ಏಷ್ಯಾಕಪ್ ಸಂದರ್ಭದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ, ಟಿ20 ವಿಶ್ವಕಪ್ ವೇಳೆಯಲ್ಲಿ ಕೂಡ ಚೇತರಿಸಿಕೊಂಡಿರಲಿಲ್ಲ. ಆದರೆ, ಭಾರತ ಡಿಸೆಂಬರ್ ತಿಂಗಳಿನಲ್ಲಿ ಕೈಗೊಳ್ಳಲಿರುವ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಅವರು ಫಿಟ್ ಆಗಿದ್ದಾರೆ, ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸಿದ್ದರು.
ಸೆಪ್ಟೆಂಬರ್‌ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ಜಡೇಜಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ, ನಂತರ ಫಿಟ್ನೆಸ್ ಕಾರಣ ನೀಡಿ ರವೀಂದ್ರ ಜಡೇಜಾ ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಾಗಿ ತಂಡದಲ್ಲಿ ಮತ್ತೊಬ್ಬ ಆಲ್‌ರೌಂಡರ್ ಶದಾಬ್ ಅಹ್ಮದ್ ಸ್ಥಾನ ಪಡೆದಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಗಾಯದ ಕಾರಣ ನೀಡಿದ ರವೀಂದ್ರ ಜಡೇಜಾ ಈಗ ಗುಜರಾತ್ ವಿಧಾನಸಭೆಯಲ್ಲಿ ಜಾಮ್ ನಗರದಿಂದ ಸ್ಪರ್ಧಿಸಿರುವ ಪತ್ನಿ ರಿವಾಬಾ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ರವೀಂದ್ರ ಜಡೇಜಾ ಅವರ ಪತ್ನಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ರವೀಂದ್ರ ಜಡೇಜಾ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದರು. ಅವರು ಏಕದಿನ ತಂಡದಲ್ಲಿ ಸೇರುವುದು ಫಿಟ್ನೆಸ್ ಸುಧಾರಣೆಗೆ ಒಳಪಟ್ಟಿತ್ತು. ಏಕದಿನ ಸರಣಿಯ ನಂತರ ಟೆಸ್ಟ್ ಸರಣಿ ನಡೆಯಲಿದ್ದು, ಅಷ್ಟರಲ್ಲಿ ಅವರು ಫಿಟ್ ಆಗುವ ಸಾಧ್ಯತೆ ಇದೆ.
ಕ್ರಿಕೆಟಿಗರ ನಾಡು ಜಾಮ್ ನಗರ
ಗುಜರಾತ್ ರಾಜ್ಯದ ಜಾಮ್‌ನಗರವನ್ನು ಕ್ರಿಕೆಟಿಗರ ನಾಡು ಎಂದು ಕರೆಯಲಾಗುತ್ತದೆ. ಭಾರತದ ಪ್ರಥಮ ದರ್ಜೆಯ ಕ್ರಿಕೆಟ್‌ನಲ್ಲಿ ಆಡುವ ಪ್ರಮುಖ ಪಂದ್ಯಾವಳಿ "ರಣಜಿ ಟ್ರೋಫಿ" ಗೆ ಹೆಸರು ಬರಲು ಕಾರಣ ಜಾಮ್ ನಗರದಿಂದ ಬಂದ ಕೆ.ಎಸ್. ರಂಜಿತ್ ಸಿನ್‌ಜಿ. ವಿನು ಮಂಕಡ್, ಸಲೀಮ್ ದುರಾನಿ ಮತ್ತು ದುಲೀಪ್‌ಸಿನ್ಹಜಿ ಕೂಡ ಇಲ್ಲಿಂದ ಬಂದ ಇತರೆ ಪ್ರಸಿದ್ಧ ಕ್ರಿಕೆಟಿಗರಾಗಿದ್ದಾರೆ.
2019ರಲ್ಲಿ ಬಿಜೆಪಿ ಸೇರಿದ್ದ ರಿವಾಬಾ
ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ರಿವಾಬಾ 2019 ರಲ್ಲಿ ಬಿಜೆಪಿ ಸೇರಿದ್ದರು. ಜಡೇಜಾ ಪತ್ನಿ ರಿವಾಬಾ ಮತ್ತು ಅವರ ಸಹೋದರಿ ನಯನಾಬಾ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ವಿಶೇಷ.
ಜಡೇಜಾ ಪತ್ನಿ ರಿವಾಬಾ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರೆ, ಅವರ ಸಹೋದರಿ ನಯಾನಾಬಾ ಜಾಮ್ ನಗರ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ರವೀಂದ್ರ ಜಡೇಜಾ ಈಗಾಗಲೇ ಪತ್ನಿಯ ಕ್ಷೇತ್ರದಲ್ಲಿ ಹಲವು ಚುನಾವಣಾ ರ್‍ಯಾಲಿಗಳಲ್ಲಿ ಭಾಗವಹಿಸಿದ್ದಾರೆ.
ಕ್ರಿಕೆಟ್ ಆಡಲು ಗಾಯದ ಸಮಸ್ಯೆ ನೀಡಿರುವ ರವೀಂದ್ರ ಜಡೇಜಾ ಪತ್ನಿಯ ಪರವಾಗಿ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿರುವ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ.