ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ನ ರಿಝ್ವಾನ್ ಅದ್ಭುತ ವಿಕೆಟ್ ಕೀಪರ್ ಎನ್ನುತ್ತಿವೆ ಈ ವಿಡಿಯೋಗಳು!

Pakistan vs South Africa: Spectacular run-out by Mohammad Rizwan

ಬೆಂಗಳೂರು: 2019ರ ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಖಾನ್ ಅವರನ್ನು ದಡೂತಿ ಶರೀರರವ, ಸೋಂಬೇರಿ, ಉದಾಸೀನದವ, ಚುರುಕಿಲ್ಲ ಅಂತೆಲ್ಲ ಹೀಯಾಳಿಸಿದವರಿದ್ದಾರೆ. ಪಾಕ್‌ ತಂಡವನ್ನು ದುರ್ಬಲ ತಂಡವೆಂಬಂತೆ ನೋಡಿದವರಿದ್ದಾರೆ. ಆದರೆ ಪಾಕ್‌ ಕೂಡ ಪ್ರತಿಭಾವಂತರಿರುವ ತಂಡ ಅನ್ನೋದನ್ನು ಪಾಕ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ತೋರಿಸಿಕೊಟ್ಟಿದ್ದಾರೆ.

ಮನೆ ಹುಡುಕುತ್ತಿದ್ದೇನೆ ಎಂದ ಪಂತ್‌ಗೆ ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ!ಮನೆ ಹುಡುಕುತ್ತಿದ್ದೇನೆ ಎಂದ ಪಂತ್‌ಗೆ ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆ!

ಪಾಕಿಸ್ತಾನ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಆತಿಥೇಯರ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಪಂದ್ಯದಲ್ಲಿ ಮೊಹಮ್ಮದ್ ರಿಝ್ವಾನ್ ಅದ್ಭುತ ವಿಕೆಟ್ ಕೀಪಿಂಗ್‌ಗಾಗಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರುಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರು

ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ಎರಡು ವಿಡಿಯೋಗಳು ರಿಝ್ವಾನ್ ಅದ್ಭುತ ವಿಕೆಟ್ ಕೀಪರ್ ಅನ್ನೋದನ್ನು ಸಾರಿ ಹೇಳುತ್ತಿವೆ.

ರಿಝ್ವಾನ್ ಅದ್ಭುತ ಕೀಪಿಂಗ್‌

ರಿಝ್ವಾನ್ ಅದ್ಭುತ ಕೀಪಿಂಗ್‌

ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ವೇಳೆ ಆಫ್ರಿಕಾ ಬ್ಯಾಟ್ಸ್‌ಮನ್‌ಗಳಾದ ರಾಸ್ಸಿ ವ್ಯಾನ್ ಡೆರ್ ಡುಸೆನ್ ಮತ್ತು ಡೀನ್ ಎಲ್ಗರ್ ವಿಕೆಟ್‌ಗಳನ್ನು ರಿಝ್ವಾನ್ ಅದ್ಭುತ ರೀತಿಯಲ್ಲಿ ಉರುಳಿಸಿದ್ದಾರೆ.

ವ್ಯಾನ್ ಡೆರ್ ಡುಸೆನ್ ಬಲಿ

ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ 15.2ನೇ ಓವರ್‌ನಲ್ಲಿ ರಾಸ್ಸಿ ವ್ಯಾನ್ ಡೆರ್ ಡುಸೆನ್ ರನ್‌ ಔಟ್ ಆಗಿದ್ದರು. ಡುಸೆನ್ ಬ್ಯಾಟ್ ಬೀಸಿದಾಗ ಚೆಂಡು ಪಡೆದುಕೊಂಡ ನಾಯಕ ಬಾಬರ್ ಅಝಾಮ್, ಚೆಂಡನ್ನು ಕೂಡಲೇ ರಿಝ್ವಾನ್ ಅತ್ತ ಎಸೆದಿದ್ದರು. ರಿಝ್ವಾನ್ ಮಿಂಚಿನ ವೇಗದಲ್ಲಿ ಚೆಂಡನ್ನು ವಿಕೆಟ್‌ಗೆ ಅಪ್ಪಳಿಸಿದ್ದರಿಂದ ಡುಸೆನ್ 17 ರನ್‌ಗೆ ವಿಕೆಟ್ ಒಪ್ಪಿಸಬೇಕಾಯ್ತು.

ಡೀನ್ ಎಲ್ಗರ್ ವಿಕೆಟ್

ದಕ್ಷಿಣ ಆಫ್ರಿಕಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಡೀನ್ ಎಲ್ಗರ್ ವಿಕೆಟ್ ಮುರಿದಿದ್ದು ಕೂಡ ಗಮನ ಸೆಳೆದಿತ್ತು. 16.1ನೇ ಓವರ್‌ನಲ್ಲಿ ಯಾಸಿರ್ ಶಾ ಎಸೆತಕ್ಕೆ ಎಲ್ಗರ್ ಬ್ಯಾಟ್ ಬೀಸಿದಾಗ ಅದನ್ನು ರಿಝ್ವಾನ್‌ ಜಿಗಿದು ಅತ್ಯುತ್ತಮ ರೀತಿಯಲ್ಲಿ ಕ್ಯಾಚ್‌ ಮಾಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ಎಲ್ಗರ್ 29 ರನ್‌ಗೆ ನಿರ್ಗಮಿಸಿದರು.

Story first published: Friday, January 29, 2021, 9:22 [IST]
Other articles published on Jan 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X