ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ಸಕ್ರಿಯ ಆಟಗಾರರ ಪಟ್ಟಿ; ನಂಬರ್ 1 ಯಾರು?

List of active players with most international runs; Virat Kohli tops the list

ಕ್ರಿಕೆಟ್ ಜಗತ್ತಿನಲ್ಲಿ ಇಲ್ಲಿಯವರೆಗೂ ಹಲವು ದಿಗ್ಗಜ ಕ್ರಿಕೆಟಿಗರು ತಮ್ಮದೇ ಆದ ಹಲವಾರು ವಿಶಿಷ್ಟ ದಾಖಲೆ ನಿರ್ಮಿಸಿದ್ದು, ಕೆಲವರು ಇತರೆ ಆಟಗಾರರು ಮುರಿಯಲಾಗದಂತಹ ಕಷ್ಟಕರವಾದ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ದೇಶದ ತಂಡ ತ್ಯಜಿಸಿ ನ್ಯೂಜಿಲೆಂಡ್ ತಂಡ ಸೇರಿದ ಮೂವರು ಕ್ರಿಕೆಟಿಗರಿವರುಇತ್ತೀಚೆಗಷ್ಟೇ ತಮ್ಮ ದೇಶದ ತಂಡ ತ್ಯಜಿಸಿ ನ್ಯೂಜಿಲೆಂಡ್ ತಂಡ ಸೇರಿದ ಮೂವರು ಕ್ರಿಕೆಟಿಗರಿವರು

ಹೌದು, ಅತಿವೇಗದ ಶತಕ ಹಾಗೂ ಅರ್ಧಶತಕ, ಅತಿ ಹೆಚ್ಚು ಶತಕಗಳು ಹಾಗೂ ದ್ವಿಶತಕಗಳು, ಅತಿ ಹೆಚ್ಚು ಅರ್ಧಶತಕಗಳು ಹೀಗೆ ಹಲವಾರು ಭಿನ್ನ ವಿಭಿನ್ನ ರೀತಿಯ ದಾಖಲೆಗಳನ್ನು ಬ್ಯಾಟ್ಸ್‌ಮನ್‌ಗಳು ನಿರ್ಮಿಸಿದ್ದಾರೆ. ಅದರಲ್ಲಿಯೂ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿರುವ ಹಲವಾರು ದಾಖಲೆಗಳನ್ನು ಇತರೆ ಆಟಗಾರರು ಮುರಿಯುವುದು ಸುಲಭದ ಮಾತಲ್ಲ.

ತಂಡಕ್ಕೆ ಸ್ಫೂರ್ತಿ ತುಂಬಲು ಜ್ಯೋತಿಷಿ ನೇಮಕ ಮಾಡಿದ್ದ ಎಐಎಫ್ಎಫ್ ; ಸುರಿದದ್ದು ಲಕ್ಷ ಲಕ್ಷತಂಡಕ್ಕೆ ಸ್ಫೂರ್ತಿ ತುಂಬಲು ಜ್ಯೋತಿಷಿ ನೇಮಕ ಮಾಡಿದ್ದ ಎಐಎಫ್ಎಫ್ ; ಸುರಿದದ್ದು ಲಕ್ಷ ಲಕ್ಷ

ಹೀಗೆ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿರುವ ಸುಲಭವಾಗಿ ಮುರಿಯಲಾಗದಂತಹ ದಾಖಲೆಗಳ ಪೈಕಿ ಅತಿ ಹೆಚ್ಚು ಶತಕ ಹಾಗೂ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ದಾಖಲೆಗಳು ಕೂಡ ಸೇರಿವೆ. ಹೌದು, ಸಚಿನ್ ತೆಂಡೂಲ್ಕರ್ ಒಟ್ಟು 100 ಶತಕಗಳನ್ನು ಬಾರಿಸಿದ್ದಾರೆ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 34357 ರನ್ ದಾಖಲಿಸಿದ್ದಾರೆ. ಹೀಗೆ ಸಚಿನ್ ತೆಂಡೂಲ್ಕರ್ ಅವರ ಈ ಅಂಕಿಅಂಶವನ್ನು ಹಿಂದಿಕ್ಕಿ ಸಾರ್ವಕಾಲಿಕ ದಾಖಲೆ ಬರೆಯುವುದು ಸುಲಭದ ಮಾತಲ್ಲ. ಈ ಹಿಂದೆ ಸಾಕಷ್ಟು ಬ್ಯಾಟ್ಸ್‌ಮನ್‌ಗಳು ಈ ದಾಖಲೆ ಮುರಿಯಲಾಗದೆ ವಿಫಲರಾಗಿದ್ದು, ಪ್ರಸ್ತುತ ಸಕ್ರಿಯರಾಗಿ ಕ್ರಿಕೆಟ್‍ನಲ್ಲಿ ತೊಡಗಿಕೊಂಡಿರುವ ಆಟಗಾರರ ಪೈಕಿ ಯಾವ ಆಟಗಾರರು ಅತಿ ಹೆಚ್ಚು ರನ್ ಕಲೆ ಹಾಕಿದ್ದಾರೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ ಓದಿ.

