ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ಕಳಪೆ ಬ್ಯಾಟಿಂಗ್: ಆರ್ಸಿಬಿ 10 ವಿಕೆಟ್ ಭರ್ಜರಿ ಜಯ

KXIP vs RCB: Royal Challengers Bangalore thrash Kings XI Punjab by 10 wickets

ಇಂದೋರ್, ಮೇ 14: ಇಲ್ಲಿನ ಹೋಲ್ಕರ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ 48ನೇ ಪಂದ್ಯದಲ್ಲಿ ಅತ್ಯಂತ ಕೀಳುಮಟ್ಟದ ಬ್ಯಾಟಿಂಗ್ ಗೆ ಸಾಕ್ಷಿಯಾದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು.

ಪಂಜಾಬ್ ನೀಡಿದ್ದ 89 ರನ್ ಸುಲಭ ರನ್ ಗುರಿ ಬೆನ್ನಟ್ಟಿದ ಬೆಂಗಳೂರು 8.1 ಓವರ್ ನಲ್ಲೇ ವಿಕೆಟ್ ನಷ್ಟವಿಲ್ಲದೆ 92 ರನ್ ಪೇರಿಸಿ ವಿಜಯದ ನಗು ಬೀರಿತು. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 48 (28) ಮತ್ತು ಪಾರ್ಥೀವ್ ಪಟೇಲ್ 40 (22) ರನ್ ಪೇರಿಸಿ ತಂಡವನ್ನು ಸುಲಭವಾಗಿ ಗೆಲ್ಲಿಸಿದರು.

ಸ್ಕೋರ್ ಕಾರ್ಡ್

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಂಜಾಬ್ ಆರಂಭದಲ್ಲೇ ಮುಗ್ಗರಿಸುತ್ತ ಸಾಗಿತು. ಇಡೀ ಆಟಗಾರರಲ್ಲಿ ಫಿಂಚ್ ಅವರದ್ದೇ (26/23) ಗರಿಷ್ಠ ರನ್ ಅಂದರೆ ತಂಡದ ಬ್ಯಾಟಿಂಗ್ ಪೌರುಷ ಅರ್ಥ ಮಾಡಿಕೊಳ್ಳಬಹುದು. ಅದೂ ಇಡೀ ತಂಡದಲ್ಲಿ 15 ರನ್ ಗೆರೆ ದಾಟಿದ್ದು ಮೂವರು ಮಾತ್ರ!

ಪಂಜಾಬ್ ಆರಂಭಿಕ ಆಟಗಾರ ಕೆಎಲ್ ರಾಹುಲ್ 15 ಎಸೆತ ಎದುರಿಸಿ 21 ರನ್ ಗಳಿಸಿ ಉಮೇಶ್ ಯಾದವ್ ಓವರ್ ನಲ್ಲಿ ಕಾಲಿನ್ ಡೆ ಗ್ರ್ಯಾಂಡ್ ಹೋಂಗೆ ಕ್ಯಾಚಿತ್ತು ಪೆವಿಲಿಯನ್ ಗೆ ನಡೆದರು. ಕ್ರಿಸ್ ಗೇಲ್ 18 (14), ಫಿಂಚ್ 26 ಪೇರಿಸಿದರ ಪರಿಣಾಮ ಪಂಜಾಬ್ ಒಟ್ಟು 50 ರನ್ ಗೆರೆ ದಾಟಲಾದರೂ ಸಾಧ್ಯವಾಯಿತು.

ಈ ಮೂವರನ್ನು ಬಿಟ್ಟರೆ ಕರುಣ್ ನಾಯರ್ 1 (3), ಮಾರ್ಕ್ಯೂಸ್ ಸ್ಟಾಯ್ನಿಸ್ 2 (3), ಮಾಯಾಂಕ್ ಅಗರ್ವಾಲ್ 2 (6), ಆರ್ ಅಶ್ವಿನ್ 0 (1), ಆಂಡ್ರ್ಯೂ ಟೈ 0 (3), ಮೋಹಿತ್ ಶರ್ಮ 3 (5), ಅಂಕಿತ್ ರಜಪೂತ್ 1 (5) ರನ್ ನೊಂದಿಗೆ ತಂಡದ ಬ್ಯಾಟಿಂಗ್ ಅಸಹಾಯಕತೆಯನ್ನು ತೋರಿಕೊಂಡರು.



ಅಂತೂ 15.1 ಓವರ್ ಗಳಲ್ಲಿ ಪಂಜಾಬ್ ಎಲ್ಲಾ ವಿಕೆಟ್ ಕಳೆದು 88 ರನ್ ಪೇರಿಸಿ ಬೆಂಗಳೂರಿಗೆ 89 ರನ್ ಗುರಿ ನೀಡಿತ್ತು. 23 ರನ್ ಗೆ 3 ವಿಕೆಟ್ ಉರುಳಿಸಿ ಬೆಂಗಳೂರು ಪರ ಬೌಲಿಂಗ್ ದಾಳಿ ನಡೆಸಿದ ಉಮೇಶ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Monday, May 14, 2018, 23:56 [IST]
Other articles published on May 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X