ವಸೀಂ ಜಾಫರ್ ದ್ವಿಶತಕ , ರನ್ ಬೆಟ್ಟ ಕಟ್ಟಿದ ವಿದರ್ಭ

Posted By:
Irani cup: Vidarbha scores 589 runs against rest of India

ನಾಗ್ಪುರ, ಮಾರ್ಚ್ 15: ಇರಾನಿ ಕಪ್‌ನ ಭಾರತ ಇತರೆ ಮತ್ತು ವಿದರ್ಭ ನಡುವಿನ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ವಿದರ್ಭ ತಂಡದ ವಸೀಂ ಜಾಫರ್ ಅದ್ಬುತ ದ್ವಿಶತಕ ಗಳಿಸಿ ಭಾರತ ಇತರೆ ತಂಡವನ್ನು ಅಕ್ಷರಶಃ ಕಾಡಿದರು.

ವಸೀಂ ಜಾಫರ್ ಅವರ ಭರ್ಜರಿ ದ್ವಿಶಕತದ ಸಹಾಯದಿಂದ ವಿದರ್ಭ ತಂಡವು ಎರಡನೇ ದಿನದಾಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 598 ರನ್ ಗಳಿಸಿದೆ. ನಿನ್ನೆ 113 ರನಗಳಿಸಿದ್ದ ವಸೀಂ ಜಾಫರ್ ಇಂದು ಭರ್ಜರಿ ದ್ವಿಶತ ಗಳಿಸಿದರು. ಭಾರತ ಇತರೆ ತಂಡದ ಬೌಲರ್‌ಗಳನ್ನು ಕಾಡಿದ ವಸೀಂ ಜಾಫರ್ 285 ರನ್ ಗಳಿಸಿ ನಾಟೌಟ್‌ ಆಗಿ ಉಳಿದಿದ್ದಾರೆ.

ಬೆಳಗ್ಗಿನಿಂದ ಬರೀ ಬೆವರು ಹರಿಸಿದ ಭಾರತ ಇತರೆ ತಂಡದ ಬೌಲರ್‌ಗಳು ಪಡೆದದ್ದು ಕೇವಲ ಒಂದು ವಿಕೆಟ್ ಮಾತ್ರ. ನಿನ್ನೆ 29 ರನ್‌ಗಳಿಸಿ ಆಡುತ್ತಿದ್ದ ಜಿ.ಸತೀಶ್ ಅವರು ಇಂದು ಶತಕ ಪೂರೈಸಿದರು. ಅವರು 129 ರನ್ ಗಳಿಸಿ ಸಿದ್ದಾರ್ಥ್‌ ಕೌಲ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ವಸೀಂ ಜಾಫರ್ ಜೊತೆ ಎವಿ ವಾಖಂಡೆ 44 ರನ್ ಗಳಿಸಿ ನಾಟೌಟ್‌ ಆಗಿ ಉಳಿದಿದ್ದಾರೆ. ನಾಳೆ ಮುಂಜಾನೆ ವಸೀಂ ಜಾಫರ್ ತ್ರಿಶಕ ಮತ್ತು ವಾಖಂಡೆ ಅರ್ಧ ಶತಕ ಗಳಿಸುವ ನಿರೀಕ್ಷೆ ಇದೆ.

285 ರನ್ ಗಳಿಸಿದ ವಸೀಂ ಜಾಫರ್ ಅವರು ಇರಾನಿ ಟ್ರೋಫಿಯ ಒಂದು ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. ಈ ಮುಂಚೆ ಮುರಳಿ ವಿಜಯ್ 266 ರನ್ ಗಳಿಸಿದರು.

ಮತ್ತೊಂದು ದಾಖಲೆ ಮಾಡಿದ ವಸೀಂ ಜಾಫರ್ ಇಂದು ಅವರ ಪ್ರಥಮ ದರ್ಜೆ ಪಂದ್ಯದಲ್ಲಿ 18000 ರನ್ ಪೂರೈಸಿದರು. ಪ್ರಥಮ ದರ್ಜೆ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಸುನಿಲ್ ಗವಾಸ್ಕರ್ ಹೆಸರಲ್ಲಿದೆ ಅವರು 25834 ರನ್ ಗಳಿಸಿದ್ದಾರೆ. ನಂತರದ ಸ್ಥಾನ ಸಚಿನ್ ತೆಂಡೂಲ್ಕರ್‌ ಅವರದ್ದು ಅವರು 25356 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಸೀಂ ಜಾಫರ್ 6ನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 15, 2018, 17:59 [IST]
Other articles published on Mar 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