ಕ್ರಿಕೆಟ್: ಖವಾಜಾ ಅದ್ಭುತ ಆಟ: ಸೋಲುವ ಪಂದ್ಯ ಉಳಿಸಿಕೊಂಡ ಆಸ್ಟ್ರೇಲಿಯಾ

ದುಬೈ, ಅಕ್ಟೋಬರ್ 12: ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರ ಅಮೋಘ ತಾಳ್ಮೆಯ ಆಟದ ನೆರವಿನಿಂದ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧ ಸೋಲಿನ ಭೀತಿಯಲ್ಲಿದ್ದ ಪಂದ್ಯವನ್ನು ನಾಟಕೀಯ ರೀತಿಯಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಾಯಕ ಟಿಮ್ ಪೈನ್ ಕೂಡ ಪಾಕಿಸ್ತಾನದ ಸ್ಪಿನ್ನರ್‌ಗಳ ದಾಳಿಯನ್ನು ಸಮರ್ಪಕವಾಗಿ ಎದುರಿಸುವ ಮೂಲಕ ಕೊನೆಯಲ್ಲಿ ವಿಕೆಟ್ ಕಾಯ್ದುಕೊಂಡು ತಂಡವನ್ನು ಡ್ರಾದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸೋಲುವುದು ನಿಶ್ಚಿತ ಎಂದೇ ಭಾವಿಸಿದ್ದ ತಂಡ ಸೆಟೆದು ನಿಂತು ಆಡಿ ಡ್ರಾ ಸಾಧಿಸಿದ ಬಗೆಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಚೆಂಡು ವಿರೂಪ ಹಗರಣದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಮ್ಮ ವರ್ಚಸ್ಸಿನ ಜತೆಗೆ ಲಯವನ್ನು ಸಹ ಕಳೆದುಕೊಂಡಿತ್ತು. ಈ ಛಲದ ಆಟ ಅದರ ಉತ್ಸಾಹವನ್ನು ಮರಳಿ ತಂದಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ನ ಹೊಸ ಯುಗ ಆರಂಭವಾಗಿದೆ ಎಂದು ವಿಶ್ಲೇಷಿಸಲಾಗಿದೆ..

ಪಾಕ್- ಆಸ್ಟ್ರೇಲಿಯಾ ಟೆಸ್ಟ್: ಪಾದಾರ್ಪಣೆಯಲ್ಲೇ ವಿಶೇಷ ದಾಖಲೆಗಳು

ಗೆಲುವಿಗೆ 462 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ, ಬುಧವಾರ ಮೂರು ವಿಕೆಟ್ ಕಳೆದುಕೊಂಡು 136 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಥಮ ವಿಕೆಟ್ ಜತೆಯಾಟಕ್ಕೆ 142 ರನ್ ಸೇರಿಸಿ, ಮತ್ತೆ 60 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. ಪಾಕ್ ಸ್ಪಿನ್ನರ್‌ಗಳನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ತಡಬಡಾಯಿಸಿದ್ದರು.

ಹೀಗಾಗಿ ಕಡೆಯ ದಿನವಾದ ಗುರುವಾರ ಕೂಡ ಆಸ್ಟ್ರೇಲಿಯಾವನ್ನು ಕಟ್ಟಿಹಾಕುವುದು ಕಷ್ಟವಲ್ಲ ಎಂದು ಪಾಕ್ ತಂಡ ಭಾವಿಸಿತ್ತು. ಯಾಸಿರ್ ಶಾ, ವಹಾಬ್ ರಿಯಾಜ್, ಮೊಹಮ್ಮದ್ ಅಬ್ಬಾಸ್, ಬಿಲಾಲ್ ಆಸಿಫ್‌ ಅವರ ಪ್ರಭಾವಿ ಬೌಲಿಂಗ್ ಪಡೆಯ ಬೆಂಬಲವಿತ್ತು. ಆದರೆ, ಪಾಕ್ ಲೆಕ್ಕಾಚಾರವನ್ನು ಖವಾಜಾ ಮತ್ತು ಪೈನ್ ತಲೆಕೆಳಗಾಗಿಸಿದರು.

