ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2015: ಬೆಳಗಾವಿ vs ಮಂಗಳೂರು ಪಂದ್ಯ ಮುನ್ನೋಟ

By Mahesh

ಹುಬ್ಬಳ್ಳಿ, ಸೆ.02: ಇಲ್ಲಿನ ರಾಜನಗರ ಸ್ಟೇಡಿಯಂನಲ್ಲಿ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿ ಸೆ.03ರಂದು ಚಾಲನೆ ಸಿಗಲಿದೆ. ಸೆ. 19ರವರೆಗೆ ಕರ್ನಾಟಕದ ಪ್ರತಿಭೆಗಳಿಗೆ ಟಿ 20 ಟೂರ್ನಿ ಸೂಕ್ತ ವೇದಿಕೆ ಒದಗಿಸಲಿದೆ.

ಸೆ.02ರಿಂದ ಆರಂಭವಾಗಬೇಕಿದ್ದ ಕೆಪಿಎಲ್ 2015 ಟೂರ್ನಿ ಸ್ಟುವರ್ಟ್ ಬಿನ್ನಿ ಹಾಗೂ ಕರಣ್‌ನಾಯರ್ ಅವರಿಂದ ಒಂದು ದಿನ ಮುಂದಕ್ಕೆ ಹಾಕಲಾಗಿತ್ತು. ಈ ಟೂರ್ನಿಯಲ್ಲಿ ಕಳೆದ ಬಾರಿ ಪಾಲ್ಗೊಂಡಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರ ಒಡೆತನದ ಹೊಸ ತಂಡ ನಮ್ಮ ಶಿವಮೊಗ್ಗ ಹಾಗೂ ನಾಯಕತ್ವದ ಆಲ್ ಸ್ಟಾರ್ ಸೆಲೆಬ್ರಿಟಿ ತಂಡ ಈ ಬಾರಿ ಕೆಪಿಎಲ್ ನ ಆಕರ್ಷಣೆಯಾಗಲಿದೆ. [ಕೆಪಿಎಲ್ 2015: ಶಿವಮೊಗ್ಗಕ್ಕೆ ಬಿನ್ನಿ, ಬಿಜಾಪುರಕ್ಕೆ ಉತ್ತಪ್ಪ]

Belagavi and Mangalore face off in opener

ಸುದೀಪ್ ತಂಡದಲ್ಲಿ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಡೇವಿಡ್ ಜಾನ್ಸನ್ ಆಡುತ್ತಿದ್ದಾರೆ ಕೆಪಿಎಲ್ ಟೂರ್ನಿ ಸೆ.3ರಿಂದ ಸೆಪ್ಟೆಂಬರ್ 19ರ ತನಕ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಿಟ್ಟು ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆಯುತ್ತಿರುವುದು ಈ ಬಾರಿಯ ವಿಶೇಷ. [ಕೆಪಿಎಲ್ 2015 ವೇಳಾಪಟ್ಟಿ: ಸೆ. 2 ರಿಂದ 19 ರ ತನಕ]

ಕಳೆದ ವರ್ಷ ದಿವಂಗತ ಶ್ರೀಕಂಠದತ್ತ ಒಡೆಯರ್ ಸ್ಮರಣಾರ್ಥ ಒಡೆಯರ್ ಕೆಪಿಎಲ್ ಕಪ್ ಕೆಎಸ್ ಸಿಎ ಆಯೋಜಿಸಿತ್ತು. ಐಪಿಎಲ್ ನಲ್ಲಿ ಮಾಡಿದಂತೆ ಫ್ಯಾನ್ ಪಾರ್ಕ್ ರೂಪಿಸಲು ಯೋಚಿಸಲಾಗಿದೆ. ಟೂರ್ನಿಯ ಅಂತಿಮ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಇದನ್ನು ಸಾಧ್ಯವಾಗಿಸಲಾಗುವುದು ಎಂದು ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

Namma Shivamogga


ತಂಡಗಳು: ಮೈಸೂರು ವಾರಿಯರ್ಸ್, ಮಂಗಳೂರು ಯುನೈ ಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್, ನಮ್ಮ ಶಿವಮೊಗ್ಗ. [ರಿಕ್ಕಿ ಕೇಜ್ ರಿಂದ ಕೆಪಿಎಲ್ 2015 ಟ್ರೋಫಿ ಅನಾವರಣ]

ಉದ್ಘಾಟನಾ ಪಂದ್ಯಗಳು:
ಗುರುವಾರ (ಸೆ.03)
1.30 PM: ಮಂಗಳೂರು ಯುನೈಟೆಡ್ vs ಬೆಳಗಾವಿ ಪ್ಯಾಂಥರ್ಸ್
5.30 PM : ಮೈಸೂರು ವಾರಿಯರ್ಸ್ vs ನಮ್ಮ ಶಿವಮೊಗ್ಗ
Belagavi Panthers

*ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ನಲ್ಲಿ ಪ್ರಸಾರವಾಗಲಿದೆ.
* ಹುಬ್ಬಳ್ಳಿಯಲ್ಲಿ ಟಿಕೆಟ್ ಗಳು ರಾಜನಗರ ಸ್ಟೇಡಿಯಂ ಗೇಟ್ 4 ರ ಕೌಂಟರ್ ನಲ್ಲಿ ದೊರೆಯುತ್ತದೆ. ಉಳಿದಂತೆ ಓಯಸಿಸ್ ಮಾಲ್ ಅಥವಾ ಆನ್ ಲೈನ್ ನಲ್ಲಿ ಬುಕ್ ಮೈಶೋ.ಕಾಂ ಮೂಲಕ ಟಿಕೆಟ್ ಖರೀದಿಸಬಹುದು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X