
ಕಾಮೆಂಟರಿ ಮಾಡಲು ಕಾಯುತ್ತಿದ್ದೇನೆ
ನಾನು ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದೇನೆ ಎಸ್‌ಎ20 ಸಮಯದಲ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರ ಆಟವನ್ನು ವೀಕ್ಷಿಸಲಿದ್ದೇನೆ. ಅವರ ಆಟವನ್ನು ಆನಂದಿಸುತ್ತಾ ಮೈಕ್‌ನ ಹಿಂದೆ ಕೆಲಸ ಮಾಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಕೆಲವು ಸಹ ಆಟಗಾರರು ಮತ್ತು ಕ್ರಿಕೆಟ್ ದಂತಕಥೆಗಳ ಜೊತೆ ಸೇರಿ ಈ ಕೆಲಸ ಮಾಡುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಎಬಿಡಿ ಐಪಿಎಲ್‌ನಲ್ಲಿ ಮುಖ್ಯಪಾತ್ರವನ್ನು ವಹಿಸುವುದಾಗಿ ಹೇಳಿದ್ದಾರೆ. 2023ರ ಐಪಿಎಲ್‌ನಲ್ಲಿ ಅವರು ಆರ್ ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಯಾವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ನೋಡಬೇಕಿದೆ.
ಅವರ ಬ್ಯಾಟಿಂಗ್ ಪ್ರದರ್ಶನದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಎಬಿಡಿ, ಈಗ ಕಾಮೆಂಟರಿ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
Rishabh Pant: ರಿಷಬ್ ಪಂತ್‌ಗೆ ಲಂಡನ್‌ನಲ್ಲಿ ನಡೆಯಲಿದೆ ಶಸ್ತ್ರಚಿಕಿತ್ಸೆ : 9 ತಿಂಗಳು ಕ್ರಿಕೆಟ್ ಆಡೋದೆ ಅನುಮಾನ!

ಟೂರ್ನಿ ಬಗ್ಗೆ ಎಬಿ ಡಿವಿಲಿಯರ್ಸ್ ಸಂತಸ
ಎಸ್‌ಎ20 ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಭಾರತೀಯ ಕ್ರಿಕೆಟ್ ಮೇಲೆ ಬೀರಿದ ಪ್ರಭಾವವನ್ನು ಎಸ್‌ಎ 20 ದಕ್ಷಿಣ ಆಫ್ರಿಕಾ ತಂಡದ ಮೇಲೆ ಬೀರಲಿದೆ ಎಂದು ಹೇಳಿದ್ದಾರೆ.
ಹಲವು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ. ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಆಡುವ ಅವಕಾಶ ಸಿಗುವುದರಿಂದ ಉತ್ತಮ ಆಟಗಾರರು ರೂಪುಗೊಳ್ಳುತ್ತಾರೆ ಎಂದು ಎಬಿಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಐಪಿಎಲ್ ನಮ್ಮ ಜೀವನವನ್ನು ಬದಲಾಯಿಸಿತು, ಎಸ್‌ಎ 20 ಕೂಡ ಹಲವು ಕ್ರಿಕೆಟಿಗರ ಜೀವನವನ್ನು ಬದಲಾಯಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಮೊದಲ ಆವೃತ್ತಿಯಲ್ಲಿ ಆರು ತಂಡಗಳು
ಡರ್ಬನ್ ಸೂಪರ್ ಜೈಂಟ್ಸ್, ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಕೇಪ್ ಟೌನ್, ಪರ್ಲ್ ರಾಯಲ್ಸ್, ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಎಸ್‌ಎಟಿ20 ಉದ್ಘಾಟನಾ ಪಂದ್ಯಾವಳಿಯಲ್ಲಿ ಆಡಲಿವೆ.
ಜನವರಿ 10 ರಂದು ಈ ಟೂರ್ನಿಗೆ ಅದ್ಧೂರಿ ಚಾಲನೆ ದೊರೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಪರ್ಲ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಕೇಪ್ ಟೌನ್ ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್‌ನ 6 ಪ್ರಾಂಚೈಸಿಗಳು ಎಸ್‌ಎ ಟಿ20 ಯ ತಂಡಗಳ ಒಡೆತನವನ್ನು ಹೊಂದಿರುವುದರಿಂದ ಇದನ್ನು ಮಿನಿ ಐಪಿಎಲ್ ಎಂದೇ ಬಿಂಬಿಸಲಾಗುತ್ತಿದೆ.