ಬ್ಯಾಟ್ ಹರಾಜಿಗಿಡಲಿದ್ದಾರೆ ಬಾಂಗ್ಲಾದೇಶ ಕ್ರಿಕೆಟಿಗ ಮುಷ್ಫಿಕರ್ ರಹೀಮ್

ಧಾಕಾ, ಏಪ್ರಿಲ್ 20: ಬಾಂಗ್ಲಾದೇಶ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್, ಕ್ರಿಕೆಟ್‌ನ ಸವಿನೆನಪು ಹಿಡಿದಿಟ್ಟಿದ್ದ ಬ್ಯಾಟನ್ನು ಹರಾಜಿಗಿಡಲು ನಿರ್ಧರಿಸಿದ್ದಾರೆ. ಕೊರೊನಾವೈರಸ್ ಸೋಂಕಿನ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸುವುದಕ್ಕಾಗಿ ಮುಷ್ಫಿಕರ್ ಬ್ಯಾಟ್ ಮಾರಾಟ ನಡೆಸಲಿದ್ದಾರೆ.
ಹರಾಜಿಗಿಡಲು ನಿರ್ಧರಿಸಿರುವ ಈ ಬ್ಯಾಟ್ ಮೂಲಕ ಮುಷ್ಫಿಕರ್, 2013ರಲ್ಲಿ ಶ್ರೀಲಂಕಾ ವಿರುದ್ಧ ದ್ವಿಶತಕ ಬಾರಿಸಿದ್ದರು. ನೆಚ್ಚಿನ ಬ್ಯಾಟನ್ನು ಮಾರಾಟ ಮಾಡಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಬಾಂಗ್ಲಕ್ಕೆ ನೆರವೀಯಲು ರಹೀಮ್ ಯೋಚಿಸಿದ್ದಾರೆ.
'ದ್ವಿಶತಕ ಬಾರಿಸಿದ್ದ ಬ್ಯಾಟನ್ನು ನಾನು ಹರಾಜಿಗಿಡುತ್ತಿದ್ದೇನೆ' ಎಂದು ಮುಷ್ಫಿಕರ್ ಹೇಳಿರುವುದಾಗಿ ಧಾಕಾ ಮೂಲದ ಮಾಧ್ಯಮ 'ಪ್ರೊಥೊಮ್ ಅಲೋ' ಹೇಳಿದೆ. ಮುಷ್ಫಿಕರ್ ಬಾಂಗ್ಲಾ ಪರ 70 ಟೆಸ್ಟ್ ಪಂದ್ಯಗಳಲ್ಲಿ 4413 ರನ್, 218 ಏಕದಿನ ಪಂದ್ಯಗಳಲ್ಲಿ 6174 ರನ್, 86 ಟಿ20ಐ ಪಂದ್ಯಗಳಲ್ಲಿ 1282 ರನ್ ಗಳಿಸಿದ್ದಾರೆ.
'ಆನ್‌ಲೈನ್‌ನಲ್ಲಿ ಬ್ಯಾಟನ್ನು ಹರಾಜಿಗಿಡುತ್ತಿದ್ದೇನೆ. ಅದಕ್ಕೆ ಎಷ್ಟು ಹಣ ಬರಲಿದೆ ಎಂದು ನೋಡೋಣ. ಸಂಗ್ರಹವಾಗುವ ಹಣವನ್ನು ನಾನು ಬಡ ಜನರಿಗೆ ನೀಡಲಿರುವುದರಿಂದ ನಿಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಬಿಡ್ ಹೆಚ್ಚಿಸಿ ಎಂದು ನಿಮ್ಮೆಲ್ಲರಲ್ಲಿ ನಾನು ಕೋರಿಕೊಳ್ಳುತ್ತಿದ್ದೇನೆ,' ಎಂದು ಮುಷ್ಫಿಕರ್ ವಿನಂತಿಸಿಕೊಂಡಿದ್ದಾರೆ. ಬಾಂಗ್ಲಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2000ಕ್ಕೂ ದಾಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications