ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಪಡಿಕ್ಕಲ್ ಸುನಾಮಿ; ಮಯಾಂಕ್ ಪಡೆಗೆ ಸೋಲುಣಿಸಿದ ಗುಲ್ಬರ್ಗಾ!

Maharaja Trophy: Devdutt Padikkals unbeaten 78 helps Gulbarga Mystics to beat Bengaluru Blasters

ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟೂರ್ನಿಯ 21ನೇ ಪಂದ್ಯ ಇಂದು ( ಆಗಸ್ಟ್ 18 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ ಗೆಲುವನ್ನು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಮಯಾಂಕ್ ಅಗರ್ವಾಲ್ ಪಡೆಯನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎದುರಾಳಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ 145 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಆಟದ ನೆರವಿನಿಂದ 17.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಕಲೆಹಾಕಿ 6 ವಿಕೆಟ್‌ಗಳ ಗೆಲುವನ್ನು ಕಂಡಿದೆ.

ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್

ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಎಲ್ ಆರ್ ಚೇತನ್ 6 ರನ್ ಕಲೆಹಾಕಿದರೆ, ನಾಯಕ ಮಯಾಂಕ್ ಅಗರ್ವಾಲ್ 28 ರನ್ ಬಾರಿಸಿದರು. ಇನ್ನುಳಿದಂತೆ ಅನೀಶ್ ಕೆವಿ 20, ಶಿವಕುಮಾರ್ ರಕ್ಷಿತ್ 16, ಅನಿರುದ್ಧ ಜೋಷಿ 4, ಕ್ರಾಂತಿ ಕುಮಾರ್ 17, ಜಗದೀಶ ಸುಚಿತ್ 17, ರೋನಿತ್ ಮೋರೆ ಡಕ್ ಔಟ್, ಪ್ರದೀಪ್ ಟಿ 8 ರನ್ ಹಾಗೂ ರಿಷಿ ಬೋಪಣ್ಣ ಅಜೇಯ 9 ರನ್ ಹಾಗೂ ಕುಮಾರ್ ಎಲ್ ಆರ್ ಅಜೇಯ 5 ರನ್ ಬಾರಿಸಿದರು.

ಗುಲ್ಬರ್ಗಾ ಮಿಸ್ಟಿಕ್ಸ್ ಪರ ವಿಧ್ವತ್ ಕಾವೇರಪ್ಪ ಮತ್ತು ಮನೋಜ್ ಭಂಡಾಗೆ ತಲಾ ಮೂರು ವಿಕೆಟ್ ಪಡೆದರೆ, ಕುಸಾಲ್ ವಧ್ವಾನಿ ಎರಡು ವಿಕೆಟ್ ಪಡೆದರು.

ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್

ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್

ಇನ್ನು ಬೆಂಗಳೂರು ಬ್ಲಾಸ್ಟರ್ಸ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಅಜೇಯ 78 ರನ್ ಚಚ್ಚಿದರೆ, ಮತ್ತೋರ್ವ ಆರಂಭಿಕ ಆಟಗಾರ ರೋಹನ್ ಪಾಟೀಲ್ 1 ರನ್ ಕಲೆಹಾಕಿದರು. ಇನ್ನುಳಿದಂತೆ ಜೆಸ್ವಂತ್ ಆಚಾರ್ಯ 18, ಕೃಷ್ಣನ್ ಶ್ರೀಜಿತ್ 12 ರನ್, ನಾಯಕ ಮನೀಶ್ ಪಾಂಡೆ 13 ಹಾಗೂ ಮನೋಜ್ ಭಂಡಾಗೆ ಅಜೇಯ 11 ರನ್ ಬಾರಿಸಿದರು.

ಒಂದೆಡೆ ತಂಡದ ಆಟಗಾರರು ಹೆಚ್ಚು ರನ್ ಕಲೆಹಾಕಲಾಗದೇ ವಿಕೆಟ್ ಒಪ್ಪಿಸುತ್ತಿದ್ದರೆ ಮತ್ತೊಂದೆಡೆ ಭದ್ರವಾಗಿ ನೆಲೆಯೂರಿದ್ದ ದೇವದತ್ ಪಡಿಕ್ಕಲ್ 7 ಬೌಂಡರಿ, 4 ಸಿಕ್ಸರ್ ಸಹಿತ 61 ಎಸೆತಗಳಲ್ಲಿ ಅಜೇಯ 78 ರನ್ ಬಾರಿಸಿದರು. ಇನ್ನು ವಿಕೆಟ್ ಕೀಪರ್ ಆಗಿ ಈ ಪಂದ್ಯದಲ್ಲಿ ಒಟ್ಟು ಐದು ಕ್ಯಾಚ್‌ಗಳನ್ನು ಪಡೆದು ಮಿಂಚಿದ ಪಡಿಕ್ಕಲ್ ಮೈದಾನಲ್ಲಿ ಸುನಾಮಿ ಎಬ್ಬಿಸಿದರು. ಪಡಿಕ್ಕಲ್ ತಮ್ಮ ಈ ಅದ್ಬುತ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಸಹ ಪಡೆದರು.

ಆಡುವ ಬಳಗ

ಆಡುವ ಬಳಗ

ಬೆಂಗಳೂರು ಬ್ಲಾಸ್ಟರ್ಸ್ ಆಡುವ ಬಳಗ: ಎಲ್ ಆರ್ ಚೇತನ್, ಮಯಾಂಕ್ ಅಗರ್ವಾಲ್ (ನಾಯಕ), ಅನೀಶ್ ಕೆವಿ, ಶಿವಕುಮಾರ್ ರಕ್ಷಿತ್ (ವಿಕೆಟ್ ಕೀಪರ್), ಅನಿರುದ್ಧ ಜೋಶಿ, ಜಗದೀಶ ಸುಚಿತ್, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ಕುಮಾರ್ ಎಲ್ ಆರ್, ರೋನಿತ್ ಮೋರೆ, ಪ್ರದೀಪ್ ಟಿ

ಗುಲ್ಬರ್ಗಾ ಮಿಸ್ಟಿಕ್ಸ್: ಜೇಸ್ವತ್ ಆಚಾರ್ಯ, ದೇವದತ್ ಪಡಿಕ್ಕಲ್, ರೋಹನ್ ಪಾಟೀಲ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಕೋದಂಡ ಅಜಿತ್ ಕಾರ್ತಿಕ್, ಮನೋಜ್ ಭಾಂಡಗೆ, ರಿತೇಶ್ ಭಟ್ಕಳ್, ಶ್ರೀಶ ಆಚಾರ್, ಕುಶಾಲ್ ವಾಧ್ವಾನಿ, ವಿಧ್ವತ್ ಕಾವೇರಪ್ಪ

Story first published: Thursday, August 18, 2022, 19:39 [IST]
Other articles published on Aug 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X