ಐಪಿಎಲ್: ಆಲ್‌ರೌಂಡರ್‌ಗಳಿಗೆ ಮಣೆ ಹಾಕುತ್ತಿರುವ ಆರ್‌ಸಿಬಿ

Posted By:
RCB purchases 4 players before lubch in IPL 2018 auction

ಬೆಂಗಳೂರು, ಜನವರಿ 27: ಐಪಿಎಲ್ 2018 ಆಟಗಾರರ ಹರಾಜು ಪ್ರಕ್ರಿಯೆ ಮಧ್ಯಾಹ್ನದ ಹೊತ್ತಿಗೆ ಆರ್‌ಸಿಬಿ ತಂಡದ ಫ್ರಾಂಚೈಸಿ ನಾಲ್ಕು ವಿದೇಶಿ ಆಟಗಾರರನ್ನು ಖರೀದಿಸಿದೆ.

ಮೂರು ಆಟಗಾರರನ್ನು ಮೊದಲೇ ಉಳಿಸಿಕೊಂಡಿದ್ದ ಆರ್‌ಸಿಬಿ ಈಗ ನಾಲ್ಕು ಆಟಗಾರರನ್ನು ಖರೀದಿಸುವ ಮೂಲಕ ಒಟ್ಟು ಐಪಿಎಲ್ 2018 ರಲ್ಲಿ ಈವರೆಗೆ 7 ಆಟಗಾರರನ್ನು ಖರೀದಿಸಿದಂತಾಗಿದೆ.

LIVE: ಐಪಿಎಲ್ 2018 ಹರಾಜು: ಸ್ಟಾರ್ ಆಟಗಾರ ಮೆಕಲಂ ಆರ್ ಸಿ ಬಿ ಪಾಲು

ಆರ್‌ಸಿಬಿ ತಂಡವು ನಾಯಕ ವಿರಾಟ್ ಕೋಹ್ಲಿ, ದಕ್ಷಿಣ ಆಫ್ರಿಕಾದ ಆಟಗಾರ ಎ.ಬಿ.ಡಿವಿಲಿಯರ್ಸ್ ಮತ್ತು ಸ್ಥಳೀಯ ಆಟಗಾರ ಸರ್ಫರಾಜ್ ಖಾನ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು.

ಇದೀಗ ಬ್ರೆಂಡಂ ಮೆಕಲಂ, ಕ್ರಿಸ್ ವೋಕ್ಸ್, ಗ್ರಾಂಡ್ ಹೋಮ್, ಮೋಯಿನ್ ಅಲಿ ಅವರುಗಳನ್ನು ಖರೀದಿಸಿದೆ. ಆರ್‌ಸಿಬಿ ಖರೀದಿಸಿರುವ ಆಟಗಾರಲ್ಲಿ ಆಲ್‌ರೌಂಡರ್‌ಗಳೇ ಹೆಚ್ಚಿಗಿದ್ದಾರೆ.

ಐಪಿಎಲ್ ಹರಾಜು 2018" ಕ್ರಿಸ್ ಗೇಯ್ಲ್ ರನ್ನು ಕೇಳುವವರೇ ಇಲ್ಲ!

ಈಗಾಗಲೇ ತನ್ನ ವಿದೇಶಿ ಆಟಗಾರರ ಕೋಟಾ ಮುಗಿಸಿರುವ ಆರ್‌ಸಿಬಿ ಇನ್ನು ಮುಂದೆ ದೇಸೀ ಆಟಗಾರರನ್ನಷ್ಟೆ ಖರೀದಿಸಲಿದೆ ಎನ್ನುವ ಎಣಿಕೆ ಇದ್ದು, ಈ ವರೆಗೂ ಜನಪ್ರಿಯ ಬೌಲರ್‌ಗಳನ್ನು ಆರ್‌ಸಿಬಿ ಖರೀದಿಸದಿರುವುದು ಆಶ್ಚರ್ಯ ಹುಟ್ಟಿಸಿದೆ.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ನ್ಯೂಜಿಲೆಂಡ್ ಆಟಗಾರ

ನ್ಯೂಜಿಲೆಂಡ್ ಆಟಗಾರ

ನ್ಯೂಜಿಲೆಂಡ್‌ನ ಮಾಜಿ ಕ್ಯಾಪ್ಟನ್, ಹೊಡಿ ಬಡಿ ಆಟಕ್ಕೆ ಹೆಸರಾದ ಬ್ರೆಂಡಂ ಮೆಕಲಂ ಅವರನ್ನು ಆರ್‌ಸಿಬಿ ತಂಡ ಮೊದಲ ಆಟಗಾರನಾಗಿ ಖರೀದಿಸಿತು. ಮೆಕಲಂ ಅವರಿಗೆ 3.60 ಕೋಟಿ ಹಣ ಖರ್ಚು ಮಾಡಿದ ಆರ್‌ಸಿಬಿ ಈಗಾಗಲೇ ಇರುವ ವಿರಾಟ್‌ ಮತ್ತು ಎಬಿಡಿ ಅವರೊಂದಿಗೆ ಮೆಕಲಂ ಅವರನ್ನು ಖರೀದಿಸುವ ಮೂಲಕ ಭಿರುಸಿನ ಬ್ಯಾಟ್ಸ್‌ಮನ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೆಕಲಂ ಅವರು ಕಳೆದ ಐಪಿಎಲ್‌ನಲ್ಲಿ ಗುಜರಾತ್ ಲಯನ್‌ ಪರವಾಗಿ ಆಡಿ, ಎರಡು ಅರ್ಧಶತಕ ಗಳಿಸಿದ್ದರು.

