ಈ ವರ್ಷದ ವಿಮೆನ್ಸ್ ಟಿ20 ಚಾಲೆಂಜ್ ನಡೆಯುವ ಸಾಧ್ಯತೆ ಕಡಿಮೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಡೆಯುವ ವೇಳೆ ಮಹಿಳೆಯರ ಟಿ20 ಚಾಲೆಂಜ್‌ ಕೂಡ ನಡೆಯುತ್ತಿತ್ತು. ಮಹಿಳಾ ಟಿ20ಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಇನ್ ಇಂಡಿಯಾ (ಬಿಸಿಸಿಐ) ಈ ಟೂರ್ನಿಯನ್ನು 2018ರಲ್ಲಿ ಆರಂಭಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಎಚ್ಚರಿಸಿದ ಅಂಪೈರ್

ಈ ವರ್ಷ ಐಪಿಎಲ್ 14ನೇ ಆವೃತ್ತಿಯ ವೇಳೆ ಮಹಿಳಾ ಟಿ20 ಚಾಲೆಂಜ್ ನಡೆಯುತ್ತಿಲ್ಲ ಎಂದು ವರದಿಯೊಂದು ಹೇಳಿದೆ. ಭಾರತದಲ್ಲಿ ಕೊರೊನಾವೈರಸ್ ಪ್ರಕಣ ಭೀತಿ ಸೃಷ್ಠಿಸಿರುವುದರಿಂದ ಈ ಬಾರಿಯ ಟೂರ್ನಿ ನಡೆಯುತ್ತಿಲ್ಲ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಮೂರು ತಂಡಗಳು ಸೆಣಸಾಡುವ ಟಿ20 ಟೂರ್ನಿಯಿದು. ಪ್ರತೀ ವರ್ಷ ಐಪಿಎಲ್ ಪ್ಲೇ ಆಫ್‌ ಪಂದ್ಯಗಳ ವೇಳೆ ಈ ವಿಮೆನ್ಸ್ ಟಿ20 ಚಾಲೆಂಜ್ ಟೂರ್ನಿ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ದ್ವಿತೀಯ ಅಲೆ ದೇಶವನ್ನು ಸಂಕಷ್ಟಕ್ಕೆ ದೂಡಿರುವುದರಿಂದ ಈ ಬಾರಿಯ ಐಪಿಎಲ್‌ ಆಯೋಜನೆಯ ಬಗ್ಗೆಯೇ ಟೀಕೆಗಳು ಕೇಳಿಬರುತ್ತಿವೆ.

ಮುಂಬೈ ಅಲ್ಲ, ಚೆನ್ನೈ ಕೂಡ ಅಲ್ಲ, ಈ ಬಾರಿ ಕಪ್ ಈ ತಂಡದ್ದೇ ಎಂದ ರವಿ ಶಾಸ್ತ್ರಿ

ವಿಮೆನ್ಸ್ ಟಿ20 ಚಾಲೆಂಜ್‌ ಅಂದರೆ ಇದು ಒಂದರ್ಥದಲ್ಲಿ ಮಹಿಳಾ ಐಪಿಎಲ್‌ ಇದ್ದಂತೆ. ಸೂಪರ್‌ನೋವಾಸ್, ವೆಲಾಸಿಟಿ ಮತ್ತು ಟ್ರಯಲ್‌ಬ್ಲೇಝಲರ್ಸ್ ಹೆಸರಿನ ಮೂರು ತಂಡಗಳು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತವೆ. ಟ್ರೈಯಲ್‌ಬ್ಲೇಝರ್ಸ್ ಹಾಲಿ ಚಾಂಪಿಯನ್ಸ್ ಆಗಿದ್ದರೆ, ಸೂಪರ್‌ ನೋವಾಸ್ 2 ಬಾರಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, April 28, 2021, 16:27 [IST]
Other articles published on Apr 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X