ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ : ಒಡಿಶಾ ವಿರುದ್ಧ ಮುನ್ನಡೆ ಪಡೆಯಲು ಉತ್ತಪ್ಪ ನೆರವು

By Mahesh

ಮೈಸೂರು, ನ.08: ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಆರಂಭವಾದ ಎ ಗುಂಪಿನ ರಣಜಿ ಪಂದ್ಯದಲ್ಲಿ ಒಡಿಶಾ ತಂಡ ಅಲ್ಪಮೊತ್ತ(232 ರನ್ )ಕ್ಕೆ ಕುಸಿದಿದೆ. ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ 23 ರನ್ ಮುನ್ನಡೆ ಪಡೆದುಕೊಂಡಿದೆ.

ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 6ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಒಡಿಶಾ ತಂಡವನ್ನು 232ರನ್ನಿಗೆ ಕಟ್ಟಿ ಹಾಕಿದೆ. ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ದಿನದ ಅಂತ್ಯಕ್ಕೆ 97 ಓವರ್ ಗಳಲ್ಲಿ 255/3 ಸ್ಕೋರ್ ಮಾಡಿದೆ. ರಾಬಿನ್ ಉತ್ತಪ್ಪ 83ರನ್ (7x4, 1x6) ಹಾಗೂ ಕರುಣ್ ನಾಯರ್ 52 ರನ್ (3x4,1x6) ಗಳಿಸಿ ಔಟಾಗದೆ ಉಳಿದಿದ್ದಾರೆ.[ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ]

ಒಡಿಶಾ ಇನ್ನಿಂಗ್ಸ್: ನಟರಾಜ್ ಹಾಗೂ ರಾಜೇಶ್ ವಿಕೆಟ್ ಕಳೆದುಕೊಂದು ಕಷ್ಟದ ಸ್ಥಿತಿಯಲ್ಲಿದ್ದ ಒಡಿಶಾಕ್ಕೆ ಗೋವಿಂದ ಪೊದ್ದರ್ 153ರನ್ (230 ಎಸೆತ, 15 ಬೌಂಡರಿ, 1 ಸಿಕ್ಸರ್) ಶತಕ( ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 4ನೇ ಶತಕ) ನೆರವಿಗೆ ಬಂದಿತು.

Karnataka vs Odisha match report

ಮಿಕ್ಕಂತೆ ಪ್ರತೀಕ್ ದಾಸ್ 40ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಶ್ರೇಯಸ್ ಸ್ಪಿನ್ ದಾಳಿಗೆ ಸಿಲುಕಿ ನಲುಗಿದರು. ಶ್ರೇಯಸ್ ಗೋಪಾಲ್ (75ಕ್ಕೆ 4) ಹಾಗೂ ಸ್ಥಳೀಯ ಪ್ರತಿಭೆ ಜೆ.ಸುಚಿತ್ (56ಕ್ಕೆ 3) ಮಾರಕ ದಾಳಿ ನಡೆಸಿದರು. [ರಣಜಿ ಟೀಂಗೆ ರೋಹಿತ್, ಬಿನ್ನಿ ರವಾನೆ!]

ಕರ್ನಾಟಕ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿತ್ತು. ಆರ್. ಸಮರ್ಥ್(3 ) ಹಾಗೂ ಮಯಾಂಕ್ ಅಗರ್ವಾಲ್(13) ಕ್ರೀಸ್​ನಲ್ಲಿದ್ದು, ರಾಜ್ಯ ತಂಡ ಇನಿಂಗ್ಸ್ ಮುನ್ನಡೆಗಾಗಿ ಇನ್ನೂ 216 ರನ್ ಗಳಿಸಬೇಕಿತ್ತು. ಎರಡನೇ ದಿನದ ಆರಂಭದಲ್ಲೇ ಸೂರ್ಯಕಾಂತ್ ಯಾದವ್ ಗೆ ಆರ್ ಸಮರ್ಥ್ ವಿಕೆಟ್ ಒಪ್ಪಿಸಿದರು.

ಮಾಯಾಂಕ್ ಆಗರ್ ವಾಲ್ 78ರನ್ (8x4) ಹಾಗೂ ಅಭಿಶೇಕ್ ರೆಡ್ಡಿ 36ರನ್ (2x4, 1x6) ಗಳಿಸಿ ತಂಡವನ್ನು ಸುಸ್ಥಿತಿಗೆ ತಂದರು. ತಂಡದ ಮೊತ್ತ 128ರನ್ ಆಗಿದ್ದಾಗ ಮಾಯಾಂಕ್ ವಿಕೆಟ್ ಕಳೆದುಕೊಂಡರು. ನಂತರ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಅರ್ಧ ಶತಕ ಸಿಡಿಸಿ ತಂಡಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ಸಿಗುವಂತೆ ಮಾಡಿದರು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X