ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೋಡ್ಬೇಡಿ ಪ್ಲೀಸ್; ಇದು ‘ಈ ಸಾರಿ ಕಪ್ ನಮ್ದೇ’ ಅಂದೋರ ಕತೆ..

Royal Challengers season ends; but troll starts

ಬೆಂಗಳೂರು, ಮೇ 8: ಬೆಂಗಳೂರು ಬೆಂಬಲಿಗರು ಐಪಿಎಲ್ ಆರಂಭದಿಂದಲೂ ಆರ್ಸಿಬಿ ಅಭಿಮಾನದಿಂದ 'ಈ ಸಾರಿ ಕಪ್ ನಮ್ದೇ' ಅಂತ ರಾಗ ಶುರು ಮಾಡಿದ್ರು. ಆದರೆ ಕಪ್ ನಮ್ದೇ ನಮ್ದೇ ಅಂದೋರ ಕತೆ ಈಗೇನಾಗಿದೆ ನೋಡಿ.

ಸೋಮವಾರ ಹೈದರಾಬಾದ್ ನಲ್ಲಿ ನಡೆದಿದ್ದ ಹೈದರಾಬಾದ್-ಬೆಂಗಳೂರು 39ನೇ ಪಂದ್ಯದಲ್ಲಿ ಸನ್ ರೈಸರ್ಸ್ ನೀಡಿದ್ದ 147 ರನ್ ಗುರಿ ತಲುಪಲಾಗದೆ ರಾಯಲ್ ಚಾಲೆಂಜರ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದು 141 ರನ್ ಪೇರಿಸಿ 5 ರನ್ ನಿಂದ ಶರಣಾಯಿತು. ಇದರ ಬೆನ್ನಲೇ ಆರ್ಸಿಬಿ ಮೇಲೆ (ಟ್ರೋಲ್) ತಮಾಷೆಯೂ ಜೋರಾಗಿದೆ.

Royal Challengers season ends; but troll starts

ನಗಲಿಕ್ಕೂ ಅಲ್ಲ, ಅಳಲಿಕ್ಕೂ ಅಲ್ಲ
ಹೈದರಾಬಾದ್ ಸೋಲಿನೊಂದಿಗೆ ಆರ್ಸಿಬಿಯ ಕಪ್ಪಿನಾಸೆ ಕಮರಿ ಹೋಯಿತು. ಈ ಪಂದ್ಯ ಮುಗಿದದ್ದೇ ತಡ; ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಮತ್ತೆ ಟ್ರೋಲ್ ಗೆ ಗುರಿಯಾಗತೊಡಗಿದೆ. ಅತ್ತ ಆರ್ಸಿಬಿ ಅಭಿಮಾನಿಗಳ ಪಾಡು ನಗುವುದಕ್ಕೂ ಅಲ್ಲ-ಅಳುವುದಕ್ಕೂ ಅಲ್ಲ ಎಂಬಂತಾಗಿದೆ.

Royal Challengers season ends; but troll starts

ಕಪ್ಪಿಲ್ಲ ಈ ಸಾರಿ ಚಿಪ್ಪೇ ಗತಿ!
ಕಪ್ ನಮ್ದೇ ಕಪ್ ನಮ್ದೇ ಅನ್ನೋ ಟ್ರೆಂಡ್ ಕೆಲ ದಿನಗಳ ಹಿಂದೆ ಜೋರಾಗಿತ್ತು. ಆದರೆ ಆರ್ಸಿಬಿ ಸೋಲುತ್ತಾ ಬರುತ್ತಿದ್ದಂತೆ ಬೆಂಗಳೂರು ಅಭಿಮಾನಿಗಳು ಕೊಹ್ಲಿ ಬಳಗವನ್ನು ಟ್ರೋಲ್ ಮಾಡತೊಡಗಿದ್ದಷ್ಟೇ ಅಲ್ಲ, ಕಪ್ಪಲ್ಲ; ಸಾರಿ 'ಚಿಪ್' ನಮ್ದು ಅಂತ ಅಸಹನೆಯಲ್ಲಿ ಗೊಣಗಿಕೊಂಡಿದ್ದರು, ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು!

Royal Challengers season ends; but troll starts

ಅತೀ ಹೆಚ್ಚು ಟ್ರೋಲ್
ಈ ಸಾರಿಯ ಐಪಿಎಲ್ ಇನ್ನೇನು ಒಂದಿಷ್ಟು ದಿನಗಳಲ್ಲಿ ಮುಗಿಯುವುದರಲ್ಲಿದೆ. ಈವರೆಗೆ ಗಮನಿಸಿದರೆ ಐಪಿಎಲ್ ಪಂದ್ಯಾಟಕ್ಕೆ ಸಂಬಂಧಿಸಿ ಅತೀ ಹೆಚ್ಚು ಟ್ರೋಲ್ ಗೀಡಾದ ತಂಡವೆಂದರೆ ಆರ್ಸಿಬಿ. ಆರ್ಸಿಬಿಗೆ ಬೆಂಬಲಿಗರು ಹೆಚ್ಚಿದ್ದರು. ಆದರೆ ಆರ್ಸಿಬಿಯ ಕಳಪೆ ಪ್ರದರ್ಶನ ಅಭಿಮಾನಿಗಳ ಅಸಮಾಧಾನಕ್ಕೆ ಈಡಾಗಿ ಟ್ರೋಲ್ ರೂಪದಲ್ಲಿ ಹೊರಬರತೊಡಗಿತು.

ಬದಲಾದ ರಾಗ
ಈ ಆರ್ಸಿಬಿಯ ಸೋಲಿನ ದೆಸೆಯಿಂದಾಗಿ ಬೆಂಗಳೂರು ಅಭಿಮಾನಿಗಳ 'ಈ ಸಾರಿ ಕಪ್ ನಮ್ದೇ' ರಾಗ 'ಮುಂದಿನಸಾರಿ ಕಪ್ ನಮ್ದೇ' ಎಂಬುದಕ್ಕೆ ಬದಲಾಗಿತ್ತು. ಅಂತೂ ರ್ಆಸಿಬಿ ಮುಂದಿನಸಾರಿಯಾದ್ರೂ ಕಪ್ ಗೆಲ್ಲುತ್ತಾ ಕಾಯಬೇಕಷ್ಟೇ.

Story first published: Tuesday, May 8, 2018, 14:50 [IST]
Other articles published on May 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X