ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಆಂಗ್ಲ ವೇಗಿ ಸ್ಟುವರ್ಟ್ ಬ್ರಾಡ್ ಹೊರಕ್ಕೆ!

Pacer Stuart Broad ruled out of entire India-England Test series

ಲಂಡನ್: ಭಾರತ vs ಇಂಗ್ಲೆಂಡ್ ದ್ವಿತೀಯ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಆಘಾತಕಾರಿ ಸಂಗತಿ ಕೇಳಿ ಬಂದಿದೆ. ಅದೇನೆಂದರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಇನ್ನುಳಿದ ಎಲ್ಲಾ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಸುಮಾರು ದಶಕದ ಕಾಲಾವಧಿ ಬಳಿಕ ಇಂಗ್ಲೆಂಡ್‌ ತಂಡದಿಂದ ಇಬ್ಬರು ಆಟಗಾರರು ಹೊರ ಬಿದ್ದು ಆಂಗ್ಲ ತಂಡ ದುರ್ಬಲವಾದಂತಾಗಿದೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿ

35ರ ಹರೆಯದ ಸ್ಟುವರ್ಟ್ ಬ್ರಾಡ್ ಗಾಯಕ್ಕೀಡಾಗಿ ಟೆಸ್ಟ್‌ ಸರಣಿಯಿಂದ ಹೊರ ಬೀಳುವ ಭೀತಿಯಲ್ಲಿದ್ದರು. ಆದರೆ ಈಗ ಇನ್ನುಳಿದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಬ್ರಾಡ್ ಹೊರ ಬಿದ್ದಿರುವ ಸಂಗತಿ ಖಾತರಿಯಾಗಿದೆ. ಹಿಂಗಾಲಿನ ಸ್ನಾಯು (ಕಾಫ್) ನೋವಿಗೀಡಾಗಿರುವ ಬ್ರಾಡ್ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.

ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್ ಇಬ್ಬರಿಗೂ ಗಾಯ

ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್ ಇಬ್ಬರಿಗೂ ಗಾಯ

ಆಗಸ್ಟ್ 12ರಿಂದ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯ ಆರಂಭಗೊಳ್ಳಲಿದೆ. ಇದರಲ್ಲಿ ಸ್ಟುವರ್ಟ್ ಬ್ರಾಡ್ ಆಡಿದ್ದರೆ ಅದು ಅವರ 150ನೇ ಟೆಸ್ಟ್‌ ಪಂದ್ಯ ಅನ್ನಿಸಿಕೊಳ್ಳುತ್ತಿತ್ತು. ಆದರೆ ಗಾಯಕ್ಕೀಡಾಗಿರುವ ಬ್ರಾಡ್‌ಗೆ ಭಾರತದ ವಿರುದ್ಧದ ಸರಣಿಯಲ್ಲಿ ಆಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಇನ್ನು 39ರ ಹರೆಯದ ಮತ್ತೊಬ್ಬ ವೇಗಿ ಜೇಮ್ಸ್ ಆ್ಯಂಡರ್ಸನ್ ಕೂಡ ತೊಡೆ (ಥೈ) ನೋವಿಗೆ ತುತ್ತಾಗಿದ್ದಾರೆ. ಬುಧವಾರ (ಆಗಸ್ಟ್ 11) ಅಭ್ಯಾಸದ ವೇಳೆ ಆ್ಯಂಡರ್ಸನ್ ಗಾಯಕ್ಕೀಡಾಗಿದ್ದರು. ಬ್ರಾಡ್ ಮಂಗಳವಾರ (ಆಗಸ್ಟ್ 10) ಅಭ್ಯಾಸ ಮಾಡುವಾಗ ನೋವಿಗೆ ಒಳಗಾಗಿದ್ದರು. ಕಳೆದ ವಾರ ಮೊದಲನೇ ಟೆಸ್ಟ್ ಪಂದ್ಯದ ವೇಳೆಯೂ ಇಂಗ್ಲೆಂಡ್‌ ತಂಡದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ದ್ವಿತೀಯ ಪಂದ್ಯಕ್ಕೂ ಅದೇ ಪರಿಸ್ಥಿತಿ ಎದುರಾಗಿದೆ. ಅಂದ್ಹಾಗೆ ಮೊದಲನೇ ಟೆಸ್ಟ್‌ ಪಂದ್ಯ ಮಳೆಯ ಕಾರಣ ಡ್ರಾ ಅನ್ನಿಸಲ್ಪಟ್ಟಿತ್ತು.

