ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಕೆಟ್ ಪಡೆದು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ ಪಾಕಿಸ್ತಾನ ಬೌಲರ್ ಹ್ಯಾರಿಸ್ ರೌಫ್

Haris rauf

ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಪ್ರಸ್ತುತ ನಡೆಯುತ್ತಿರುವ ಬಿಗ್‌ ಬ್ಯಾಷ್ ಲೀಗ್ 2021ರ ಟೂರ್ನಿಯಲ್ಲಿ ವಿಕೆಟ್ ಪಡೆದ ಬಳಿಕ ಬಹಳ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಮೆಲ್ಬರ್ನ್ ಸ್ಟಾರ್ಸ್ ಪರ ಆಡುವ ಹ್ಯಾರಿಸ್, ಪರ್ತ್‌ ಸ್ಕಾಚರ್ಸ್‌ ಬ್ಯಾಟ್ಸ್‌ಮನ್ ಕುರ್ಟಿಸ್ ಪ್ಯಾಟರ್ಸನ್ ಅವರನ್ನು ಔಟ್‌ ಮಾಡಿದ ನಂತರ ತಮ್ಮ ಕೈಗಳಿಗೆ ಸ್ಯಾನಿಟೈಸರ್ ಹಾಕಿಕೊಂಡು ಸ್ವಚ್ಚಗೊಳಿಸುವಂತೆ ಮತ್ತು ಮಾಸ್ಕ್‌ ಧರಿಸಿ ಕೋವಿಡ್ ಕುರಿತಾದ ಮುನ್ನೆಚ್ಚರಿಕೆಯನ್ನ ಸನ್ನೆ ಮಾಡಿದರು.

ವಾಷಿಂಗ್ಟನ್‌ ಸುಂದರ್‌ಗೆ ಕೊರೊನಾ ಪಾಸಿಟಿವ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಡೌಟ್ವಾಷಿಂಗ್ಟನ್‌ ಸುಂದರ್‌ಗೆ ಕೊರೊನಾ ಪಾಸಿಟಿವ್: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಡೌಟ್

ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ನಡುವಿನ ಪಂದ್ಯದ ಮೂರನೇ ಓವರ್‌ನಲ್ಲಿ ಈ ಸಂಭ್ರಮಾಚರಣೆ ನಡೆಯಿತು. ರೌಫ್ ಚೆಂಡನ್ನು ಆಫ್ ಸ್ಟಂಪ್ ಹೊರಗೆ ಬೌಲಿಂಗ್ ಮಾಡಿದ್ರು ಮತ್ತು ಬ್ಯಾಟ್ಸ್‌ಮನ್ ಕುರ್ಟಿಸ್ ಪ್ಯಾಟರ್ಸನ್ ಕವರ್ ಡ್ರೈವ್ ಆಡಲು ಪ್ರಯತ್ನಿಸಿ ವಿಫಲಗೊಂಡು ನೇರವಾಗಿ ವಿಕೆಟ್ ಕೀಪರ್ ಜೋ ಕ್ಲಾರ್ಕ್ಗೆ ಕ್ಯಾಚಿತ್ತರು. ಇದಾದ ಬಳಿಕ ಹ್ಯಾರಿಸ್ ರೌಫ್ ವಿಶಿಷ್ಟ ರೀತಿಯಲ್ಲಿ ವಿಕೆಟೆ್ ಸಂಭ್ರಮಿಸಿದ್ರು.

ತನ್ನ ಜೇಬಿನಿಂದ ಸ್ಯಾನಿಟೈಸರ್ ತೆಗೆದುಕೊಂಡು ಕೈಗಳನ್ನು ಸ್ಯಾನಿಟೈಜ್ ಮಾಡುವಂತೆ ವರ್ತಿಸಿದ ರೌಫ್, ನಂತರ ತನ್ನ ಜೇಬಿನಿಂದ ಮಾಸ್ಕ್‌ ಹೊರತೆಗೆದು ಅದನ್ನು ಧರಿಸಿದರು. ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಪ್ಯಾಟರ್ಸನ್ ಔಟಾದ ಬಳಿಕ, ಪರ್ತ್ ಸ್ಕಾರ್ಚರ್ಸ್ ಬಲಿಷ್ಠವಾಗಿ ಕಂಬ್ಯಾಕ್ ಮಾಡಿತು. ಟರ್ನರ್, ಲಾರಿ ಇವಾನ್ಸ್ ಮತ್ತು ನಿಕ್ ಹಾಬ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ 196 ರನ್ ಗಳಿಸಲು ಸಾಧ್ಯವಾಯಿತು. ಅಲ್ಲದೆ, ಹ್ಯಾರಿಸ್ ರೌಫ್ ತಮ್ಮ ನಾಲ್ಕು ಓವರ್‌ಗಳಲ್ಲಿ 38 ರನ್‌ಗಳಿಗೆ 2 ವಿಕೆಟ್‌ಗಳನ್ನು ಗಳಿಸಿದರು.

Ross Taylor ಕಡೇ ಪಂದ್ಯದ ಕಡೇ ಎಸೆತದಲ್ಲಿ ಮಾಡಿದ Magic | Oneindia Kannada

ಈ ಗುರಿಯನ್ನ ಬೆನ್ನತ್ತಿದ ಮೆಲ್ಬರ್ಸ್ ಸ್ಟಾರ್ಸ್‌ ಪರ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ರನ್‌ಗಳಿಸಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದ್ರು. ಪರಿಣಾಮ ಮೆಲ್ಬರ್ನ್‌ ಸ್ಟಾರ್ಸ್ ಪಂದ್ಯವನ್ನು 47 ರನ್‌ಗಳಿಂದ ಕಳೆದುಕೊಂಡಿತು.

Story first published: Tuesday, January 11, 2022, 18:57 [IST]
Other articles published on Jan 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X