ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯ ಅಂಡರ್-19 ತಂಡ ವಿಶ್ವಕಪ್ ಗೆದ್ದಿದ್ದು ಮಾರ್ಚ್ 2ರ ಇದೇ ದಿನ!

On This Day 2008 Virat Kohli’s team won U-19 World Cup

ನವದೆಹಲಿ, ಮಾರ್ಚ್ 2: ಈಗ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯ ಅಂಡರ್ 19 ತಂಡ ವಿಶ್ವಕಪ್ ಜಯಿಸಿದ್ದು ಮಾರ್ಚ್ 2ರ ಇದೇ ದಿನ. ಈ ಸಂಭ್ರಮಕ್ಕೆ ಇಂದಿಗೆ (ಮಾರ್ಚ್ 2) ಸುಮಾರು 11 ವರ್ಷಗಳಾಗಿವೆ. ಅಂದಿನ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಿಗೆ 19 ರನ್ ಬಾರಿಸಿದ್ದರು.

ಭಾರತ vs ಆಸ್ಟ್ರೇಲಿಯಾ, 1ನೇ ಏಕದಿನ, Live ಸ್ಕೋರ್‌ಕಾರ್ಡ್

1
45585

2008 ಮಾರ್ಚ್ 2ರಂದು ಕೌಲಾಲಂಪುರ್‌ನಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಪೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣಾ ಆಫ್ರಿಕಾ ತಂಡವನ್ನು 12 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಸೋಲಿಸಿ ಪ್ರಶಸ್ತಿ ಜಯಿಸಿತ್ತು.

ಭಾರತ vs ಆಸ್ಟ್ರೇಲಿಯಾ: ನೂತನ ಜೆರ್ಸಿ, ಹೊಸ ಹುಮ್ಮಸ್ಸಿನಲ್ಲಿ ಭಾರತ!ಭಾರತ vs ಆಸ್ಟ್ರೇಲಿಯಾ: ನೂತನ ಜೆರ್ಸಿ, ಹೊಸ ಹುಮ್ಮಸ್ಸಿನಲ್ಲಿ ಭಾರತ!

ಅಂದು ಕೊಹ್ಲಿ ಜೊತೆ ತಂಡದಲ್ಲಿ ಸೌರಭ್ ತಿವಾರಿ, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಸಿದ್ಧಾರ್ಥ್ ಕೌಲ್ ಮೊದಲಾದವರೂ ಇದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 45.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 159 ರನ್ ಪೇರಿಸಿತ್ತು.

ದಕ್ಷಿಣ ಆಫ್ರಿಕಾಕ್ಕೆ ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ 25 ಓವರ್‌ಗೆ 116 ರನ್ ಗುರಿ ನೀಡಲಾಗಿತ್ತು. ಆದರೆ ಆಫ್ರಿಕಾ 25 ಓವರ್‌ಗೆ 8 ವಿಕೆಟ್ ಕಳೆದು 103 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಭಾರತದ ಜಿತೇಶ್ ಆರ್ಗಲ್‌ಗೆ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ನ್ಯೂಜಿಲ್ಯಾಂಡ್‌ನ ಟಿಮ್ ಸೌಥೀಗೆ ಲಭಿಸಿತ್ತು.

Story first published: Saturday, March 2, 2019, 19:51 [IST]
Other articles published on Mar 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X