ಪ್ರಸ್ತುತ ಸಕ್ರಿಯರಾಗಿರುವ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿರುವ ಟಾಪ್ 9 ಬ್ಯಾಟ್ಸ್‌ಮನ್‌ಗಳು

ಪ್ರಸ್ತುತ ಸಕ್ರಿಯರಾಗಿರುವ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಬಾರಿಸಿರುವ ಟಾಪ್ 9 ಬ್ಯಾಟ್ಸ್‌ಮನ್‌ಗಳು

1. ವಿರಾಟ್ ಕೊಹ್ಲಿ - 23650 ರನ್

2. ಜೋ ರೂಟ್ - 17196 ರನ್

3. ಡೇವಿಡ್ ವಾರ್ನರ್‌ - 16037 ರನ್

4. ರೋಹಿತ್ ಶರ್ಮಾ - 15733 ರನ್

5. ಕೇನ್ ವಿಲಿಯಮ್ಸನ್ - 15483 ರನ್

6. ತಮಿಮ್ ಇಕ್ಬಾಲ್ - 14616 ರನ್

7. ಏಂಜಲೋ ಮ್ಯಾಥ್ಯೂಸ್ - 13759 ರನ್

8. ಮುಷ್ಫಿಕರ್ ರಹೀಮ್ - 13427 ರನ್

9. ಸ್ಟೀವ್ ಸ್ಮಿತ್ - 13397 ರನ್

ಸಾರ್ವಕಾಲಿಕ ಟಾಪ್ 10 ಪಟ್ಟಿ

ಸಾರ್ವಕಾಲಿಕ ಟಾಪ್ 10 ಪಟ್ಟಿ

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಆಟಗಾರರ ಸಾರ್ವಕಾಲಿಕ ಟಾಪ್ 10 ಪಟ್ಟಿ .

1. ಸಚಿನ್ ತೆಂಡೂಲ್ಕರ್ - 34357 ರನ್

2. ಕುಮಾರ ಸಂಗಕ್ಕಾರ - 28016 ರನ್

3. ರಿಕಿ ಪಾಂಟಿಂಗ್ - 27483 ರನ್

4. ಜಯವರ್ಧನೆ - 25957 ರನ್

5. ಜಾಕ್ ಕಾಲಿಸ್ - 25534 ರನ್

6. ರಾಹುಲ್ ದ್ರಾವಿಡ್ - 24208 ರನ್

7. ವಿರಾಟ್ ಕೊಹ್ಲಿ - 23650 ರನ್

8. ಬ್ರಿಯಾನ್ ಲಾರಾ - 22358 ರನ್

9. ಸನತ್ ಜಯಸೂರ್ಯ - 21032 ರನ್

10. ಚಂದ್ರಪೌಲ್ - 20988 ರನ್

ಮತ್ತೆ ಮುಗ್ಗರಿಸಿದ Virat Kohli ಮತ್ತು Rohit Sharma ತೊಡೆತಟ್ಟಿ ನಿಂತ KS Bharat |*Cricket |oneIndia Kannada
ಎರಡೂ ಪಟ್ಟಿಗಳಲ್ಲಿಯೂ ಸ್ಥಾನ ಪಡೆದುಕೊಂಡಿರುವ ಏಕೈಕ ಆಟಗಾರ ಕೊಹ್ಲಿ

ಎರಡೂ ಪಟ್ಟಿಗಳಲ್ಲಿಯೂ ಸ್ಥಾನ ಪಡೆದುಕೊಂಡಿರುವ ಏಕೈಕ ಆಟಗಾರ ಕೊಹ್ಲಿ

ಒಟ್ಟಾರೆ 23650 ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿರುವ ಸಾರ್ವಕಾಲಿಕ ಆಟಗಾರರ ಪಟ್ಟಿ ಮತ್ತು ಸಕ್ರಿಯರಾಗಿರುವ ಆಟಗಾರರ ಪಟ್ಟಿ ಎರಡರಲ್ಲಿಯೂ ಸ್ಥಾನ ಪಡೆದುಕೊಂಡಿರುವ ಏಕೈಕ ಕ್ರಿಕೆಟಿಗನಾಗಿದ್ದಾರೆ. ಈ ಮೂಲಕ ಸಕ್ರಿಯ ಕ್ರಿಕೆಟ್ ಆಟಗಾರರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದು, ಸಾರ್ವಕಾಲಿಕ ಪಟ್ಟಿಯನ್ನು ಕೊಹ್ಲಿ ಈಗಾಗಲೇ ಸೇರಿಕೊಂಡಿದ್ದಾರೆ.

Story first published: Friday, June 24, 2022, 16:29 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X