ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್ ಸ್ಫೋಟಕ ಶತಕದಿಂದಾದ ದಾಖಲೆಗಳೆಷ್ಟು ಗೊತ್ತಾ?

Rishabh Pant steps up to challenge Dhoni with fiery ton

ನವದೆಹಲಿ, ಮೇ 11: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ರಿಷಬ್ ಪಂತ್ ಬ್ಯಾಟ್ ನಿಂದ ಗುರುವಾರ ಸಿಡಿದ ಸ್ಫೋಟಕ ಶತಕ ಹಲವು ದಾಖಲೆಗಳನ್ನು ಹುಟ್ಟು ಹಾಕಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ-ಹೈದರಾಬಾದ್ ಪಂದ್ಯದಲ್ಲಿ ಪಂತ್ 63 ಎಸೆತಗಳಲ್ಲಿ 128 ರನ್ ಸಿಡಿಸಿದ್ದರು.

ಗುರುವಾರದ ಐಪಿಎಲ್ 42ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಹೈದರಾಬಾದ್ ಎದುರು 9 ವಿಕೆಟ್ ಸೋಲನುಭವಿಸಿತು. ಆದರೆ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

Rishabh Pant steps up to challenge Dhoni with fiery ton

ಹೆಚ್ಚು ಸಿಕ್ಸರ್ ಬಾರಿಸದವರ ಪಟ್ಟಿಯಲ್ಲಿ ಪಂತ್
ಡೆಲ್ಲಿ-ಹೈದರಾಬಾದ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಪಂತ್ 2018ನೇ ಐಪಿಎಲ್ ನಲ್ಲಿ ಒಟ್ಟು 27 ಸಿಕ್ಸರ್ ಬಾರಿಸುವ ಮೂಲಕ ಹೆಚ್ಚು ಸಿಕ್ಸರ್ ಸಿಡಿಸಿದವರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಪಂತ್ ಆಡಿರುವ 11 ಇನ್ನಿಂಗ್ಸ್ ಗಳಲ್ಲಿ 27 ಸಿಕ್ಸರ್ ದಾಖಲೆಗಳೊಂದಿಗೆ 'ಮೋಸ್ಟ್ ಸಿಕ್ಸರ್ ಹಿಟ್ಟರ್' ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಗರಾಗಿದ್ದರೆ, ಒಟ್ಟು 10 ಇನ್ನಿಂಗ್ಸ್ ಗಳನ್ನು ಆಡಿರುವ ಧೋನಿ 27 ಸಿಕ್ಸರ್ ಗಳೊಂದಿಗೆ ಪ್ರಥಮ ಸ್ಥಾನಿಗರಾಗಿದ್ದಾರೆ.

Rishabh Pant steps up to challenge Dhoni with fiery ton

ಮೊದಲ (ಗರಿಷ್ಠ) ಶತಕ
ಐಪಿಎಲ್ ನಲ್ಲಿ ಪಂತ್ ಅವರದ್ದು ಮೊದಲ ಶತಕವಾಗಿ ದಾಖಲಾಗಿದೆ. ಅದೂ 63 ಎಸೆತಗಳಿಗೆ ಗರಿಷ್ಠ (ಅಜೇಯ 128) ರನ್ ಪೇರಿಸಿದ ಹಿರಿಮೆಗೆ ಉತ್ತರಖಂಡದ ಆಟಗಾರ ಪಂತ್ ಪಾತ್ರರಾಗಿದ್ದಾರೆ. ಇವರನ್ನು ಬಿಟ್ಟರೆ ಶೇನ್ ವಾಟ್ಸನ್ 106ರ ಗರಿಷ್ಠ ರನ್ ಐಪಿಎಲ್ ನಲ್ಲಿ ಗಳಿಸಿದ್ದರು.

Rishabh Pant steps up to challenge Dhoni with fiery ton

50ನೇ ಶತಕ
ಪಂತ್ ಮೊದಲ ಐಪಿಎಲ್ ಮೊದಲ ಶತಕದೊಂದಿಗೆ ಐಪಿಎಲ್ 50ನೇ ಶತಕ ಬಾರಿಸಿದ ಖ್ಯಾತಿಗೂ ಕಾರಣರಾಗಿದ್ದಾರೆ. ಈ ಐಪಿಎಲ್ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ ಶೇನ್ ವಾಟ್ಸನ್ 57 ಎಸೆತಗಳಲ್ಲಿ 106 ರನ್, ಕಿಂಗ್ಸ್ ಇಲೆವೆನ್ ಪಂಜಾಬ್ ನ ಕ್ರಿಸ್ ಗೇಲ್ 63 ಎಸೆತಗಳಲ್ಲಿ 104 ರನ್ ಬಾರಿಸಿ ಕ್ರಮವಾಗಿ 49, 48ನೇ ಶತಕಗಳನ್ನು ಪೂರೈಸಿದ್ದರು.

Story first published: Friday, May 11, 2018, 17:21 [IST]
Other articles published on May 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X