ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG Vs PAK: ಪಾಕಿಸ್ತಾನ ಬೌಲಿಂಗ್ ಪಡೆಗೆ ಗರ್ವಭಂಗ, 1910ರಲ್ಲಿ ನಿರ್ಮಾಣವಾಗಿದ್ದ ದಾಖಲೆ ಮುರಿದ ಆಂಗ್ಲರು

Know About Records Created In The 1st Day Of England Vs Pakistan 1st Test

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ಟಿ20 ಪಂದ್ಯ ಎನ್ನುವಂತೆ ಬ್ಯಾಟಿಂಗ್ ಮಾಡಿದೆ. ತಮ್ಮದೇ ವಿಶ್ವದ ಬಲಿಷ್ಠ ಬೌಲಿಂಗ್ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ಗರ್ವಭಂಗವಾಗಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಇಂಗ್ಲೆಂಡ್ ಬ್ಯಾಟರ್ ಗಳು ಪಾಕಿಸ್ತಾನ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದಾರೆ.

ಜೋ ರೂಟ್ ಹೊರತು ಪಡಿಸಿ ಉಳಿದ ನಾಲ್ಕು ಬ್ಯಾಟರ್ ಗಳು ಪಾಕಿಸ್ತಾನ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ನಿಧಾನವಾಗಿ ಆಡುವ ಯಾವ ಉದ್ದೇಶ ಕೂಡ ಅವರಿಗೆ ಇದ್ದಂತೆ ಕಾಣಲಿಲ್ಲ, ಪ್ರತಿ ಓವರ್ ನಲ್ಲಿ ಬೌಂಡರಿಗಳನ್ನು ಗಳಿಸುತ್ತಿದ್ದರು.

ಪಂದ್ಯ ಆರಂಭಕ್ಕೆ ಮುನ್ನ ಇಂಗ್ಲೆಂಡ್ ಬ್ಯಾಟಿಂಗ್ ಪಾಕಿಸ್ತಾನ ಬೌಲಿಂಗ್ ನಡುವೆ ಉತ್ತಮ ಪೈಪೋಟಿ ಇರುತ್ತದೆ. ಸಾಂಪ್ರದಾಯಿಕ ಟೆಸ್ಟ್ ಪಂದ್ಯವನ್ನು ನೋಡಲು ಸಿಗುತ್ತದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇಂಗ್ಲೆಂಡ್ ಬ್ಯಾಟರ್ ಗಳು ಶಾಕ್ ಕೊಟ್ಟರು. ಟಿ20 ವಿಶ್ವಕಪ್‌ ಗುಂಗಿನಲ್ಲೇ ಬ್ಯಾಟಿಂಗ್ ಮಾಡಿದಂತೆ ತೋರುತ್ತಿತ್ತು.

Pak vs Eng 1st Test : ಟೆಸ್ಟ್‌ನಲ್ಲಿ ಟಿ20 ಕ್ರಿಕೆಟ್ ಆಡಿದ ಆಂಗ್ಲರು: ನಾಲ್ಕು ಶತಕ, ಪಾಕ್ ಬೌಲಿಂಗ್ ದಾಳಿ ಧ್ವಂಸPak vs Eng 1st Test : ಟೆಸ್ಟ್‌ನಲ್ಲಿ ಟಿ20 ಕ್ರಿಕೆಟ್ ಆಡಿದ ಆಂಗ್ಲರು: ನಾಲ್ಕು ಶತಕ, ಪಾಕ್ ಬೌಲಿಂಗ್ ದಾಳಿ ಧ್ವಂಸ

2005ರ ಬಳಿಕ 17 ವರ್ಷಗಳ ನಂತರ ಪಾಕಿಸ್ತಾನ ನೆಲಕ್ಕೆ ಟೆಸ್ಟ್ ಆಡಲು ಕಾಲಿಟ್ಟಿರುವ ಇಂಗ್ಲೆಂಡ್, ಮೊದಲನೇ ಟೆಸ್ಟ್‌ ಪಂದ್ಯದ ಮೊದಲನೇ ದಿನವೇ ನಾಲ್ಕು ಅಭೂತಪೂರ್ವ ದಾಖಲೆಗಳನ್ನು ನಿರ್ಮಿಸಿದೆ.

