ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿ

List of batsmen who scored most runs in an over and bowlers who conceded most runs in an over in test cricket

ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ ಕಳೆದ ವರ್ಷದಿಂದ ಮುಂದೂಡಲ್ಪಟ್ಟು ಮರು ಆಯೋಜನೆಯಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಬರ್ಮಿಂಗ್ ಹ್ಯಾಮ್ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೊದಲನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಆಕರ್ಷಕ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಹಾಗೂ ಮತ್ತೊಂದೆಡೆ ಅಂತಿಮ ಹಂತದಲ್ಲಿ ನಾಯಕ ಜಸ್ ಪ್ರೀತ್ ಬುಮ್ರಾ 16 ಎಸೆತಗಳಲ್ಲಿ ಅಜೇಯ 31 ರನ್ ಚಚ್ಚುವ ಮೂಲಕ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

ಹೌದು, ಇಂಗ್ಲೆಂಡ್ ತಂಡದ ಪ್ರಮುಖ ಬೌಲರ್ ಸ್ಟುವರ್ಟ್ ಬ್ರಾಡ್ ಟೀಮ್ ಇಂಡಿಯಾ ನಾಯಕ ಜಸ್ ಪ್ರೀತ್ ಬುಮ್ರಾಗೆ ಎಸೆದ ಇನ್ನಿಂಗ್ಸ್‌ನ 84ನೇ ಓವರ್‌ನಲ್ಲಿ 35 ರನ್‌ಗಳು ಹರಿದು ಬಂದವು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಹರಿದುಬಂದ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಆಟಗಾರರ ಟಾಪ್ 10 ಪಟ್ಟಿ ಮತ್ತು ರನ್ ನೀಡಿದ ಬೌಲರ್‌ಗಳ ವಿವರ ಈ ಕೆಳಕಂಡಂತಿದೆ.

ಟಾಪ್ 10 ಪಟ್ಟಿ

ಟಾಪ್ 10 ಪಟ್ಟಿ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ಬ್ಯಾಟ್ಸ್‌ಮನ್‌ಗಳ ಟಾಪ್ 10 ಪಟ್ಟಿ ಕೆಳಕಂಡಂತಿದೆ.

1. ಜಸ್ ಪ್ರೀತ್ ಬೂಮ್ರಾ: ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 35 ರನ್ - 2022. ರನ್ ವಿವರ: 4, 4 ( ವೈಡ್), 6(ನೋ ಬಾಲ್), 4, 4, 4, 6 ಮತ್ತು 1 ರನ್

2. ಬ್ರಿಯಾನ್ ಲಾರಾ: ದಕ್ಷಿಣ ಆಫ್ರಿಕಾದ ರಾಬಿನ್ ಪೀಟರ್ಸನ್ ಓವರ್‌ನಲ್ಲಿ 28 ರನ್ - 2003. ರನ್ ವಿವರ: 4,6,6,4,4,4

3. ಆಸ್ಟ್ರೇಲಿಯಾದ ಜಾರ್ಜ್ ಬೇಲಿ: ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ 28 ರನ್ - 2013. ರನ್ ವಿವರ: 4,6,2,4,6,6

4. ದಕ್ಷಿಣ ಆಫ್ರಿಕಾದ ಕೇಶವ್ ಮಹರಾಜ್: ಇಂಗ್ಲೆಂಡ್ ಆಟಗಾರ ಜೋ ರೂಟ್ ಓವರ್‌ನಲ್ಲಿ 28 ರನ್ - 2019. ರನ್ ವಿವರ: 4,4,4,6,6 ಮತ್ತು ಬೈಸ್ 4

5. ಪಾಕಿಸ್ತಾನದ ಶಾಹಿದ್ ಅಫ್ರಿದಿ: ಟೀಮ್ ಇಂಡಿಯಾದ ಹರ್ಭಜನ್ ಸಿಂಗ್ ಓವರ್‌ನಲ್ಲಿ 27 ರನ್ - 2005. ರನ್ ವಿವರ: 6,6,6,6,2,1

