ಮತ್ತೆ ಶಂಕಾಸ್ಪದ ಬೌಲಿಂಗ್ ಸುಳಿಗೆ ಸಿಲುಕಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗ

Posted By:

ನವದೆಹಲಿ, ನವೆಂಬರ್ 17 : ಪಾಕಿಸ್ತಾನ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಮೊಹಮ್ಮದ್ ಹಫೀಜ್ ಮತ್ತೆ ಶಂಕಾಸ್ಪದ ಬೌಲಿಂಗ್ ಸುಳಿಗೆ ಸಿಲುಕಿ ಮೂರನೇ ಬಾರಿಗೆ ನಿಷೇಧಕ್ಕೆ ಗುರಿಯಾಗಿದೆ.

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶಂಕಾಸ್ಪದ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಿಷೇಧ ಹೇರಿದೆ.

Pakistan’s Mohammad Hafeez suspended from bowling in internationals

ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅನುಮಾನಾಸ್ಪಾದ ಬೌಲಿಂಗ್ ಶೈಲಿಯಿಂದಾಗಿ ಅಂಪೈರ್ ಐಸಿಸಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಶೀಲಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಯಮ ಉಲ್ಲಂಘನೆಯನ್ನು ಖಚಿತಪಡಿಸಿದೆ.

ಈ ಹಿನ್ನೆಲೆಯಲ್ಲಿ ತತ್ ಕ್ಷಣದಿಂದ ಜಾರಿಗೆ ಬರುವಂತೆಯೇ ಹಫೀಜ್ ಬೌಲಿಂಗ್ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ. 37 ವರ್ಷದ ಹಫೀಜ್ 2014 ಮತ್ತು 2015ರಲ್ಲಿ ಇದೇ ಶಂಕಾಸ್ಪದ ಬೌಲಿಂಗ್ ಸುಳಿಯಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿದ್ದರು.

2016ರಲ್ಲಿ ಬೌಲಿಂಗ್ ಮರುಪರಿಶೀಲನೆಗೊಳಗಾಗಿ ತೊಡಕುಗಳನ್ನೆಲ್ಲ ನಿವಾರಿಸಿ ಐಸಿಸಿಯಿಂದ ಕ್ಲಿನ್ ಚಿಟ್ ಪಡೆದು ಬೌಲಿಂಗ್ ಮುಂದುವರಿಸಿದ್ದರು. ಇದೀಗ ಮತ್ತೆ ಅದೇ ಚಾಳಿಯನ್ನು ಮುಂದುವರೆಸಿ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Story first published: Friday, November 17, 2017, 0:10 [IST]
Other articles published on Nov 17, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