ENG Vs PAK: ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಾಣ, 5 ದಿನಗಳಲ್ಲಿ ಬಂದ ರನ್ ಎಷ್ಟು ಗೊತ್ತಾ?

ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ರೋಚಕ 74 ರನ್‌ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಪಂದ್ಯದ ಮೊದಲನೇ ದಿನವೇ ರಾವಲ್ಪಿಂಡಿಯಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ರನ್ ಹೊಳೆ ಹರಿಸಿದ್ದರು. ಮೊದಲ ದಿನವೇ 506 ರನ್ ಗಳಿಸುವ ಮೂಲಕ ಟೆಸ್ಟ್ ಪಂದ್ಯದ ಮೊದಲನೇ ದಿನ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದ್ದರು.

ಇಂಗ್ಲೆಂಡ್‌ನ ನಾಲ್ವರು ಬ್ಯಾಟರ್‌ಗಳು ಮೊದಲ ದಿನವೇ ಶತಕ ಬಾರಿಸಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಉತ್ತಮ ಬ್ಯಾಟಿಂಗ್ ಮಾಡಿತು, ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ನ ಮೂವರು ಬ್ಯಾಟರ್ ಶತಕ ಸಿಡಿಸಿದರು. ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಒಟ್ಟು 7 ಶತಕಗಳು ದಾಖಲಾಗುವ ಮೂಲಕ ದಾಖಲೆ ನಿರ್ಮಿಸಿದರು.

ವಿದೇಶದಲ್ಲಿ ಇಂಗ್ಲೆಂಡ್‌ನ ಅತ್ಯಂತ ಶ್ರೇಷ್ಠ ಗೆಲುವು: ಪಾಕ್ ವಿರುದ್ಧದ ಗೆಲುವಿನ ಬಳಿಕ ಸ್ಟೋಕ್ಸ್ ಮಾತುವಿದೇಶದಲ್ಲಿ ಇಂಗ್ಲೆಂಡ್‌ನ ಅತ್ಯಂತ ಶ್ರೇಷ್ಠ ಗೆಲುವು: ಪಾಕ್ ವಿರುದ್ಧದ ಗೆಲುವಿನ ಬಳಿಕ ಸ್ಟೋಕ್ಸ್ ಮಾತು

ಆದರೆ, ಒಟ್ಟಾರೆ 5 ದಿನಗಳಲ್ಲಿ ಈ ಟೆಸ್ಟ್ ಪಂದ್ಯದಲ್ಲಿ 1768 ರನ್‌ಗಳನ್ನು ಗಳಿಸಿರುವುದು ವಿಶ್ವದಾಖಲೆಯಾಗಿದೆ. 5 ದಿನಗಳ ಟೆಸ್ಟ್‌ನಲ್ಲಿ ಇದು ಅತಿಹೆಚ್ಚು ರನ್ ಗಳಿಸಿದ ಪಂದ್ಯ ಎನ್ನುವ ದಾಖಲೆಗೆ ಭಾಜನವಾಗಿದೆ. ಆದರೂ ಇದು ಟೆಸ್ಟ್ ಪಂದ್ಯವೊಂದರಲ್ಲಿ ಗಳಿಸಿದ ಹೆಚ್ಚು ರನ್ ಅಲ್ಲ!

1939ರಲ್ಲಿ ನಿರ್ಮಾಣವಾಗಿದೆ ವಿಶ್ವದಾಖಲೆ

1939ರಲ್ಲಿ ನಿರ್ಮಾಣವಾಗಿದೆ ವಿಶ್ವದಾಖಲೆ

1930 ರಲ್ಲಿ ಸಬೀನಾ ಪಾರ್ಕ್‌ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ 1815 ರನ್‌ ಗಳಿಸುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಈ ಟೆಸ್ಟ್ ಪಂದ್ಯ 9 ದಿನಗಳ ಕಾಲ ನಡೆದಿತ್ತು.

ಅದಾದ ನಂತರ, 1939ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ 1981 ರನ್ ದಾಖಲಾಗುವ ಮೂಲಕ ಹಳೆಯ ದಾಖಲೆಯನ್ನು ಮುರಿಯಿತು. ಇದು ಈವರೆಗಿನ ವಿಶ್ವದಾಖಲೆಯಾಗಿದೆ. ಕಿಂಗ್ಸ್‌ಮೀಡ್‌ನಲ್ಲಿ ಈ ಟೆಸ್ಟ್ ಪಂದ್ಯ ಬರೋಬ್ಬರಿ 9 ದಿನಗಳ ಕಾಲ ನಡೆದಿತ್ತು.

ಅದಾದ ನಂತರ 2022 ರಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 1768 ರನ್ ಗಳಿಸುವ ಮೂಲಕ 5 ದಿನಗಳ ಟೆಸ್ಟ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಇರುವುದು ವಿಶೇಷ.

ಈ ಅಂಶವೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಾಯಿತಾ?

ಮೊದಲ ದಿನವೇ ಹಲವು ದಾಖಲೆ

ಮೊದಲ ದಿನವೇ ಹಲವು ದಾಖಲೆ

ಟೆಸ್ಟ್‌ನ ಮೊದಲ ದಿನವೇ 500 ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ. ಈ ಹಿಂದೆ 1910 ರಲ್ಲಿ ಸಿಡ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 494 ರನ್ ಗಳಿಸಿದ್ದ ಆಸ್ಟ್ರೇಲಿಯಾದ ದಾಖಲೆಯಾಗಿತ್ತು. ಇಂಗ್ಲೆಂಡ್ ಗಳಿಸಿದ 506 ರನ್‌ಗಳು ಟೆಸ್ಟ್‌ನ ಯಾವುದೇ ದಿನದಂದು ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯಲ್ಲಿ ಐದನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 657 ರನ್‌ ಗಳಿಸಿತ್ತು.

200 ಕ್ಕಿಂತ ಹೆಚ್ಚಿನ ರನ್ ಜೊತೆಯಾಟವನ್ನು ಪಾಕಿಸ್ತಾನ ಮತ್ತು ಇಂಗ್ಲೆಂಡ್‌ನ ಆರಂಭಿಕ ಜೋಡಿ ಕಲೆ ಹಾಕಿದ್ದು ಇದೇ ಮೊದಲಬಾರಿಯಾಗಿದೆ.

ಎರಡು ದಶಕಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್

ಎರಡು ದಶಕಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್

ಇಂಗ್ಲೆಂಡ್ 17 ವರ್ಷಗಳ ನಂತರ ಪಾಕಿಸ್ತಾನಕ್ಕೆ ಟೆಸ್ಟ್ ಸರಣಿಯಲ್ಲಿ ಆಡಲು ಪ್ರವಾಸ ಮಾಡಿದೆ. ಆದರೆ, ಇಂಗ್ಲೆಂಡ್ ಇಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯ ಗೆದ್ದಿದ್ದು 22 ವರ್ಷಗಳ ಹಿಂದೆ.

2000ನೇ ಇಸವಿಯಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಇಂಗ್ಲೆಂಡ್ ಮೊದಲ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೆ, 3ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿಯನ್ನು ಗೆದ್ದಿತ್ತು. ನಂತರ 2005ರಲ್ಲಿ 0-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, December 5, 2022, 20:27 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X