ಇಂಗ್ಲೆಂಡ್‌ ತಂಡದ ಆಟಗಾರ

ಇಂಗ್ಲೆಂಡ್‌ ತಂಡದ ಆಟಗಾರ

ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಅವರನ್ನು ಆರ್‌ಸಿಬಿಯು 7.40 ಕೋಟಿ ಹಣ ಕೊಟ್ಟು ಖರೀದಿಸಿದೆ. ಈವರೆಗೆ ಆರ್‌ಸಿಬಿಯು ಹೆಚ್ಚು ಹಣ ಕೊಟ್ಟು ಖರೀದಿಸಿದ ಆಟಗಾರ ಕ್ರಿಸ್‌ವೋಕ್ಸ್ ಆಗಿದ್ದಾರೆ. ಉತ್ತಮ ಆಲ್‌ರೌಂಡರ್ ಎನಿಸಿಕೊಂಡಿರುವ ವೋಕ್ಸ್ ಈ ವರೆಗೆ 13 ಐಪಿಎಲ್ ಪಂದ್ಯಗಳನ್ನು ಆಡಿದ್ದಾರಷ್ಟೆ. 7 ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿರುವ ವೋಕ್ಸ್ ಅವರು 47 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಸಾಧಾರಣ ಎಂಬ ಪ್ರದರ್ಶನವನ್ನಷ್ಟೆ ತೋರಿರುವ ವೋಕ್ಸ್ 13 ಮ್ಯಾಚ್‌ನಿಂದ 17 ವಿಕೆಟ್ ಗಳಿಸಿದ್ದಾರೆ. ಕಳೆದ ಐಪಿಎಲ್‌ ನಲ್ಲಿ ಇವರು ಕೊಲ್ಕತ್ತ ಪರ ಆಡಿದ್ದರು.

ನ್ಯೂಜಿಲೆಂಡ್ ಆಲ್‌ರೌಂಡರ್‌

ನ್ಯೂಜಿಲೆಂಡ್ ಆಲ್‌ರೌಂಡರ್‌

ನ್ಯೂಜಿಲೆಂಡ್‌ ಆಲ್‌ರೌಂಡರ್‌ ಕಾಲಿನ್ ಡಿ ಗ್ರಾಂಡ್‌ಹೋಮ್ ಅವರನ್ನು ಆರ್‌ಸಿಬಿಯು 2.2 ಕೋಟಿ ಮೊತ್ತಕ್ಕೆ ಖರೀದಿಸಿದೆ. 12 ಐಪಿಎಲ್ ಪಂದ್ಯಗಳಲ್ಲಿ 9 ಇನ್ನಿಂಗ್ಸ್ ಆಡಿರುವ ಗ್ರಾಂಡ್‌ಹೋಮ್ ಅವರು ಗಳಿಸಿರುವುದು 126 ರನ್‌. 9 ಇನ್ನಿಂಗ್ಸ್‌ ಬೌಲಿಂಗ್ ಮಾಡಿರುವ ಅವರು 4 ವಿಕೆಟ್‌ಗಳನ್ನಷ್ಟೇ ಗಳಿಸಿದ್ದಾರೆ. ಗ್ರಾಂಡ್‌ಹೋಮ್ ಕಳೆದ ಐಪಿಎಲ್‌ನಲ್ಲಿ ಕೊಲ್ಕತ್ತ ತಂಡದ ಪರ ಆಡಿದ್ದರು.

ಮೊದಲ ಐಪಿಎಲ್

ಮೊದಲ ಐಪಿಎಲ್

ಇಂಗ್ಲೆಂಡ್‌ ಆಲ್‌ರೌಂಡರ್‌ ಮೋಯಿನ್ ಅಲಿ ಅವರನ್ನು ಆರ್‌ಸಿಬಿ ಯು 1.70 ಕೋಟಿ ಮೊತ್ತಕ್ಕೆ ಖರೀದಿಸಿದೆ. ಈ ಐಪಿಎಲ್ ಮೋಯಿನ್ ಅಲಿ ಅವರ ಮೊದಲ ಐಪಿಎಲ್ ಆಗಿದ್ದು, 67 ಏಕದಿನ ಪಂದ್ಯ ಆಡಿರುವ ಮೋಯಿನ್ ಅಲಿ ಅವರು 1309 ರನ್ ಗಳಿಸಿದ್ದಾರೆ. 51 ವಿಕೆಟ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕದ ಯುವ ಕೀಪರ್

