ಪಾಕಿಸ್ತಾನದ ಮತ್ತೊಬ್ಬ ಮಾಜಿ ಕ್ರಿಕೆಟ್ ಆಟಗಾರ ಕೊರೊನಾವೈರಸ್‌ಗೆ ಬಲಿ

ಲಾಹೋರ್, ಜೂನ್ 3: ಪಾಕಿಸ್ತಾನದ ಮಾಜಿ ಪ್ರಥಮದರ್ಜೆ ಕ್ರಿಕೆಟರ್ ರಿಯಾಝ್ ಶೇಖ್ ಕೊರೊನಾವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಪಾಕ್‌ನಲ್ಲಿ ಕೋವಿಡ್ 19ಗೆ ಇಬ್ಬರು ವೃತ್ತಿಪರ ಆಟಗಾರರು ಬಲಿಯಾದಂತಾಗಿದೆ. ಶೇಖ್‌ಗೆ 51 ವರ್ಷ ವಯಸ್ಸಾಗಿತ್ತು.
ಮೂಲಗಳ ಪ್ರಕಾರ, ಆರೋಗ್ಯ ಅಧಿಕಾರಿಗಳು ರಿಯಾಝ್ ಶೈಖ್ ಸಾವಿಗೆ ನಿಖರ ಕಾರಣ ಪತ್ತೆಹಚ್ಚುವ ಮುನ್ನವೇ ಶೇಖ್ ಕುಟುಂಬಸ್ಥರು ಶೇಖ್ ಅವರನ್ನು ಸಮಾಧಿ ಮಾಡಿದ್ದಾರೆ ಎನ್ನಲಾಗಿದೆ. ಮಂಗಳವಾರ (ಜೂನ್ 2) ಮುಂಜಾನೆ ಶೇಖ್ ಅಸುನೀಗಿರುವುದಾಗಿ ತಿಳಿದುಬಂದಿದೆ.
ಲೆಗ್ ಸ್ಪಿನ್ನರ್ ಆಗಿದ್ದ ರಿಯಾಝ್ ಶೇಖ್ 1987 ರಿಂದ 2005ರವರೆಗೆ 43 ಪ್ರಥಮದರ್ಜೆ ಪಂದ್ಯಗಳಲ್ಲಿ 116 ವಿಕೆಟ್ ದಾಖಲೆ ಹೊಂದಿದ್ದರು. ಅಷ್ಟೇ ಅಲ್ಲ, ಒಂದು ಬಾರಿ ರಾಷ್ಟ್ರೀಯ ತಂಡಕ್ಕೂ ಪರಿಗಣಿಸಲ್ಪಟ್ಟಿದ್ದರು ಎಂಬ ಮಾಹಿತಿ ಲಭಿಸಿದೆ. ರಿಯಾಝ್ ಗೂ ಮುನ್ನ ಪಾಕ್ ಕ್ರಿಕೆಟರ್ ಸರ್ಫರಾಜ್ (50) ಕೊರೊನಾವೈರಸ್ ಗೆ ಬಲಿಯಾಗಿದ್ದರು.
'ಶೇಖ್ ಕುಟುಂಬಸ್ಥರು ಶೇಖ್ ಅವರನ್ನು ಅವಸರ ಅವಸರವಾಗಿ ಸಮಾಧಿ ಮಾಡಿದ್ದಾರೆ. ಆದರೆ ಅವರ ನೆರೆಹೊರೆಯವರ ಪ್ರಕಾರ ರಿಯಾಝ್‌ಗೆ ಕೊರೊನಾ ಸೋಂಕು ತಗುಲಿತ್ತು, ಹೀಗಾಗಿಯೇ ಕುಟುಂಬಸ್ಥರಿಗೆ ಕೊರೊನಾ ಪ್ರಕ್ರಿಯೆಗೆ ಕಾಯಲು ಇಷ್ಟವಿರಲಿಲ್ಲ,' ಎಂದು ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications