ಪಂಜಾಬ್ ಕಿಂಗ್ಸ್ ವಿರುದ್ಧ ಸಂಜು ಸಿಂಗಲ್ ನಿರಾಕರಿಸಿದ ಸಂದರ್ಭದ ಅನುಭವ ಹೇಳಿದ ಮೋರಿಸ್

Chris Morris, ಮೊದಲ ಮ್ಯಾಚನ್ನು ನಾವು ಗೆಲ್ಬೋದಿತ್ತು !! ಆದರೆ ? | Filmibeat Kannada

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಅಂತಿಮ ಹಂತದದಲ್ಲಿ ರೋಚಕ ರೀತಿಯಲ್ಲಿ ತಿರುಗಿ ಬಿದ್ದು ಗೆಲುವಿಗೆ ಕಾರಣರಾಗಿದ್ದು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್. ಅಂತಿಮ ಎರಡು ಓವರ್‌ಗಳಲ್ಲಿ ನಾಲ್ಕು ಸಿಕ್ಸರ್ ಬಾರಿಸಿದ ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಗೆಲುವಿಗೆ ಕರಣರಾದರು. ಈ ಭರ್ಜರಿ ಪ್ರದರ್ಶನದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದದ ಮೊದಲ ಪಂದ್ಯದ ವಿಚಾರವಾಗಿ ಚರ್ಚೆಗಳು ನಡೆಯುತ್ತಿದೆ. ಅಂದು ಸಂಜು ಸ್ಯಾಮ್ಸನ್ ಕ್ರಿಸ್ ಮೋರಿಸ್‌ಗೆ ಒಂಟಿ ರನ್ ಓಡಿ ಸ್ಟ್ರೈಕ್ ಬಿಟ್ಟುಕೊಟ್ಟಿದ್ದರೆ ತಂಡದ ಗೆಲುವು ಸಾಧ್ಯವಾಗುತ್ತಿತ್ತಾ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿದೆ.

"ಅಂದು ನಾನು ವಾಪಾಸ್ ಹಿಂದಕ್ಕೆ ಓಡಿದರ ಬಗ್ಗೆ ನನಗೆ ಬೇಸರವಿಲ್ಲ. ಯಾಕೆಂದರೆ ಸಂಜು ಅದ್ಭುತವಾಗಿ ಬಾರಿಸುತ್ತಿದ್ದರು. ನಾನು ಎಷ್ಟು ವೇಗವಾಗಿ ಓಡಿದ್ದೆ ಎಂಬುದನ್ನು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಂಜು ಅಂದು ಕನಸಿನಲ್ಲಿ ಹೊಡೆದಂತೆ ಬಾರಿಸುತ್ತಿದ್ದರು" ಎಂದು ಕ್ರಿಸ್ ಮಾರಿಸ್ ವಿವರಿಸಿದ್ದಾರೆ.

ಐಪಿಎಲ್: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಹೈಲೈಟ್ಸ್‌

"ನನ್ನ ಪ್ರಕಾರ ಇಬ್ಬನಿ ಇಲ್ಲಿ ಸಾಕಷ್ಟು ಪರಿಣಾಮವನ್ನು ಬೀರಿತು. ಲೆಂತ್ ಬಾಲ್‌ಗಳನ್ನು ಅವರು ನಮಗಿಂತ ಉತ್ತಮವಾಗಿ ಎದುರಿಸಿದ್ದಾರೆ ಎಂದು ಭಾವಿಸುತ್ತೇನೆ" ಎಂದು ಕ್ರಿಸ್ ಮೋರಿಸ್ ಮೊದಲ ಗೆಲುವಿನ ನಂತರ ಪ್ರತಿಕ್ರಿಯೆ ನಿಡುತ್ತಾ ಹೇಳಿಕೊಂಡಿದ್ದಾರೆ.

"ಕ್ರಿಕೆಟ್‌ನಲ್ಲಿ ಈ ಏರಿಳಿತಗಳು ಹಿಂದೆಯೂ ಇತ್ತು ಈಗಲೂ ಇದೆ. ನನ್ನ ಪ್ರಕಾರ ಡೆಲ್ಲಿ ನಿಜಕ್ಕೂ ಅದ್ಭುತವಾಗಿ ಆಡಿದೆ. ಆದರೆ ಡೇವಿಡ್ ಮಿಲ್ಲರ್ ಶ್ರೇಷ್ಠವಾಗಿ ಆಡಿ ಪಂದ್ಯವನ್ನು ಅವರಿಂದ ಕಸಿದುಕೊಳ್ಳುವಂತೆ ಮಾಡಿದರು" ಎಂದು ಕ್ರಿಸ್ ಮೋರಿಸ್ ತಿಳಿಸಿದ್ದಾರೆ.

ಐಪಿಎಲ್: ಕೆಟ್ಟ ದಾಖಲೆ ಮುಂದುವರೆಸಿದ ಪೃಥ್ವಿ ಶಾ

ಇದಕ್ಕೂ ಮುನ್ನ ಡೆಲ್ಲಿ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಜಯ್‌ದೇವ್ ಉನಾದ್ಕಟ್ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. ನಾಲ್ಕು ಓವರ್‌ಗಳಲ್ಲಿ ಉನಾದ್ಕಟ್ ಕೇವಲ 15 ರನ್‌ ನೀಡಿ 3 ವಿಕೆಟ್ ಪಡೆದಿದ್ದರು. ಇದರಿಂದಾಗಿ ಡೆಲ್ಲಿ 148 ರನ್‌ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Friday, April 16, 2021, 9:17 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X