ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್

ಕರಾಚಿ: ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿಯ ಬಗ್ಗೆ ಪಾಕಿಸ್ತಾನಕ್ಕಿಂತಲೂ ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಾಮ್ ಹೇಳಿದ್ದಾರೆ. ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿದೆ. ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದ ಪಂದ್ಯಕ್ಕಾಗಿ ಮುಖಾಮುಖಿಯಾಗಲಿದೆ.

ಭಾರತ vs ಇಂಗ್ಲೆಂಡ್: 4ನೇ ಟೆಸ್ಟ್‌ ವೇಳೆ ಟೀಮ್ ಇಂಡಿಯಾ ಕಪ್ಪು ಪಟ್ಟಿ ಧರಿಸಿದ್ದೇಕೆ?!ಭಾರತ vs ಇಂಗ್ಲೆಂಡ್: 4ನೇ ಟೆಸ್ಟ್‌ ವೇಳೆ ಟೀಮ್ ಇಂಡಿಯಾ ಕಪ್ಪು ಪಟ್ಟಿ ಧರಿಸಿದ್ದೇಕೆ?!

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ನೂತನ ಅಧ್ಯಕ್ಷನಾಗಿ ಆಯ್ಕೆಯಾಗುವುದರಲ್ಲಿರುವ ರಮೀಝ್ ರಾಜ ಜೊತೆಗಿನ ಸಭೆಯ ಬಳಿಕ ಬಾಬರ್ ಅಝಾಮ್ ಮಾತನಾಡಿದ್ದಾರೆ. "ಟಿ20 ವಿಶ್ವಕಪ್‌ ಪಂದ್ಯದಲ್ಲಿ ನಮಗೆ ಹೋಲಿಸಿದರೆ ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ, ನಾವು ಭಾರತವನ್ನು ಸೋಲಿಸುವ ಮೂಲಕ ನಮ್ಮ ಸ್ಪರ್ಧೆ ಶುರು ಮಾಡಬೇಕಿದೆ," ಎಂದು ಬಾಬರ್ ಹೇಳಿದ್ದಾರೆ.

ಪಿಕೆಎಲ್ 2021: ಹರಾಜಿನ ಬಳಿಕ ದಬಾಂಗ್ ಡೆಲ್ಲಿ ಸಂಪೂರ್ಣ ಆಟಗಾರರ ಪಟ್ಟಿಪಿಕೆಎಲ್ 2021: ಹರಾಜಿನ ಬಳಿಕ ದಬಾಂಗ್ ಡೆಲ್ಲಿ ಸಂಪೂರ್ಣ ಆಟಗಾರರ ಪಟ್ಟಿ

ಬಾಬರ್ ಹೀಗೆ ಹೇಳಲು ಕಾರಣವಿದೆ. ಅದೇನೆಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿಗಳಲ್ಲಿ ಭಾರತ ಗೆದ್ದಿದ್ದೆ ಹೆಚ್ಚು. ಹೀಗಾಗಿ ಈ ಬಾರಿಯೂ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿರುತ್ತದೆ. ಅದೇ ಸೋತು ಸೋತು ಸುಣ್ಣವಾಗಿರುವ ಪಾಕ್‌ಗೆ ಮತ್ತೊಂದು ಸೋಲಾದರೆ ಅದೇನು ದೊಡ್ಡ ಮಾತಲ್ಲ.

ಟಿ20 ವಿಶ್ವಕಪ್‌ನಲ್ಲಿ ಬೇರೆ ಬೇರೆ ಗ್ರೂಪ್‌ಗಳ ಮಾಹಿತಿ

ಟಿ20 ವಿಶ್ವಕಪ್‌ನಲ್ಲಿ ಬೇರೆ ಬೇರೆ ಗ್ರೂಪ್‌ಗಳ ಮಾಹಿತಿ

ಗ್ರೂಪ್‌-2ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿವೆ. ಅಕ್ಟೋಬರ್‌ 24ರಂದು ದುಬೈನಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್ 2ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಲ್ಲದೆ ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಗ್ರೂಪ್‌ 'ಎ'ಯ ರನ್ನರ್‌ ಅಪ್, ಗ್ರೂಪ್‌ 'ಬಿ'ಯ ವಿನ್ನರ್ ಅಪ್ ತಂಡಗಳು ಇವೆ. ಸೂಪರ್ 12 ಬಿಭಾಗದಲ್ಲಿ ಗ್ರೂಪ್‌-1 ಮತ್ತು ಗ್ರೂಪ್-2 ಇದೆ. ಗ್ರೂಪ್-2 ತಂಡಗಳು ಈಗಾಗಲೇ ಮೇಲೆ ತಿಳಿಸಿದ್ದೇವೆ. ಇನ್ನು ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್, ಗ್ರೂಪ್ 'ಎ'ಯ ವಿನ್ನರ್, ಗ್ರೂಪ್ 'ಬಿ'ಯ ರನ್ನರ್ ತಂಡಗಳಿವೆ. ಇನ್ನು ಗ್ರೂಪ್‌ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ತಂಡಗಳಿದ್ದರೆ, ಗ್ರೂಪ್ 'ಬಿ'ಯಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ ಮತ್ತು ಓಮನ್ ತಂಡಗಳಿವೆ.

