರಾಜು ಪ್ರಕ್ರಿಯೆ ಕೇವಲ ಒಂದು ದಿನ ಮಾತ್ರ ನಡೆಯಲಿದೆ. ಬಿಸಿಸಿಐ ಮತ್ತು ಐಪಿಎಲ್‌ ಕಾರ್ಯಾಗರ ನಡೆಸುವ ಸಾಧ್ಯತೆ ಇದೆ. ಟರ್ಕಿಯ ಸಂಪೂರ್ಣ ಪ್ರವಾಸವು ಕೇವಲ ಮೂರು ಅಥವಾ ನಾಲ್ಕು ದಿನಗಳವರೆಗೆ ಇರುತ್ತದೆ.

5 ಕೋಟಿ ರುಪಾಯಿ ಸಂಬಳದ ಪರ್ಸ್ ಹೆಚ್ಚಳ

5 ಕೋಟಿ ರುಪಾಯಿ ಸಂಬಳದ ಪರ್ಸ್ ಹೆಚ್ಚಳ

ಐಪಿಎಲ್ 2022 ಹರಾಜಿನಲ್ಲಿ, ಸಂಬಳದ ಪರ್ಸ್ ಅನ್ನು 90 ಕೋಟಿ ರುಪಾಯಿಯಿಂದ 95 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. ಯೋಜನೆಗಳ ಪ್ರಕಾರ, ಇದು ಪ್ರತಿ ವರ್ಷ 5 ಕೋಟಿ ರುಪಾಯಿ ಹೆಚ್ಚಾಗಲಿದೆ, ಐಪಿಎಲ್ 2024ಕ್ಕೆ 100 ಕೋಟಿ ರುಪಾಯಿಗೆ ಹೆಚ್ಚಾಗುತ್ತದೆ.

ಆದಾಗ್ಯೂ, ಟ್ರೇಡ್-ಇನ್‌ಗಳನ್ನು ಅವಲಂಬಿಸಿ, ಸಂಬಳದ ಪರ್ಸ್ ಹೆಚ್ಚಬಹುದು ಅಥವಾ ಕುಗ್ಗಬಹುದು. ಐಪಿಎಲ್ 2023 ಮಾರ್ಚ್ ಕೊನೆಯ ವಾರ ಆರಂಭವಾಗುವ ನಿರೀಕ್ಷೆಯಿದೆ. ಐಪಿಎಲ್ ಆಡಳಿತ ಮಂಡಳಿ ಸಭೆ ಸೇರಿದಾಗ ಹರಾಜು ಸಮಯದಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

Story first published: Wednesday, October 26, 2022, 12:17 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X