ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗ ರಾಹುಲ್ ಬ್ಯಾಟಿಂಗ್ ಅಬ್ಬರಕ್ಕೆ ಬೆರಗಾದ ಟ್ವಿಟ್ಟಿಗರು

people hails KL Rahuls innings in twitter

ಬೆಂಗಳೂರು, ಏಪ್ರಿಲ್ 08: ಕಿಂಗ್ಸ್ ಇಲೆವೆನ್ ಪಂಜಾಬ್‌ ಪರ ಆಡುತ್ತಿರುವ ಕರ್ನಾಟಕದ ಕೆ.ಎಲ್. ರಾಹುಲ್ ಅವರ ಬಿರುಸಿನ ಆಟಕ್ಕೆ ಟ್ವಿಟ್ಟಿಗರು ಮನಸೋತಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಐಪಿಎಲ್ ಇತಿಹಾಸದಲ್ಲೇ ಇದು ಅತಿ ವೇಗದ ಅರ್ಧಶತಕವಾಗಿದೆ.

ಐಪಿಎಲ್ : ತ್ವರಿತಗತಿಯಲ್ಲಿ ಅರ್ಧಶತಕ ದಾಖಲೆ ಬರೆದ ರಾಹುಲ್ಐಪಿಎಲ್ : ತ್ವರಿತಗತಿಯಲ್ಲಿ ಅರ್ಧಶತಕ ದಾಖಲೆ ಬರೆದ ರಾಹುಲ್

ಯೂಸುಫ್ ಪಠಾಣ್ ಅವರ ವೇಗದ ಅರ್ಧಶತಕದ ದಾಖಲೆಯನ್ನು ರಾಹುಲ್ ಧೂಳಿಪಟ ಮಾಡಿದ್ದಾರೆ. ಯೂಸುಫ್ ಪಠಾಣ್ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಉತ್ತರ ನೀಡಿದ ರಾಹುಲ್!

ವಾವ್, ಕೆ.ಎಲ್. ರಾಹುಲ್ ಅವರಿಂದ ಉತ್ತಮ ಆರಂಭ. ತಾವು ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬುದಕ್ಕೆ ಅವರು ಉತ್ತರ ನೀಡಿದ್ದಾರೆ ಎಂದು ವೀಕ್ಷಕ ವಿವರಣೆಗಾರ ಹರ್ಷ ಭೋಗ್ಳೆ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳ ಟ್ವೀಟ್

ಗಂಭೀರ್ ಇನ್ನಿಂಗ್ಸ್ ಅವರು ಏಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬುದನ್ನು ತಿಳಿಸುತ್ತದೆ. ರಾಹುಲ್ ಇನ್ನಿಂಗ್ಸ್ ಅವರು ಏಕೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸುತ್ತದೆ ಎಂದು ಆದಿತ್ಯ ಮಿತ್ತಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾವು ಇನ್ನಿಂಗ್ಸ್ ಆರಂಭಿಸಿದರೆ ಏನು ಮಾಡಬಹುದು ಎಂಬುದನ್ನು ಕೆ.ಎಲ್. ರಾಹುಲ್ ತೋರಿಸಿಕೊಟ್ಟಿದ್ದಾರೆ ಎಂದು ಅಭಿಷೇಕ್ ಎಂಬುವವರು ಹೇಳಿದ್ದಾರೆ.

ಮೀಮ್ಸ್ ಗಳ ಸೃಷ್ಟಿ

ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆ.ಎಲ್.ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಆರ್‌ಸಿಬಿ ಆಸಕ್ತಿ ತೋರಿಸಿರಲಿಲ್ಲ. ಇದರಿಂದ ಅವರನ್ನು 11 ಕೋಟಿ ರೂಪಾಯಿ ಭಾರೀ ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿತ್ತು.

ಕೆ.ಎಲ್. ರಾಹುಲ್ ಬ್ಯಾಟಿಂಗ್ ಆರ್ಭಟ ಕಂಡ ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣವೇ ಮೀಮ್‌ಗಳನ್ನು ಹರಿಬಿಡತೊಡಗಿದ್ದಾರೆ.

ಆರ್‌ಸಿಬಿಯನ್ನರ ಸ್ಥಿತಿ!

ರಾಹುಲ್ ಬ್ಯಾಟಿಂಗ್ ನೋಡಿದ ಬಳಿಕ

ಈಗ ಆರ್‌ಸಿಬಿಗೆ ಹೇಗೆ ಅನಿಸುತ್ತಿರಬಹುದು?

Story first published: Sunday, April 8, 2018, 21:50 [IST]
Other articles published on Apr 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X