ಓವರ್‌ಗೆ 7 ಬಾಲ್!, ಮ್ಯಾಚ್‌ ಫಿಕ್ಸಿಂಗ್ ಅಂತಿದ್ದಾರೆ ಟ್ವಿಟ್ಟಿಗರು

Posted By:
Rajasthan bowled one extra ball in 12th Over in yesterday match

ನಿನ್ನೆ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್‌ ನಡುವಿನ ಟಿ20 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಒಂದು ಓವರ್‌ಗೆ 7 ಎಸೆತ ಎಸೆದು ಪ್ರಮಾದ ಮಾಡಿದೆ ಆದರೆ ಇದನ್ನು ಮ್ಯಾಚ್ ಫಿಕ್ಸಿಂಗ್ ಎನ್ನುತ್ತಿದೆ ಕೆಲವರು.

ಎರಡು ವರ್ಷದ ನಿಷೇಧದ ಬಳಿಕ ಮತ್ತೆ ಐಪಿಎಲ್ ಪ್ರವೇಶಿಸಿರುವ ರಾಜಸ್ಥಾನ ತಂಡ ತಾನು ಆಡಿದ ಮೊದಲ ಪಂದ್ಯದಲ್ಲೇ ವಿವಾದಕ್ಕೆ ಸಿಲುಕಿದೆ. 12ನೇ ಓವರ್‌ ಬೌಲ್ ಮಾಡಿದ ರಾಜಸ್ಥಾನ ತಂಡದ ಆಸೀಸ್‌ ಬೌಲರ್‌ ಬೆನ್ ಲಾಗ್ಲಿನ್ ಅವರು 6 ಎಸೆತ ಹಾಕುವ ಬದಲಾಗಿ ಎಸೆತ ಹಾಕಿದ್ದಾರೆ ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಅಂಪೈರ್ ಅಜಾಗರೂಕತೆಯಿಂದಲೋ ಅಥವಾ ಆಟಗಾರನ ಅಜಾಗರೂಕತೆಯಿಂದಲೋ ಈ ಘಟನೆ ನಡೆದಿರಬಹುದು ಆದರೆ ರಾಜಸ್ಥಾನಕ್ಕೆ ಇರುವ ಕಪ್ಪು ಇತಿಹಾಸದಿಂದಾಗಿ ಇದೀಗ ಈ ಪ್ರಕರಣ ಫಿಕ್ಸಿಂಗ್‌ ತಿರುವು ಪಡೆದುಕೊಳ್ಳುತ್ತಿದೆ. ಬೇಕೆಂದೇ ಏಳನೇ ಬಾಲು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆರೋಪಿಸಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 10, 2018, 15:15 [IST]
Other articles published on Apr 10, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