ಶಮಿ-ಪತ್ನಿಗಾಗಲಿ, ಭಾರತಕ್ಕಾಗಲಿ ಮೋಸ ಮಾಡಲಾರ : ಧೋನಿ

Posted By:
Mohammed Shami couldn't cheat his wife and country: MS Dhoni

ಕೋಲ್ಕತಾ, ಮಾರ್ಚ್ 12: ತನ್ನ ಪತ್ನಿಗೆ ಹಿಂಸೆ ಮಾಡಿ, ಕಿರಿಕುಳ ನೀಡಿದ ಆರೋಪ ಹೊತ್ತಿರುವ ವೇಗಿ ಮೊಹಮ್ಮದ್ ಶಮಿ ಪರ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬ್ಯಾಟಿಂಗ್ ಮಾಡಿದ್ದಾರೆ. ಶಮಿ ಅವರು ತಮ್ಮ ಪತ್ನಿ ಹಾಗೂ ದೇಶಕ್ಕಾಗಲಿ ಮೋಸ ಮಾಡುವಂಥ ವ್ಯಕ್ತಿಯಲ್ಲ ಎಂದು ಧೋನಿ ಸಮರ್ಥಿಸಿಕೊಂಡಿದ್ದಾರೆ.

ಕೌಟುಂಬಿಕ ಕಲಹ ಕೇಸಿನಲ್ಲಿ ಸಿಲುಕಿರುವ ಶಮಿ ಅವರ ವಿರುದ್ಧ ದೇಶದ್ರೋಹ, ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಕೂಡಾ ಅವರ ಪತ್ನಿ ಹಸೀನ್ ಜಹಾನ್ ಹೊರೆಸಿದ್ದಾರೆ.

Mohammed Shami couldn't cheat his wife and country: MS Dhoni

27 ವರ್ಷ ವಯಸ್ಸಿನ ಶಮಿ ಅವರು ಸಭ್ಯ ಹಾಗೂ ದೇಶಪರ ಸದಾ ನಿಲ್ಲುವ ಆಟಗಾರ, ವೈಯಕ್ತಿಕ ವಿಷಯದ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ. ಆದರೆ, ದೇಶದ್ರೋಹ ಮಾಡುವಂಥ ವ್ಯಕ್ತಿಯಲ್ಲ ಎಂದು ಹೇಳಬಲ್ಲೆ ಎಂದಿದ್ದಾರೆ.

ಶಮಿ ಅವರ ಮಾವ ಮೊಹಮ್ಮದ್ ಹಸನ್ ಕೂಡಾ ಅಳಿಯ ಬೆಂಬಲಕ್ಕೆ ನಿಂತಿದ್ದಾರೆ. ಆತ ಎಂದಿಗೂ ಯಾರೊಂದಿಗೂ ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ.

Story first published: Monday, March 12, 2018, 18:56 [IST]
Other articles published on Mar 12, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