ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ranji Trophy: ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್‌ಗಳ ಭರ್ಜರಿ ಜಯ: ಸೆಮಿಫೈನಲ್‌ಗೆ ಕರ್ನಾಟಕ

Ranji Trpohy : Karnataka Won By Innings And 281 Runs Against Uttarakhand Enters Semi-Final

ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿದೆ.

ತವರಿನ ಅಂಗಳದಲ್ಲಿ ಆರ್ಭಟಿಸಿ ಕರ್ನಾಟಕದ ಹುಡುಗರು ಅತ್ಯುತ್ತಮ ಆಟವಾಡಿದರು. ಮೂರನೇ ದಿನದಾಂತ್ಯಕ್ಕೆ ಉತ್ತರಾಖಂಡದ ಸೋಲು ಖಚಿತವಾಗಿತ್ತು, ನಾಲ್ಕನೇ ದಿನ ಕರ್ನಾಟಕ ಬೌಲಿಂಗ್ ಅಬ್ಬರಕ್ಕೆ ಮಂಕಾದ ಉತ್ತರಾಖಂಡದ ಬ್ಯಾಟರ್ ಗಳು ಬೇಗನೆ ವಿಕೆಟ್‌ ಒಪ್ಪಿಸುವ ಮೂಲಕ ಸೋಲೊಪ್ಪಿಕೊಂಡರು.

Ranji Trophy: ಜಾರ್ಖಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ: ಸೆಮಿಫೈನಲ್‌ ಪ್ರವೇಶಿಸಿದ ಬೆಂಗಾಲ್Ranji Trophy: ಜಾರ್ಖಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ: ಸೆಮಿಫೈನಲ್‌ ಪ್ರವೇಶಿಸಿದ ಬೆಂಗಾಲ್

ಮೊದಲು ಬ್ಯಾಟಿಂಗ್ ಮಾಡಿದ ಉತ್ತರಾಖಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 116 ರನ್‌ಗಳಿಗೆ ಆಲೌಟ್ ಆಗಿತ್ತು. ಕರ್ನಾಟಕ ರಣಜಿ ತಂಡದಲ್ಲಿ ಪದಾರ್ಪಣ ಪಂದ್ಯವನ್ನಾಡಿದ ಮೈಸೂರಿನ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್ ಪಡೆಯುವ ಮೂಲಕ ಉತ್ತರಾಖಂಡಕ್ಕೆ ಮಾರಕವಾದರು. ಕೃಷ್ಣಪ್ಪ ಗೌತಮ್ ಮತ್ತು ವಿಧ್ವತ್ ಕಾವೇರಪ್ಪ ತಲಾ ಎರಡು ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಕ್ 1 ವಿಕೆಟ್ ಪಡೆದಿದ್ದರು.

ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತರಾಖಂಡದ ಬೌಲರ್ ಗಳ ಬೆವರಿಳಿಸಿದರು. ಶ್ರೇಯಸ್ ಗೋಪಾಲ್ ಶತಕ ಗಳಿಸುವ ಮೂಲಕ ಮಿಂಚಿದರು.

ವಿರಾಟ್ ಕೊಹ್ಲಿ ಈ ವಯಸ್ಸಿನವರೆಗೆ ಕ್ರಿಕೆಟ್ ಆಡಿದರೆ, 100 ಶತಕ ದಾಖಲಿಸುತ್ತಾರೆ; ವ್ಯಾನ್ ಡೆರ್ ಮೆರ್ವೆವಿರಾಟ್ ಕೊಹ್ಲಿ ಈ ವಯಸ್ಸಿನವರೆಗೆ ಕ್ರಿಕೆಟ್ ಆಡಿದರೆ, 100 ಶತಕ ದಾಖಲಿಸುತ್ತಾರೆ; ವ್ಯಾನ್ ಡೆರ್ ಮೆರ್ವೆ

ಉತ್ತಮ ಬ್ಯಾಟಿಂಗ್ ಪ್ರದರ್ಶನ

ಉತ್ತಮ ಬ್ಯಾಟಿಂಗ್ ಪ್ರದರ್ಶನ

ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಭದ್ರ ಬುನಾದಿ ಹಾಕಿದರು. ಈ ಜೋಡಿ ಮೊದಲನೇ ವಿಕೆಟ್‌ಗೆ 159 ರನ್‌ ಕಲೆಹಾಕಿತು. ಮಯಾಂಕ್ ಅಗರ್ವಾಲ್ 83 ರನ್ ಗಳಿಸಿದರೆ, ರವಿಕುಮಾರ್ ಸಮರ್ಥ್ 82 ರನ್ ಗಳಿಸಿ ಮಿಂಚಿದರು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 69 ರನ್ ಗಳಿಸದರೆ, ನಿಕಿನ್ ಜೋಸ್ 62 ರನ್ ಗಳಿಸಿದರು. ಅನುಭವಿ ಬ್ಯಾಟರ್ ಮನಿಶ್ ಪಾಂಡೆ 39 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

 ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ

ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ

ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 288 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಒಂದು ಭರ್ಜರಿ ಸಿಕ್ಸರ್ ಸಹಿತ ಅಜೇಯ 161 ರನ್ ಗಳಿಸಿ ಕರ್ನಾಟಕ ತಂಡ ಬೃಹತ್ ಮೊತ್ತ ಕಲೆ ಹಾಕಲು ಕಾರಣವಾದರು. ಶರತ್ ಬಿಆರ್ 33, ಕೃಷ್ಣಪ್ಪ ಗೌತಮ್ 39, ಮುರಳೀಧರ ವೆಂಕಟೇಶ್‌ 15 ರನ್‌ ಗಳಿಸುವ ಮೂಲಕ ಶ್ರೇಯಸ್‌ ಗೋಪಾಲ್‌ಗೆ ಉತ್ತಮವಾಗಿ ಜೊತೆಯಾದರು.

ಅಂತಿಮವಾಗಿ ಕರ್ನಾಟಕ 606 ರನ್‌ಗಳಿ ಆಲೌಟ್ ಆಗುವ ಮೂಲಕ ಮೊದಲನೇ ಇನ್ನಿಂಗ್ಸ್‌ನಲ್ಲಿ 490 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತ್ತು.

ಬೌಲಿಂಗ್ ದಾಳಿಗೆ ತತ್ತರಿಸಿ ಉತ್ತರಾಖಂಡ

ಬೌಲಿಂಗ್ ದಾಳಿಗೆ ತತ್ತರಿಸಿ ಉತ್ತರಾಖಂಡ

490 ರನ್‌ಗಳ ಬೃಹತ್ ಹಿನ್ನಡೆಯನ್ನು ಅನುಭವಿಸಿದ ಉತ್ತರಾಖಂಡಕ್ಕೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಅವಕಾಶ ಇತ್ತು. ಆದರೆ, ಕರ್ನಾಟಕದ ಮಾರಕ ಬೌಲಿಂಗ್ ದಾಳಿ ಮುಂದೆ ಅವರು ಎರಡು ದಿನ ಬ್ಯಾಟಿಂಗ್ ಮಾಡುವುದು ಅಸಾಧ್ಯವಾಗಿತ್ತು. 3ನೇ ದಿನದ ಆಟ ಮುಕ್ತಾಯವಾದಾಗಲೇ ಉತ್ತರಾಖಂಡದ ಸೋಲು ಖಚಿತವಾಗಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ 209 ರನ್‌ಗಳಿಸುವಷ್ಟರಲ್ಲಿ ಉತ್ತರಾಖಂಡವನ್ನು ಆಲೌಟ್ ಮಾಡುವ ಮೂಲಕ ಕರ್ನಾಟಕ ಇನ್ನಿಂಗ್ಸ್ ಮತ್ತು 281 ರನ್‌ಗಳ ಭರ್ಜರಿ ಜಯ ಸಾಧಿಸಿದರು. ಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಕ್ ಕೂಡ 3 ವಿಕೆಟ್ ಪಡೆದರು. ವಿಧ್ವತ್ ಕಾವೇರಪ್ಪ ಮತ್ತು ಮುರಳೀಧರ ವೆಂಕಟೇಶ್ ತಲಾ ಎರಡು ವಿಕೆಟ್ ಪಡೆದರು.

ಈ ಬಾರಿ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿರುವ ಕರ್ನಾಟಕ ತಂಡಕ್ಕೆ ಕಪ್‌ ಗೆಲ್ಲುವ ಉತ್ತಮ ಅವಕಾಶ ಸಿಕ್ಕಿದೆ. ಇದೇ ಪ್ರದರ್ಶವನ್ನು ಇನ್ನೆರಡು ಪಂದ್ಯಗಳಲ್ಲಿ ನೀಡಿದರೆ ಕರ್ನಾಟಕ ಈ ಬಾರಿ ಚಾಂಪಿಯನ್ ಆಗುವುದು ಖಚಿತವಾಗುತ್ತದೆ.

Story first published: Friday, February 3, 2023, 13:30 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X