ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ ಬಾರಿ ಏಷ್ಯಾಕಪ್ ಆಡಿದ್ದ ಭಾರತ ಆಟಗಾರರ ಪೈಕಿ 9 ಆಟಗಾರರು ಈ ಬಾರಿ ತಂಡದಲ್ಲಿಲ್ಲ!

7 Indian players who have played 2018 Asia Cup are selected for 2022 Asia Cup

1984ರಲ್ಲಿ ಆರಂಭವಾದ ಏಷ್ಯಾ ಕಪ್ ಟೂರ್ನಿ 2018ರವರೆಗೂ ಒಟ್ಟು ಹದಿನೈದು ಬಾರಿ ನಡೆದಿದೆ. ಚೊಚ್ಚಲ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ರನ್ನರ್ ಅಪ್ ತಂಡವಾಗಿ ಹೊರ ಹೊಮ್ಮಿದರೆ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು ಹಾಗೂ 2018ರಲ್ಲಿ ನಡೆದ ಅಂತಿಮ ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

Asia Cup 2022: ಏಷ್ಯಾಕಪ್‌ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣAsia Cup 2022: ಏಷ್ಯಾಕಪ್‌ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ

ಹೀಗೆ ಚೊಚ್ಚಲ ಹಾಗೂ ಸದ್ಯ ಅಂತಿಮ ಏಷ್ಯಾಕಪ್ ಟೂರ್ನಿ ಎರಡರಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿರುವ ಟೀಮ್ ಇಂಡಿಯಾ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿದೆ. 2018ರಲ್ಲಿ ನಡೆದಿದ್ದ ಏಷ್ಯಾ ಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ವಿಶ್ರಾಂತಿಯ ಕಾರಣದಿಂದಾಗಿ ಅಲಭ್ಯರಾಗಿದ್ದ ಸಲುವಾಗಿ ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಿ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ರೋಚಕ ಜಯ ಸಾಧಿಸಿದ್ದ ಟೀಮ್ ಇಂಡಿಯಾಗೆ ಆ ಬಾರಿ ಒಟ್ಟು 16 ಆಟಗಾರರನ್ನೊಳಗೊಂಡ ಸ್ಕ್ವ್ಯಾಡ್ ಬಿಸಿಸಿಐನಿಂದ ಘೋಷಿಸಲ್ಪಟ್ಟಿತ್ತು.

CWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿCWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ

ಹೀಗೆ ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ 16 ಆಟಗಾರರು ಸದ್ಯ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ, ಈ ಪೈಕಿ ತಂಡದಲ್ಲಿ ಇನ್ನೂ ಸಹ ತಂಡದಲ್ಲಿ ಉಳಿದಿರುವ ಆಟಗಾರರು ಯಾರು ಹಾಗೂ ಸ್ಥಾನ ಕಳೆದುಕೊಂಡು ತಂಡದಿಂದ ಹೊರಗುಳಿದಿರುವ ಆಟಗಾರರು ಯಾರು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಕಳೆದ ಬಾರಿ ಏಷ್ಯಾಕಪ್ ಆಡಿದ್ದ ಆಟಗಾರರ ಪೈಕಿ 9 ಆಟಗಾರರು ಈ ಬಾರಿ ತಂಡದಲ್ಲಿಲ್ಲ

ಕಳೆದ ಬಾರಿ ಏಷ್ಯಾಕಪ್ ಆಡಿದ್ದ ಆಟಗಾರರ ಪೈಕಿ 9 ಆಟಗಾರರು ಈ ಬಾರಿ ತಂಡದಲ್ಲಿಲ್ಲ

2018ರಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿದ್ದ ಭಾರತ ತಂಡದಲ್ಲಿದ್ದ 16 ಆಟಗಾರರ ಪೈಕಿ ಮನೀಶ್ ಪಾಂಡೆ, ಶಿಖರ್ ಧವನ್, ಅಂಬಾಟಿ ರಾಯುಡು, ಕುಲ್‌ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್ ಮತ್ತು ಎಂಎಸ್ ಧೋನಿ ಈ 9 ಆಟಗಾರರು ಈ ಬಾರಿಯ ಏಷ್ಯಾಕಪ್‌ನಲ್ಲಿ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಈ ಪೈಕಿ ಎಂಎಸ್ ಧೋನಿ ನಿವೃತ್ತಿ ಹೊಂದಿದ್ದರೆ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದಾಗಿ ಆಯ್ಕೆಗೆ ಅಲಭ್ಯರಾಗಿದ್ದರು. ಈ ಇಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲಾ 7 ಆಟಗಾರರು ಉತ್ತಮ ಆಟವನ್ನಾಡಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಇನ್ನು ಕಳೆದ ಬಾರಿಯ ಏಷ್ಯಾಕಪ್ ಟೂರ್ನಿ ಹಾಗೂ ಈ ಬಾರಿಯ ಏಷ್ಯಾಕಪ್ ಟೂರ್ನಿ ಎರಡಕ್ಕೂ ಆಯ್ಕೆಯಾಗಿರುವ ಆಟಗಾರರೆಂದರೆ: ರೋಹಿತ್ ಶರ್ಮಾ ( ನಾಯಕ ), ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ದೀಪಕ್ ಚಹಾರ್ ಮತ್ತು ರವೀಂದ್ರ ಜಡೇಜಾ.

ಕಳೆದ ಬಾರಿ ತಂಡದಲ್ಲಿರಲಿಲ್ಲ ವಿರಾಟ್ ಕೊಹ್ಲಿ

ಕಳೆದ ಬಾರಿ ತಂಡದಲ್ಲಿರಲಿಲ್ಲ ವಿರಾಟ್ ಕೊಹ್ಲಿ

ಇನ್ನು ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಗೆ ಅಂದು ಭಾರತ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದರು. ವಿಶ್ರಾಂತಿಯ ಕಾರಣದಿಂದಾಗಿ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿದ್ದ ಕಾರಣ ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು ಹಾಗೂ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿದ್ದ ತಂಡ

ಕಳೆದ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿದ್ದ ತಂಡ

ರೋಹಿತ್ ಶರ್ಮಾ ( ನಾಯಕ ), ಕೆಎಲ್ ರಾಹುಲ್, ಮನೀಶ್ ಪಾಂಡೆ, ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಕುಲ್‌ದೀಪ್ ಯಾದವ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ದೀಪಕ್ ಚಹಾರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ.

Story first published: Tuesday, August 9, 2022, 16:29 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X