ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಲದೀಪ್, ಕಾರ್ತಿಕ್ ಬಲ: ನೈಟ್ ರೈಡರ್ಸ್ 6 ವಿಕೆಟ್ ಗೆಲುವು

Kolkata Knight Riders vs Rajasthan Royals: Kuldeep, Karthik power KKR

ಕೋಲ್ಕತ್ತಾ, ಮೇ 16: ಮತ್ತದೇ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು 6 ವಿಕೆಟ್ ಸೋಲನುಭವಿಸಿದೆ. ಕ್ರಿಸ್ ಲಿನ್ 45 (42), ದಿನೇಶ್ ಕಾರ್ತಿಕ್ ಅಜೇಯ 41 (31) ರನ್ ನೆರವಿನೊಂದಿಗೆ 145 ರನ್ ಪೇರಿಸಿದ ಕೋಲ್ಕತ್ತಾ ಗೆಲುವನ್ನು ಸಂಭ್ರಮಿಸಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ಗಳು ಕಳಪೆ ಬ್ಯಾಟಿಂಗ್ ಮುಂದುವರೆಸಿದರು. ರಾಹುಲ್ ತ್ರಿಪಾಠಿ 27 (15), ಜಾಸ್ ಬಟ್ಲರ್ 39 (22), ಜಯದೇವ್ ಉನಾದ್ಕತ್ 26 (18) ರನ್ ಸಾಧನೆ ಬಿಟ್ಟರೆ ಬೇರೆ ಯಾರೂ 20 ರನ್ ದಾಟಿಸಲಿಲ್ಲ.

ಸ್ಕೋರ್ ಕಾರ್ಡ್

ನಾಯಕ ಅಜಿಂಕ್ಯ ರಹಾನೆ 11 (12), ಸಂಜು ಸ್ಯಾಮ್ಸನ್ 12 (10), ಬೆನ್ ಸ್ಟೋಕ್ಸ್ 11 (13), ಸ್ಟುವರ್ಟ್ ಬಿನ್ನಿ 1 (4), ಕೆ ಗೌತಮ್ 3 (5), ಇಶ್ ಸೋಧಿ 1 (6), ಜೋಫ್ರಾ ಆರ್ಚರ್ 6 (5), ಅನುರೀತ್ ಸಿಂಗ್ ಔಟಾಗದೆ 3 (4) ರನ್ ನೊಂದಿಗೆ ಎಲ್ಲಾ ವಿಕೆಟ್ ಕಳೆದು ಕೇವಲ 142 ರನ್ ಪೇರಿಸಿ ರಾಜಸ್ಥಾನ್ ತಂಡ ಕೋಲ್ಕತ್ತಾಕ್ಕೆ 143 ರನ್ ಗುರಿ ನೀಡಿತ್ತು.

ಕೋಲ್ಕತ್ತಾ ಪರ ಕುಲದೀಪ್ ಯಾದವ್ ಬೌಲಿಂಗ್ ದಾಳಿಯಲ್ಲಿ ಮಿಂಚಿದರು. 20 ರನ್ ನೀಡಿದ ಕುಲದೀಪ್ 4 ವಿಕೆಟ್ ಉರುಳಿಸಿದರು. ಪ್ರಸಿದ್ಧ್ ಕೃಷ್ಣ ಮತ್ತು ಆಂಡ್ರೆ ರಸೆಲ್ ಕೂಡ ತಲಾ 2 ವಿಕೆಟ್ ಕೆಡವಿ ರಾಜಸ್ಥಾನ್ ತಂಡವನ್ನು ಕಾಡಿದರು.

ಕೋಲ್ಕತ್ತಾ ಆರಂಭಿಕ ಆಟಗಾರರಾದ ಸುರೇಶ್ ನರೈನ್ 21 (7), ಕ್ರಿಸ್ ಲಿನ್ 45 ರನ್ ಸೇರಿಸಿದರು. ಮುಂದೆ ರಾಬಿನ್ ಉತ್ತಪ್ಪ 4 (6), ನರೇಶ್ ರಾಣ 21 (17) ರನ್ ಗಳಿಸಿ ಬೇಗನೆ ಔಟಾದರಾದರೂ ದಿನೇಶ್ ಕಾರ್ತಿಕ್ ಮತ್ತು ಆಂಡ್ರೆ ರಸೆಲ್ ಅಜೇಯ (11/5) ಕೋಲ್ಕತ್ತಾ ತಂಡವನ್ನು ಗೆಲ್ಲಿಸಿದರು.

ಮಾರಕ ಬೌಲಿಂಗ್ ಮೂಲಕ ರಾಜಸ್ಥಾನ್ ತಂಡವನ್ನು ಕಾಡಿದ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಗಟ್ಟಿಯಾಗಿರುವ ಕೋಲ್ಕತ್ತಾ 14 ಅಂಕಗಳನ್ನು ಖಾತೆಯಲ್ಲಿ ಸೇರಿಸಿಕೊಂಡಿದೆ.

Story first published: Wednesday, May 16, 2018, 1:03 [IST]
Other articles published on May 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X