ಪಾಕ್ ಗೆಲ್ಲುತ್ತೆ ಎಂದಿದ್ದ ಶೋಯೇಬ್ ಅಖ್ತರ್

ಪಾಕ್ ಗೆಲ್ಲುತ್ತೆ ಎಂದಿದ್ದ ಶೋಯೇಬ್ ಅಖ್ತರ್

ಭಾರತ ಮತ್ತು ಪಾಕ್ ಮುಖಾಮುಖಿ ಈಚೆಗೆ ಕಾಣ ಸಿಗೋದು ತೀರಾ ಕಡಿಮೆ. ಸಿಕ್ಕರೂ ಆ ಪಂದ್ಯ ಹೈ ವೋಲ್ಟೇಜ್‌ನಿಂದ ಕೂಡಿರುತ್ತದೆ. ಈ ಮೊದಲು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಭಾರತ-ಪಾಕ್ ಮುಖಾಮುಖಿಯಲ್ಲಿ ಪಾಕ್ ಗೆಲ್ಲಲಿದೆ ಎಂದಿದ್ದರು. ಆದರೆ ಅದು ಗ್ರೂಪ್‌ ಹಂತದಲ್ಲಿ ಅಲ್ಲ, ಬದಲಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಕಾದಾಡುತ್ತವೆ. ಇದರಲ್ಲಿ ಪಾಕ್ ಗೆಲ್ಲುತ್ತೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಸ್ಪೋರ್ಟ್ಸ್ ತಕ್‌ನಲ್ಲಿ ಮಾತನಾಡಿದ್ದ ಅಖ್ತರ್, "ನನಗನ್ನಿಸುತ್ತದೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಡುತ್ತವೆ. ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುತ್ತದೆ. ಯುಎಇಯಲ್ಲಿನ ಪರಿಸ್ಥಿತಿಗಳು ಎರಡೂ ತಂಡಗಳಿಗೂ ಚೆನ್ನಾಗಿ ಹೊಂದಾಣಿಕೆ ಆಗುತ್ತವೆ," ಎಂದಿದ್ದರು.

ಆಕ್ಸಿಜನ್‌ ಪೂರೈಕೆ ಮಾಡಲಾಗದವರು ಈಗ ರೇಶನ್‌,ಪೆನ್ಷನ್‌ ಕೊಡಲ್ಲ ಅಂತಿದ್ದಾರೆ | D K Shivakumar | Oneindia Kannada
ಭಾರತ ಮತ್ತು ಪಾಕಿಸ್ತಾನ ಕೊನೇಯ ಮುಖಾಮುಖಿ

ಭಾರತ ಮತ್ತು ಪಾಕಿಸ್ತಾನ ಕೊನೇಯ ಮುಖಾಮುಖಿ

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದು 2016ರರಲ್ಲಿ ನಡೆದ ವಿಶ್ವಕಪ್‌ನಲ್ಲಿ. ಅಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ 10 ಹಂತದಲ್ಲಿ ಮುಖಾಮುಖಿಯಾಗಿದ್ದವು. ಮಳೆಯಿಂದಾಗಿ 18 ಓವರ್‌ಗಳಿಗೆ ನಿಗದಿಯಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 118ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಪಾಕಿಸ್ತಾನದ ಪರವಾಗಿ ಅಂದು ಯಾವ ಬ್ಯಾಟ್ಸ್‌ಮನ್‌ ಕೂಡ 30ರ ಗಡಿಯನ್ನು ಕೂಡ ದಾಟಿರಲಿಲ್ಲ. 26 ರನ್‌ಗಳಿಸಿದ್ದ ಶೋಯೆಬ್ ಮಲಿಕ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದರು. ಪಾಕಿಸ್ತಾನ ನೀಡಿದ ಈ ಗುರಿಯನ್ನು ಭಾರತ ಇನ್ನೂ 13 ಎಸೆತಗಳು ಬಾಕಿಯಿರುವಂತೆ 4 ವಿಕೆಟ್‌ಗಳನ್ನು ಕಳೆದುಕೊಂಡು ಗೆದ್ದು ಬೀಗಿತ್ತು. ಭಾರತದ ಪರವಾಗಿ ವಿರಾಟ್ ಕೊಹ್ಲಿ 55 ರನ್ ಬಾರಿಸಿ ಮಿಂಚಿದ್ದರು. ಅದಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ವಿಶ್ವಕಪ್ ಇದಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 2, 2021, 22:53 [IST]
Other articles published on Sep 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X