ಕಾಡಿದ ಖವಾಜಾ-ಹೆಡ್

ಕಾಡಿದ ಖವಾಜಾ-ಹೆಡ್

ಖವಾಜಾ ಮತ್ತು ಟ್ರಾವಿಸ್ ಹೆಡ್ ನಾಲ್ಕನೆಯ ವಿಕೆಟ್‌ಗೆ 50 ಓವರ್‌ಗಳ ಆಟವಾಡಿ 132 ರನ್‌ಗಳನ್ನು ಸೇರಿಸಿದರು. 175 ಎಸೆತಗಳಲ್ಲಿ 72 ರನ್ ಗಳಿಸಿದ್ದ ಹೆಡ್, ಹಫೀಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಮಾರ್ನಸ್ ಲಬುಶ್ಚಗ್ನೆ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಮಯಾಂಕ್ ಗೆ ಕೈ ಕೊಟ್ಟ ಅದೃಷ್ಟ, ಟೀಂ ಮ್ಯಾನೇಜ್ಮೆಂಟ್ ಹಳಿದ ಫ್ಯಾನ್ಸ್

ಸತತ ವಿಕೆಟ್ ಪತನ

ಸತತ ವಿಕೆಟ್ ಪತನ

ನಂತರ ಖವಾಜಾ ಅವರನ್ನು ಸೇರಿಕೊಂಡ ನಾಯಕ ಟಿಮ್ ಪೈನ್ ಡ್ರಾ ಗುರಿಯೊಂದಿಗೆ ಬಹು ತಾಳ್ಮೆಯ ಆಟ ಪ್ರದರ್ಶಿಸಿದರು. ಪಂದ್ಯ ಮುಗಿಯಲು ಸುಮಾರು 15 ಓವರ್‌ಗಳ ಆಟ ಬಾಕಿ ಇರುವಾಗ 302 ಎಸೆತಗಳಲ್ಲಿ 141 ರನ್ ಗಳಿಸಿದ್ದ ಖವಾಜಾ ಔಟಾದರು. ಅದರ ಬೆನ್ನಲ್ಲೇ ಮಿಚೆಲ್ ಸ್ಟಾರ್ಕ್ ಮತ್ತು ಪೀಟರ್ ಸಿಡ್ಲ್ ವಿಕೆಟ್ ಒಪ್ಪಿಸಿದರು. 338ಕ್ಕೆ 8 ವಿಕೆಟ್ ಕಳೆದುಕೊಂಡಿದ್ದರಿಂದ ಪಾಕ್‌ ಕೈಗೆ ಗೆಲುವಿನ ತುತ್ತು ಬರಲಿದೆ ಎಂದು ಭಾವಿಸಲಾಗಿತ್ತು.

ಪೈನ್-ಲಯಾನ್ ಜುಗಲ್ಬಂದಿ

ಪೈನ್-ಲಯಾನ್ ಜುಗಲ್ಬಂದಿ

ಆದರೆ, ಪೈನ್ ಮತ್ತು ನಥಾನ್ ಲಿಯಾನ್ ಪಾಕ್ ಆಸೆಗೆ ತಣ್ಣೀರೆರಚಿದರು. ಇಬ್ಬರೂ 12 ಓವರ್‌ಗಳನ್ನು ಆಡಿ ಪಾಕಿಸ್ತಾನದ ಬೌಲರ್‌ಗಳನ್ನು ಸತಾಯಿಸಿದರು. ಸಮಯ ಮೀರಿದ್ದರಿಂದ ಆಟವನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಪಾಕ್ ಜಯದ ಕನಸು ಭಗ್ನವಾದರೆ, ಆಸ್ಟ್ರೇಲಿಯಾ ನಿಟ್ಟುಸಿರುಬಿಟ್ಟರು. ಟಿಮ್ ಪೈನ್ 194 ಎಸೆತ ಎದುರಿಸಿ 61 ರನ್ ಗಳಿಸಿ ಅಜೇಯರಾದರೆ, ಅವರಿಗೆ ಉತ್ತಮ ಸಾಥ್ ನೀಡಿದ ಲಿಯಾನ್ 34 ಎಸೆತದಲ್ಲಿ 5 ರನ್ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಸದ್ಯ, ಬ್ಯಾಟಿಂಗ್ ಸಿಗಲಿಲ್ಲ!

