ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಚ್ಚರಿಯ ಆಯ್ಕೆ! ಶ್ರೀಲಂಕಾ ಟಿ20 ತಂಡಕ್ಕೆ ಮರಳಿದ ಮಾಲಿಂಗ

Lasith Malinga returns as SL pick up ambidextrous Kamindu Mendis in T20I squad

ಕೊಲಂಬೋ, ಅಕ್ಟೋಬರ್ 22: ಇಂಗ್ಲೆಂಡ್ ವಿರುದ್ಧದ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ವೇಗಿ ಲಸಿತ್ ಮಾಲಿಂಗರನ್ನು ಸೇರಿಸಿಕೊಂಡಿರುವುದು ಅನೇಕರ ಹುಬ್ಬೇರಿಸಿದೆ. ಭಾರತ ವಿರುದ್ಧ 2017ರಲ್ಲಿ ಕೊನೆ ಪಂದ್ಯವನ್ನಾಡಿದ್ದ ಮಾಲಿಂಗ ಮತ್ತೆ ತಂಡಕ್ಕೆ ಸೇರಲು ಆಗಿರಲಿಲ್ಲ.

ಆದರೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಮಾಲಿಂಗರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಷ್ಯಾಕಪ್ 2018ರಲ್ಲಿ ಉತ್ತಮ ಪ್ರದರ್ಶನ ನೀಡಲಾಗದೆ ನಾಯಕತ್ವ ತೊರೆದ ಏಂಜೆಲೋ ಮ್ಯಾಥ್ಯೂಸ್ ಅವರ ಸ್ಥಾನವನ್ನು ಥಿಸರಾ ಪೆರೆರಾ ತುಂಬಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ

ಮಿಕ್ಕಂತೆ 15 ಮಂದಿ ಸದಸ್ಯರ ತಂಡದಲ್ಲಿ ಕಮಿಂದು ಮೆಂಡಿಸ್ ಹೊಸ ಮುಖವಾಗಿದ್ದು, ಎರಡು ಕೈಯಲ್ಲೂ ಸಮರ್ಥವಾಗಿ ಬೌಲಿಂಗ್ ಮಾಡಬಲ್ಲ ಪ್ರತಿಭಾವಂತ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಅಧ್ಯಕ್ಷೀಯ ಎಲೆವನ್ ಪರ ಆಡಿ ಮೆಂಡಿಸ್ ಉತ್ತಮ ಪ್ರದರ್ಶನ ನೀಡಿದ್ದರು. ಮಿಕ್ಕಂತೆ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಹೆಚ್ಚು ವಿಕೆಟ್ ಗಳಿಸಿದ ಐಶುರು ಉದಾನ ಅವರು ತಂಡದಲ್ಲಿದ್ದಾರೆ.

ಐದು ಏಕದಿನ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ಈಗಾಗಲೇ 3-0ರಲ್ಲಿ ಗೆದ್ದುಕೊಂಡಿದೆ. ಕೊನೆ ಪಂದ್ಯ ಅಕ್ಟೋಬರ್ 23ರಂದು ನಡೆಯಲಿದೆ. ಅಕ್ಟೋಬರ್ 27ರಂದು ಕೋಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ಏಕೈಕ ಟಿ20ಐ ಪಂದ್ಯ ನಡೆಯಲಿದೆ.

ಸಿಂಹಳೀಯರಿಗೆ ಮಣ್ಣುಮುಕ್ಕಿಸಿದ ಆಂಗ್ಲರು: ಸರಣಿ ಗೆದ್ದ ಇಂಗ್ಲೆಂಡ್ ಸಿಂಹಳೀಯರಿಗೆ ಮಣ್ಣುಮುಕ್ಕಿಸಿದ ಆಂಗ್ಲರು: ಸರಣಿ ಗೆದ್ದ ಇಂಗ್ಲೆಂಡ್

ಶ್ರೀಲಂಕಾ ತಂಡ : ಥಿಸರಾ ಪೆರೆರಾ(ನಾಯಕ), ದಿನೇಶ್ ಚಂಡಿಮಾಲ್, ನಿರೋಶನ್ ಡಿಕ್ ವೆಲ್ಲಾ(ವಿಕೆಟ್ ಕೀಪರ್), ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ಧನಂಜಯ್ ಡಿಸಿಲ್ವ, ದಸುನ್ ಶನಕಾ, ಕಮಿಂದು ಮೆಂಡಿಸ್, ಐಶುರು ಉಡಾನ, ಲಸಿತ್ ಮಾಲಿಂಗ, ದುಷ್ಮಂತಾ ಚಮೀರ, ಅಕಿಲ ಧನಂಜಯ, ಕಸುನ್ ರಂಜಿತಾ, ನುವಾನ್ ಪ್ರದೀ, ಲಕ್ಷಣ್ ಸಂದಕನ್.

Story first published: Monday, October 22, 2018, 18:14 [IST]
Other articles published on Oct 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X