 ವೇಗವಾಗಿ 100 ರನ್ ಗಳಿಸಿ ದಾಖಲೆ ನಿರ್ಮಾಣ

ವೇಗವಾಗಿ 100 ರನ್ ಗಳಿಸಿ ದಾಖಲೆ ನಿರ್ಮಾಣ

ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ಎಂದರೆ ಆರಂಭದಲ್ಲಿ ಬ್ಯಾಟರ್ ಗಳು ಸಾಕಷ್ಟು ಎಚ್ಚರಿಕೆಯಿಂದ ಆಡುತ್ತಾರೆ. ಪಿಚ್‌ ಹೇಗೆ ವರ್ತಿಸುತ್ತದೆ ಎನ್ನುವದನ್ನು ಅರಿಯುತ್ತಾರೆ, ರಕ್ಷಣಾತ್ಮಕವಾಗಿ ಆಡುವ ಮೂಲಕ ನಂತರ ರನ್ ಗಳಿಸುವತ್ತ ನೋಡುತ್ತಾರೆ. ಆದರೆ, ಇಂಗ್ಲೆಂಡ್ ಇದ್ಯಾವುದಕ್ಕೂ ಕೇರ್ ಮಾಡಲಿಲ್ಲ, ಮೊದಲ ಓವರ್ ನಿಂದಲೇ ರನ್ ಗಳಿಸಲು ಶುರು ಮಾಡಿದರು.

ಇಂಗ್ಲೆಂಡ್ ಆರಂಭಿಕರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಯಾವ ಮಾದರಿ ಕ್ರಿಕೆಟ್ ಆದರೇನು ನಾವು ಆಡೋದೆ ಹಿಂಗೆ ಎನ್ನುವಂತೆ ಬ್ಯಾಟ್ ಬೀಸಿದರು. 13.4 ಓವರ್‍ ಗಳಲ್ಲೇ ಇಂಗ್ಲೆಂಡ್ 100 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಾಣವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ತಂಡವೊಂದು ವೇಗವಾಗಿ 100 ಗಳಿಸಿದ ದಾಖಲೆ ಇದಾಗಿದೆ.

Ind Vs Ban : ಮೊದಲ ಏಕದಿನ ಪಂದ್ಯಕ್ಕೆ ಮುನ್ನ ಬಾಂಗ್ಲಾದೇಶಕ್ಕೆ ಆಘಾತ

ದಾಖಲೆಯ ರನ್‌ರೇಟ್‌ನೊಂದಿಗೆ 200 ರನ್ ಜೊತೆಯಾಟ

ದಾಖಲೆಯ ರನ್‌ರೇಟ್‌ನೊಂದಿಗೆ 200 ರನ್ ಜೊತೆಯಾಟ

13.4 ಓವರ್ ಗಳಲ್ಲಿ 100 ರನ್ ಗಳಿಸಿದ ಆರಂಭಿಕ ಜೋಡಿಯಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದರು. ರನ್‌ ಗಳಿಸುವ ವೇಗ ಸ್ವಲ್ಪ ಕಡಿಮೆಯಾದರೂ, ದಾಖಲೆಯ ರನ್‌ ರೇಟ್‌ನಲ್ಲಿ 200 ರನ್‌ಗಳ ಜೊತೆಯಾಟ ಆಡಿದರು.

ಈ ಜೊತೆಯಾಟದೊಂದಿಗೆ, ಕ್ರಾಲಿ ಮತ್ತು ಡಕೆಟ್ ಜೋ ಬರ್ನ್ಸ್ ಮತ್ತು ಡೇವಿಡ್ ವಾರ್ನರ್ ಅವರ ಆರಂಭಿಕ 200 ರನ್‌ಗಳ ಆರಂಭಿಕ ಆಟಗಾರರಾಗಿ ಹೊಂದಿದ್ದ ಅತ್ಯಧಿಕ ರನ್ ರೇಟ್‌ನ ದಾಖಲೆಯನ್ನು ಮುರಿದರು. 2015ರಲ್ಲಿ ಈ ಜೋಡಿ ನ್ಯೂಜಿಲೆಂಡ್ ವಿರುದ್ಧ 6.29 ರನ್ ರೇಟ್‌ನಲ್ಲಿ 200 ರನ್‌ಗಳ ಜೊತೆಯಾಟ ಆಡಿದ್ದರು.