ಚಿಕ್ಕವರಿದ್ದಾಗ ನಮಗೆ ಬ್ಯಾಟಿಂಗ್ ಸಿಗಬೇಕು ಎಂದು ಬಯಸುತ್ತಿದ್ದೆವು. ಆದರೆ ಇಂದು ಕೊನೆಯ ಬ್ಯಾಟ್ಸ್‌ಮನ್ ಜಾನ್ ಹೊಲಾಂಡ್ ತನಗೆ ಬ್ಯಾಟಿಂಗ್ ಸಿಗುವುದು ಬೇಡ ಎಂದು ಪ್ರಾರ್ಥನೆ ಮಾಡುತ್ತಿದ್ದುದ್ದರಲ್ಲಿ ಯಾವ ಅನುಮಾನವೂ ಇಲ್ಲ. ಪಂದ್ಯ ಮುಗಿದ ಬಳಿಕ ಅವರ ಮುಖವೇ ಎಲ್ಲವನ್ನೂ ಹೇಳುತ್ತಿತ್ತು. ಅದೃಷ್ಟವಶಾತ್ ಆತನ ಗೆಳೆಯರು ಚೆನ್ನಾಗಿ ಕೆಲಸ ಮಾಡಿದರು ಎಂದು ಗ್ಲೆನ್ ಮಿಚೆಲ್ ಟ್ವೀಟ್ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಸಾಯುವುದಿಲ್ಲ

ಟೆಸ್ಟ್ ಕ್ರಿಕೆಟ್ ಎಂದಿಗೂ ಸಾಯುವುದಿಲ್ಲ. ನಾವು ಪ್ರತಿಯೊಂದು ಡಾಟ್ ಬಾಲ್‌ಅನ್ನೂ ಅಥವಾ ಡ್ರಾ ಪಂದ್ಯವನ್ನೂ ಎಂಜಾಯ್ ಮಾಡಿದ್ದೇವೆ. ಖವಾಜಾ ಮತ್ತು ಟಿಮ್ ಪೈನ್ ಚೆನ್ನಾಗಿ ಆಡಿದ್ದೀರಿ. ಪಾಕಿಸ್ತಾನದಿಂದ ಅದ್ಭುತ ಹೋರಾಟ ಇತ್ತು ಎಂದು ಪಾಕ್ ಕ್ರಿಕೆಟಿಗ ಫಾವದ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಏಷ್ಯಾದಲ್ಲಿ ಅತಿ ಸುದೀರ್ಘ 4ನೇ ಇನ್ನಿಂಗ್ಸ್

ಏಷ್ಯಾದಲ್ಲಿ ಅತಿ ಸುದೀರ್ಘ 4ನೇ ಇನ್ನಿಂಗ್ಸ್

142 ಓವರ್ - ಬಾಂಗ್ಲಾದೇಶ vs ಜಿಂಬಾಬ್ವೆ, ಢಾಕಾ, 2005

140 ಓವರ್ - ಇಂಗ್ಲೆಂಡ್ vs ಶ್ರೀಲಂಕಾ, ಕ್ಯಾಂಡಿ , 2003

139.5 ಓವರ್ - ಆಸ್ಟ್ರೇಲಿಯಾ vs ಪಾಕಿಸ್ತಾನ, ದುಬೈ, 2018

136 ಓವರ್ - ಭಾರತ vs ವೆಸ್ಟ್ ಇಂಡೀಸ್, ಕೋಲ್ಕತಾ, 1948

26 ಜಿಂಬಾಬ್ವೆ (2005-17)

26 ಜಿಂಬಾಬ್ವೆ (2005-17)

26 ಜಿಂಬಾಬ್ವೆ (2005-17)

23 ಆಸ್ಟ್ರೇಲಿಯಾ (1999-01)

22 ಇಂಗ್ಲೆಂಡ್ (1884-92)

22 ಆಸ್ಟ್ರೇಲಿಯಾ (2001-03)

22 ಪಾಕಿಸ್ತಾನ (2015-18)- ಈ ಪಂದ್ಯದೊಂದಿಗೆ ಅಂತ್ಯ

ಮೊದಲ ಡ್ರಾ ಸಾಧನೆ

1998ರ ಬಳಿಕ ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್ ಪಂದ್ಯ ಮೊದಲ ಬಾರಿಗೆ ಡ್ರಾ ಆಗಿದೆ. ಅಲ್ಲಿಂದ ಇದುವರೆಗೂ ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದವು. ಈ ಎಲ್ಲ ಪಂದ್ಯಗಳಲ್ಲಿಯೂ ಫಲಿತಾಂಶ ದೊರೆತಿದ್ದವು. ಪಾಕ್ 3 ಮತ್ತು ಆಸ್ಟ್ರೇಲಿಯಾ 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, October 12, 2018, 13:13 [IST]
Other articles published on Oct 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more