ದಕ್ಷಿಣ ಆಫ್ರಿಕದ ಯುವ ಕೀಪರ್

ದಕ್ಷಿಣ ಆಪ್ರಿಕಾದ ಯುವ ಹಾಗೂ ಪ್ರಿತಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಬೆಂಗಳೂರು 2.8 ಕೋಟಿಗೆ ಖರೀದಿಸಿದೆ. ಕಡಿಮೆ ಮೊತ್ತಕ್ಕೆ ಉತ್ತಮ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ ಬೆಂಗಳೂರು. ಐಪಿಎಲ್‌ನಲ್ಲಿ 26 ಪಂದ್ಯಗಳನ್ನು ಆಡಿರುವ ಡಿ ಕಾಕ್ ಅವರು ಈವರೆಗೆ 726 ರನ್ ಬಾರಿಸಿದ್ದಾರೆ. 25 ವರ್ಷದ ಈ ಆಟಗಾರ ಭಾರತದ ಪಿಚ್‌ನಲ್ಲಿ ಆಡಿ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಒಂದು ಶತಕವನ್ನೂ ಇವರು ಭಾರಿಸಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಇವರು ದೆಹಲಿ ಪಂದ್ಯದಲ್ಲಿ ಆಡಿದ್ದರು.

ವೇಗಿಗೆ ಆರ್‌ಸಿಬಿಯಲ್ಲಿ ಜಾಗ

ವೇಗಿಗೆ ಆರ್‌ಸಿಬಿಯಲ್ಲಿ ಜಾಗ

ಭಾರತ ಕ್ರಿಕೆಟ್‌ ತಂಡದ ಪ್ರತಿಭಾನ್ವಿತ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು 4.20 ಕೋಟಿ ತೆತ್ತು ಆರ್‌ಸಿಬಿ ಕೊಂಡಿದೆ. ಉಮೇಶ್ ಯಾದವ್ ಅವರು ಐಪಿಎಲ್‌ನಲ್ಲಿ ಈ ವರೆಗೆ ಉತ್ತಮ ಸಾಧನೆಯನ್ನೇ ತೋರಿದ್ದಾರೆ. 93 ಐಪಿಎಲ್ ಪಂದ್ಯಗಳಾಡಿರುವ ಯಾದವ್ ಅವರು 91 ವಿಕೆಟ್ ಪಡೆದಿದ್ದಾರೆ. 24ಕ್ಕೆ 4 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಸಾಧನೆ.

ವಿಕೆಟ್‌ ಕಬಳಿಸಬಲ್ಲ ಸ್ಪಿನ್ನರ್‌ಗೆ ಸ್ಥಾನ

ವಿಕೆಟ್‌ ಕಬಳಿಸಬಲ್ಲ ಸ್ಪಿನ್ನರ್‌ಗೆ ಸ್ಥಾನ

ಕಳೆದ ಬಾರಿ ಬೆಂಗಳೂರು ತಂಡದಲ್ಲಿ ಆಡಿದ್ದ ಯಜುವೇಂದರ್ ಚಾಹಲ್ ಅವರನ್ನು ಈ ಬಾರಿಯೂ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಬೇರೆ ತಂಡದ ತೆಕ್ಕೆಗೆ ಬಿದ್ದದ್ದ ಯಜುವೇಂದರ್ ಚಾಹಲ್ ಅವರನ್ನು ರೈಟ್‌ ಟು ಮ್ಯಾಚ್‌ ಹಕ್ಕು ಬಳಸಿ ಆರ್‌ಸಿಬಿ ತಂಡವು ತಮ್ಮ ತಂಡದಲ್ಲೇ ಉಳಿಸಿಕೊಂಡಿತು. ಚಾಹಲ್ ಅವರಿಗೆ ನೀಡುತ್ತಿರುವ ಮೊತ್ತ 4.20 ಕೋಟಿ.

ಹೊಸ ಪ್ರತಿಭೆಗೆ ಮಣೆ

ಹೊಸ ಪ್ರತಿಭೆಗೆ ಮಣೆ

ಈ ಹಿಂದೆ ಪಂಜಾಬ್‌ ಪರವಾಗಿ ಆಡಿ ಉತ್ತಮ ಪ್ರದರ್ಶನ ತೋರಿದ್ದ ಮನನ್ ವೋಹ್ರಾ ಅವರನ್ನು ಈ ಬಾರಿ ಬೆಂಗಳೂರು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅನ್‌ಕ್ಯಾಪ್ (ದೇಸೀ) ಆಟಗಾರರ ವಿಭಾಗದಲ್ಲಿದ್ದ ಮನನ್ ವೋಹ್ರಾ ಅವರ ಮೂಲ ಮೊತ್ತ ಇದ್ದದ್ದು ಕೇವಲ 20 ಲಕ್ಷ. ವೋಹ್ರಾ ಅವರಿಗೆ 1.10 ಕೋಟಿ ತೆತ್ತು ತಂಡಕ್ಕೆ ಸೇರಿಸಿಕೊಂಡಿದೆ ಆರ್‌ಸಿಬಿ

Story first published: Saturday, January 27, 2018, 13:58 [IST]
Other articles published on Jan 27, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