ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ಮಿ ಕ್ಯಾಪ್ ಧರಿಸಿದ ಟೀಮ್ ಇಂಡಿಯಾ ವಿರುದ್ಧ ಕ್ರಮಕ್ಕೆ ಪಾಕ್ ಒತ್ತಾಯ!

Pakistan demands ICC action against India for wearing military cap

ರಾಂಚಿ, ಮಾರ್ಚ್ 9: ರಾಂಚಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರ್ಮಿ ಕ್ಯಾಪ್ ಧರಿಸಿತ್ತು. ಇದಕ್ಕಾಗಿ ಭಾರತ ಕ್ರಿಕೆಟ್ ತಂಡದ ಮೇಲೆ ಕ್ರಮ ಜರುಗಿಸುವಂತೆ ಪಾಕಿಸ್ತಾನವು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನ್ನು ಒತ್ತಾಯಿಸಿದೆ.

ಭಾರತ vs ಆಸೀಸ್: 4ನೇ ಏಕದಿನಕ್ಕೆ ಭಾರತದ ಸಂಭಾವ್ಯ XI ಆಟಗಾರರುಭಾರತ vs ಆಸೀಸ್: 4ನೇ ಏಕದಿನಕ್ಕೆ ಭಾರತದ ಸಂಭಾವ್ಯ XI ಆಟಗಾರರು

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ಸೂಚಿಸಿ ಮತ್ತು ಮೃತ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಭಾರತ ಕ್ರಿಕೆಟ್ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ (ಮಾರ್ಚ್ 8) ನಡೆದ 3ನೇ ಏಕದಿನ ಪಂದ್ಯದಲ್ಲಿ ಕ್ಯಾಮೋಫ್ಲ್ಯಾಜ್ ಮಿಲಿಟರಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದಿತ್ತು.

ಏಕದಿನ ಅದ್ಭುತ ಬ್ಯಾಟಿಂಗ್‌ಗಾಗಿ ಮೈಕೆಲ್ ಬೆವನ್ ಸಾಲಿನಲ್ಲಿ ವಿರಾಟ್ ಕೊಹ್ಲಿಏಕದಿನ ಅದ್ಭುತ ಬ್ಯಾಟಿಂಗ್‌ಗಾಗಿ ಮೈಕೆಲ್ ಬೆವನ್ ಸಾಲಿನಲ್ಲಿ ವಿರಾಟ್ ಕೊಹ್ಲಿ

ಆದರೆ ಟೀಮ್ ಇಂಡಿಯಾದ ಈ ನಡವಳಿಕೆ ಪಾಕಿಸ್ತಾನಕ್ಕೆ ಸರಿ ಕಂಡಿಲ್ಲ. ಭಾರತವು ಕ್ರಿಕೆಟ್‌ನಲ್ಲಿ ರಾಜಕೀಯವನ್ನು ನುಸುಳಿಸುತ್ತಿದೆ ಎಂದು ಬಿಸಿಸಿಗೆ ಆರೋಪಿಸಿರುವ ಪಾಕಿಸ್ತಾನ, ಭಾರತ ಕ್ರಿಕೆಟ್ ತಂಡದ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದೆ.

ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಈ ಬಗ್ಗೆ ಮಾತನಾಡಿ, 'ತನ್ನ ತಂಡದ ಕ್ರಿಕೆಟ್ ಕ್ಯಾಪ್ ಧರಿಸುವ ಬದಲು ಭಾರತ ಮಿಲಿಟರಿ ಕ್ಯಾಪ್ ಧರಿಸಿದ್ದನ್ನು ಇಡೀ ವಿಶ್ವವೇ ನೋಡಿದೆ. ಇದನ್ನು ಐಸಿಸಿ ನೋಡಿಲ್ಲವೆ? ಪಾಕಿಸ್ತಾನ ಕ್ರಿಕೆಟ್ ಬೋರ್ಡನ್ನು ಎಳೆದು ತಾರದೆ ಭಾರತ ಕ್ರಿಕೆಟ್ ತಂಡದ ವಿರುದ್ಧ ಕ್ರಮ ಜರುಗಿಸುವುದು ಐಸಿಸಿ ಜವಾಬ್ದಾರಿ ಎಂದು ನಾವು ಭಾವಿಸಿದ್ದೇವೆ' ಎಂದಿದ್ದಾರೆ.

Story first published: Saturday, March 9, 2019, 17:40 [IST]
Other articles published on Mar 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X