ಎರಡನೇ ಅತೀ ಯಶಸ್ವಿ ಬೌಲರ್ ಎಂಬ ದಾಖಲೆ

ಎರಡನೇ ಅತೀ ಯಶಸ್ವಿ ಬೌಲರ್ ಎಂಬ ದಾಖಲೆ

524 ಟೆಸ್ಟ್‌ ವಿಕೆಟ್ ಪಡೆದಿರುವ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಬೌಲರ್‌ಗಳಲ್ಲೇ ಎರಡನೇ ಅತೀ ಯಶಸ್ವಿ ಬೌಲರ್ ಎಂಬ ದಾಖಲೆಗೆ ಕಾರಣರಾಗಿದ್ದಾರೆ. ಈ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿರುವ ಜೇಮ್ಸ್ ಆ್ಯಂಡರ್ಸನ್ 621 ಟೆಸ್ಟ್‌ ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಟೆಸ್ಟ್ ಇತಿಹಾಸದಲ್ಲೇ ಸಾರ್ವಕಾಲಿಕ ಶ್ರೇಷ್ಠ ದಾಖಲೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ. "ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಬಲ ಹಿಂಗಾಲಿನ ಸ್ನಾಯು ತೀವ್ರ ಗಾಯಕ್ಕೀಡಾಗಿದೆ. ಹೀಗಾಗಿ ಅವರು ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ," ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಂಗ್ಲೆಂಡ್ ತಂಡಕ್ಕೆ ಬೌಲರ್‌ಗಳ ಅಗತ್ಯವಿರುವುದರಿಂದ ಅನುಭವಿ ಸ್ಪಿನ್ನರ್ ಮೊಯೀನ್ ಅಲಿಗೆ ಕರೆ ನೀಡಲಾಗಿದೆ. ಇಂಗ್ಲೆಂಡ್‌ ಪಾಲಿಗೆ ಬೇಸರದ ಸಂಗತಿಯೆಂದರೆ ತಂಡದ ಮತ್ತೊಬ್ಬ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಕೂಡ ತಂಡದಲ್ಲಿ ಆಡುತ್ತಿಲ್ಲ. ಇಬ್ಬರೂ ಈ ಮೊದಲೇ ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ಬಿದ್ದಿದ್ದರು.

ಇಂಗ್ಲೆಂಡ್‌ ತಂಡ ಮತ್ತು ಭಾರತೀಯ ಲಭ್ಯ ತಂಡ

ಇಂಗ್ಲೆಂಡ್‌ ತಂಡ ಮತ್ತು ಭಾರತೀಯ ಲಭ್ಯ ತಂಡ

ಭಾರತ ಲಭ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಹನುಮ ವಿಹಾರಿ , ಅಕ್ಷರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.


ಇಂಗ್ಲೆಂಡ್ ಲಭ್ಯ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾವ್ಲಿ, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಡೇನಿಯಲ್ ಲಾರೆನ್ಸ್, ಜೋಸ್ ಬಟ್ಲರ್ (ಡಬ್ಲ್ಯೂ), ಸ್ಯಾಮ್ ಕರನ್, ಆಲ್ಲಿ ರಾಬಿನ್ಸನ್, ಮೊಯೀನ್ ಅಲಿ, ಹಸೀಬ್ ಹಮೀದ್, ಮಾರ್ಕ್ ವುಡ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್ , ಓಲ್ಲಿ ಪೋಪ್, ಜ್ಯಾಕ್ ಲೀಚ್.

Story first published: Wednesday, August 11, 2021, 22:40 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X