6. ನ್ಯೂಜಿಲೆಂಡ್ ತಂಡದ ಮ್ಯಾಕ್ ಮಿಲನ್: ಪಾಕಿಸ್ತಾನದ ಯೂನಿಸ್ ಖಾನ್ ಓವರ್‌ನಲ್ಲಿ 26 ರನ್ - 2000. ರನ್ ವಿವರ: 4,4,4,4,6,4

7. ಬ್ರಿಯಾನ್ ಲಾರಾ: ಪಾಕಿಸ್ತಾನದ ದಾನಿಶ್ ಕನೇರಿಯಾ ಓವರ್‌ನಲ್ಲಿ 26 ರನ್ - 2006. ರನ್ ವಿವರ: 4,0,6,6,6,4

8. ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್: ದಕ್ಷಿಣ ಆಫ್ರಿಕಾದ ಪೌಲ್ ಹ್ಯಾರಿಸ್ ಓವರ್‌ನಲ್ಲಿ 26 ರನ್ - 2008. ರನ್ ವಿವರ: 4,4,6,0,6,6

9. ಬ್ರೆಂಡನ್ ಮೆಕಲಂ: ಶ್ರೀಲಂಕಾದ ಲಕ್ಮಲ್ ಓವರ್‌ನಲ್ಲಿ 26 ರನ್ - 2104. ರನ್ ವಿವರ: 4,6,6,0,4,6

10. ಹಾರ್ದಿಕ್ ಪಾಂಡ್ಯ: ಶ್ರೀಲಂಕಾದ ಪುಷ್ಪಕುಮಾರ ಓವರ್‌ನಲ್ಲಿ 26 ರನ್ - 2017. ರನ್ ವಿವರ: 4,4,6,6,6,0

ಬುಮ್ರಾ ಬ್ಯಾಟ್‌ನಿಂದಲೇ ಹರಿದು ಬಂತು 29 ರನ್!

ಬುಮ್ರಾ ಬ್ಯಾಟ್‌ನಿಂದಲೇ ಹರಿದು ಬಂತು 29 ರನ್!

ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ನಲ್ಲಿ ಒಟ್ಟು 35 ರನ್ ಹರಿದು ಬಂದರೆ ಅದರಲ್ಲಿ 5 ರನ್ ವೈಡ್ ಫೋರ್ ಆಗಿತ್ತು ಹಾಗೂ 1 ನೋ ಬಾಲ್ ಕೂಡ ಇತ್ತು. ಹೀಗೆ 6 ರನ್ ಹೆಚ್ಚುವರಿ ರನ್ ಆಗಿದ್ದರೆ, ಉಳಿದ 29 ರನ್ ಬುಮ್ರಾ ಬ್ಯಾಟ್‌ನಿಂದ ಸಿಡಿದ ರನ್ ಆಗಿವೆ. ಈ ಮೂಲಕ ಬ್ಯಾಟ್ ಮೂಲಕ ಟೆಸ್ಟ್ ಕ್ರಿಕೆಟ್ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ಕೂಡ ಜಸ್ಪ್ರೀತ್ ಬುಮ್ರಾ ಬರೆದಿದ್ದಾರೆ.

ಹತ್ತನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ನಾಯಕ!

ಹತ್ತನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ನಾಯಕ!

ಜಸ್ ಪ್ರೀತ್ ಬುಮ್ರಾ ಓವರ್ ಒಂದರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆ ಮಾತ್ರವಲ್ಲದೇ ಹತ್ತನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ ನಾಯಕ ಎಂಬ ದಾಖಲೆಯನ್ನು ಸಹ ಬರೆದಿದ್ದಾರೆ. 16 ಎಸೆತಗಳನ್ನು ಎದುರಿಸಿದ ಜಸ್ಪ್ರೀತ್ ಬುಮ್ರಾ ಅಜೇಯ 31 ರನ್ ಬಾರಿಸಿದರು.

Story first published: Saturday, July 2, 2022, 18:56 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X