112 ವರ್ಷಗಳ ಹಿಂದಿನ ದಾಖಲೆ ಮುರಿದ ಆಂಗ್ಲರು

112 ವರ್ಷಗಳ ಹಿಂದಿನ ದಾಖಲೆ ಮುರಿದ ಆಂಗ್ಲರು

ಇಂಗ್ಲೆಂಡ್ ಟೆಸ್ಟ್ ಪಂದ್ಯದ ಮೊದಲನೇ ದಿನವೇ 506 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿದೆ. ಇದು ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲನೇ ದಿನ ದಾಖಲಾದ ಅತ್ಯಧಿಕ ರನ್ ಆಗಿದೆ. ಈ ಹಿಂದೆ 1910ರಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ಮೊದಲ ದಿನ 494 ರನ್‌ ಗಳಿಸಿದ್ದು ದಾಖಲೆಯಾಗಿತ್ತು.

ಆದರೆ, ಇಂಗ್ಲೆಂಡ್ ಬ್ಯಾಟರ್ ಗಳು ಮೊದಲ ದಿನವೇ 506 ರನ್ ಗಳಿಸುವ ಮೂಲಕ ಆ ದಾಖಲೆ ಅಳಿಸಿ ಹೊಸ ದಾಖಲೆ ಬರೆದರು. ಅದೂ ಕೂಡ ಇಂಗ್ಲೆಂಡ್ ಆಡಿದ್ದು 75 ಓವರ್ ಮಾತ್ರ, ಬೆಳಕಿನ ಸಮಸ್ಯೆಯಿಂದ ಅಷ್ಟಕ್ಕೇ ದಿನದ ಇನ್ನಿಂಗ್ಸ್ ಮುಗಿಸಲಾಯಿತು. ಒಂದು ವೇಳೆ 90 ಓವರ್ ಗಳನ್ನು ಬೌಲ್ ಮಾಡಿದ್ದರೆ 600 ಕ್ಕೂ ಹೆಚ್ಚಿನ ರನ್ ಹರಿದು ಬರುವ ಸಾಧ್ಯತೆ ಇತ್ತು.

ಒಂದೇ ದಿನ ದಾಖಲಾದ ನಾಲ್ಕು ಶತಕ

ಒಂದೇ ದಿನ ದಾಖಲಾದ ನಾಲ್ಕು ಶತಕ

ಕ್ರಿಕೆಟ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ ದಾಖಲೆ ನಿರ್ಮಾಣವಾಗಿದೆ. ಝಾಕ್ ಕ್ರಾಲಿ 122 ರನ್, ಬೆನ್ ಡಕೆಟ್ 107 ರನ್, ಓಲಿ ಪೋಪ್ 108 ರನ್ ಗಳಿಸಿದರೆ, ಹ್ಯಾರಿ ಬ್ರೂಕ್ ಅಜೇಯ 101 ರನ್ ಗಳಿಸಿದ್ದಾರೆ.

ಮೊದಲ ದಿನವೇ ನಾಲ್ಕು ಶತಕಗಳನ್ನು ಬಾರಿಸಿರುವ ಇಂಗ್ಲೆಂಡ್ ಎರಡನೇ ದಿನ ಇನ್ನೆಷ್ಟು ದಾಖಲೆಗಳನ್ನು ಬರೆಯುತ್ತದೆ ಎನ್ನುವ ಕುತೂಹಲ ಮೂಡಿಸಿದೆ. ಹ್ಯಾರಿ ಬ್ರೂಕ್ ಅಜೇಯ 101 ರನ್ ಗಳಿಸಿದ್ದು, ಇದೇ ರೀತಿ ಬ್ಯಾಟಿಂಗ್ ಮಾಡಿದರೆ ದ್ವಿಶತಕ ಗಳಿಸುವ ದಾಖಲೆ ಇದೆ. ಬೆನ್‌ ಸ್ಟೋಕ್ಸ್ 15 ಎಸೆತಗಳಲ್ಲಿ 34 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಎರಡನೇ ದಿನ ಅವರೂ ಶತಕ ಗಳಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

Story first published: Thursday, December 1, 2022, 21:28 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X