ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್ ನಾಯಕನ ಪಾತ್ರಕ್ಕೆ ನಿಜಕ್ಕೂ ಬೆಳೆಯುತ್ತಿದ್ದಾರೆ: ಬಟ್ಲರ್

Sanju Samson was really growing into his role as a leader, says Jos Buttler

ನವದೆಹಲಿ: ರಾಜಸ್ಥಾನ್ ರಾಯಲ್ಸ್ ಮುನ್ನಡೆಸೋ ಜವಾಬ್ದಾರಿ ಸಿಕ್ಕಿರೋದು ಸಂಜು ಸ್ಯಾಮ್ಸನ್‌ಗೆ ಕಲಿಯಲು ಅವಕಾಶ ಮಾಡಿಕೊಟ್ಟಿದೆ ಎಂದು ಆರ್‌ಆರ್ ಅನುಭವಿ ಬ್ಯಾಟ್ಸ್‌ಮನ್‌, ಇಂಗ್ಲೆಂಡ್‌ನ ಜೋಸ್ ಬಟ್ಲರ್ ಹೇಳಿದ್ದಾರೆ. 2021ರಲ್ಲಿ ಸ್ಯಾಮ್ಸನ್ ಅವರು ರಾಜಸ್ಥಾನ್ ರಾಯಲ್ಸ್‌ಗೆ ನೂತನ ನಾಯಕರಾಗಿ ಆಯ್ಕೆಯಾಗಿದ್ದರು.

ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಪೊವಾರ್ 2ನೇ ಬಾರಿ ಆಯ್ಕೆಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಪೊವಾರ್ 2ನೇ ಬಾರಿ ಆಯ್ಕೆ

ಹಿಂದಿನ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ನಾಯಕರಾಗಿದ್ದರು. ಆದರೆ ಸ್ಮಿತ್ ನಡೆಯಿಂದ ಅಸಮಾಧಾನಗೊಂಡ ಆರ್‌ಆರ್ ಈ ಬಾರಿಯ ಆಟಗಾರರ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿತ್ತು. ಹೀಗಾಗಿ ನಾಯಕನ ಜವಾಬ್ದಾರಿ ಸಂಜು ಹೆಗಲೇರಿತ್ತು.

'ಸಂಜುಗೆ ನಾಯಕತ್ವ ನಿಜಕ್ಕೂ ಒಳ್ಳೆಯ ಕಲಿಕಾ ಅನುಭವ ನೀಡಿದೆ. ಟೂರ್ನಮೆಂಟ್ ಮುಂದುವರೆದಂತೆಲ್ಲ ಸಂಜು ನಾಯಕನ ಪಾತ್ರದಲ್ಲಿ ಬೆಳೆಯುತ್ತಿದ್ದಾರೆ ಎಂದು ನನಗನ್ನಿಸುತ್ತದೆ. ಒಳ್ಳೆಯ ಆಟ, ಸ್ಥಿರ ಆಟ ನೀಡಲು ಆತ ಪ್ರಯತ್ನಿಸುತ್ತಿದ್ದ,' ಎಂದು ವರ್ಚುಯಲ್ ಸಂವಾದದಲ್ಲಿ ಮಾತನಾಡಿದ ಬಟ್ಲರ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ಪೊಲಾರ್ಡ್ ಸೇರಿದ ಕುತೂಹಲಕಾರಿ ಕತೆ ಹೇಳಿದ ಬ್ರಾವೋ!ಮುಂಬೈ ಇಂಡಿಯನ್ಸ್‌ಗೆ ಪೊಲಾರ್ಡ್ ಸೇರಿದ ಕುತೂಹಲಕಾರಿ ಕತೆ ಹೇಳಿದ ಬ್ರಾವೋ!

2020ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸಂಜು ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಈ ಬಾರಿ ಸಂಜು ನಾಯಕತ್ವದಲ್ಲಿ ಆರ್‌ಆರ್ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿತ್ತು. ಆದರೆ ಈ ಐಪಿಎಲ್ ಸೀಸನ್‌ ಪೂರ್ಣಗೊಳ್ಳದೆ 29 ಪಂದ್ಯಗಳ ಬಳಿಕ ಕೋವಿಡ್ ಕಾರಣದಿಂದ ನಿಲುಗಡೆಯಾಗಿದೆ.

Story first published: Thursday, May 13, 2021, 20:46 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X