ಆಯ್ಕೆಗಾರರು ಪಾಂಡ್ಯನನ್ನು ಮನೆಗೆ ಕಳುಹಿಸಲು ಮುಂದಾದಾಗ ತಡೆದು ತಂಡದಲ್ಲಿ ಉಳಿಸಿಕೊಂಡಿದ್ದು ಆ ಒಬ್ಬ ವ್ಯಕ್ತಿ!

ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನು ಪಡೆದುಕೊಂಡಿಲ್ಲ. ಕಳೆದ ಅಕ್ಟೋಬರ್ 24ರ ಭಾನುವಾರದಂದು ಬದ್ಧ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ಸೂಪರ್ 12 ಹಂತದಲ್ಲಿನ ತನ್ನ ಮೊದಲನೇ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಹೀನಾಯ ಸೋಲನ್ನು ಅನುಭವಿಸಿತ್ತು. ಈ ಸೋಲಿನ ನಂತರ ಟೀಮ್ ಇಂಡಿಯಾದ ವಿಫಲತೆಯ ಕುರಿತು ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು ಆಟಗಾರರ ಆಯ್ಕೆಯ ಕುರಿತು ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ದ್ರಾವಿಡ್ 5ರಿಂದ 10 ವರ್ಷದ ಯೋಜನೆಯೊಂದಿಗೆ ಟೀಮ್ ಇಂಡಿಯಾ ಕೋಚ್ ಆಗುತ್ತಾರೆ ಎಂದ ಮಾಜಿ ಕ್ರಿಕೆಟಿಗದ್ರಾವಿಡ್ 5ರಿಂದ 10 ವರ್ಷದ ಯೋಜನೆಯೊಂದಿಗೆ ಟೀಮ್ ಇಂಡಿಯಾ ಕೋಚ್ ಆಗುತ್ತಾರೆ ಎಂದ ಮಾಜಿ ಕ್ರಿಕೆಟಿಗ

ಅದರಲ್ಲಿಯೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಥಾನವನ್ನು ನೀಡಿದ್ದು ಭಾರೀ ದೊಡ್ಡ ಮಟ್ಟದ ಟೀಕೆಗೆ ಕಾರಣವಾಗಿದೆ. ಹೌದು, ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾದಾಗ ಹಾರ್ದಿಕ್ ಪಾಂಡ್ಯಗೆ ಸ್ಥಾನವನ್ನು ನೀಡಿದ ವಿಷಯವಾಗಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಈ ರೀತಿಯ ವಿರೋಧ ಮತ್ತು ಟೀಕೆಗಳಿಗೆ ಕಾರಣ ಹಾರ್ದಿಕ್ ಪಾಂಡ್ಯ ಕಳೆದ ಹಲವಾರು ಪಂದ್ಯಗಳಲ್ಲಿ ಬೌಲಿಂಗ್ ಮಾಡದೇ ಇದ್ದದ್ದು ಮತ್ತು ಬ್ಯಾಟಿಂಗ್ ವಿಭಾಗದಲ್ಲಿಯೂ ಕಳಪೆ ಪ್ರದರ್ಶನವನ್ನು ನೀಡಿದ್ದು.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಗೆಲ್ಲಲು ಈ ಇಬ್ಬರನ್ನು ಭಾರತ ತಂಡದಿಂದ ಕೈಬಿಡಬೇಕು: ಗವಾಸ್ಕರ್ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಗೆಲ್ಲಲು ಈ ಇಬ್ಬರನ್ನು ಭಾರತ ತಂಡದಿಂದ ಕೈಬಿಡಬೇಕು: ಗವಾಸ್ಕರ್

ಇತ್ತೀಚೆಗಷ್ಟೇ ಯುಎಇನಲ್ಲಿಯೇ ಮುಕ್ತಾಯವಾದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದಿದ್ದ ಹಾರ್ದಿಕ್ ಪಾಂಡ್ಯ ಯಾವುದೇ ಪಂದ್ಯದಲ್ಲಿಯೂ ಕೂಡ ಬೌಲಿಂಗ್ ಮಾಡಿರಲಿಲ್ಲ ಮತ್ತು ಬ್ಯಾಟಿಂಗ್‌ನಲ್ಲಿಯೂ ಕೂಡ ಕಳಪೆ ಪ್ರದರ್ಶನವನ್ನು ನೀಡಿ ಮಂಕಾಗಿದ್ದರು. ಹೀಗೆ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದ ಹಾರ್ದಿಕ್ ಪಾಂಡ್ಯಗೆ ಹೇಗೆ ಅವಕಾಶ ಸಿಕ್ಕಿತು ಎಂಬುದನ್ನು ಇದೀಗ ಬಲ್ಲ ಮೂಲವೊಂದು ಈ ಕೆಳಕಂಡಂತೆ ಬಿಚ್ಚಿಟ್ಟಿದೆ.

ಹಾರ್ದಿಕ್ ಪಾಂಡ್ಯ ತಂಡದಲ್ಲಿರಬೇಕು ಎಂದು ಸೂಚಿಸಿದ್ದೇ ಎಂಎಸ್ ಧೋನಿ!

ಹಾರ್ದಿಕ್ ಪಾಂಡ್ಯ ತಂಡದಲ್ಲಿರಬೇಕು ಎಂದು ಸೂಚಿಸಿದ್ದೇ ಎಂಎಸ್ ಧೋನಿ!

"ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೀರಸ ಪ್ರದರ್ಶನವನ್ನು ನೀಡಿದ ನಂತರ ಆತನನ್ನು ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು ಭಾರತಕ್ಕೆ ವಾಪಸ್ ಕಳುಹಿಸಲು ತೀರ್ಮಾನಿಸಿದ್ದರು. ಆದರೆ ಮಾರ್ಗದರ್ಶಕನಾಗಿ ಆಯ್ಕೆಯಾಗಿದ್ದ ಎಂ ಎಸ್ ಧೋನಿ ಹಾರ್ದಿಕ್ ಪಾಂಡ್ಯನನ್ನು ತಂಡದಲ್ಲಿಯೇ ಉಳಿಸಿಕೊಳ್ಳಬೇಕೆಂದು ಒತ್ತಡ ಹಾಕಿದರು" ಎಂದು ಬಲ್ಲ ಮೂಲಗಳು ತಿಳಿಸಿವೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಲು ನಿರಾಕರಿಸಿದ್ದರು ಹಾರ್ದಿಕ್ ಪಾಂಡ್ಯ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಲು ನಿರಾಕರಿಸಿದ್ದರು ಹಾರ್ದಿಕ್ ಪಾಂಡ್ಯ

ಕಳೆದ ಅಕ್ಟೋಬರ್ 24ರ ಭಾನುವಾರದಂದು ಪಾಕಿಸ್ತಾನ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭಕ್ಕೂ ಮುನ್ನವೇ ಮಾತನಾಡಿದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿಯೂ ಕೂಡ ನಾನು ಬೌಲಿಂಗ್ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಅಷ್ಟೇ ಅಲ್ಲದೆ ಬ್ಯಾಟಿಂಗ್ ವೇಳೆ ಮತ್ತೆ ಭುಜದ ಗಾಯಕ್ಕೆ ಒಳಗಾದ ಹಾರ್ದಿಕ್ ಪಾಂಡ್ಯ ಚಿಕಿತ್ಸೆಗೆ ಒಳಗಾಗಿ ಆ ಪಂದ್ಯದಲ್ಲಿ ಫೀಲ್ಡಿಂಗ್ ಕೂಡ ಮಾಡಿರಲಿಲ್ಲ.

ಮುಂದಿನ ಪಂದ್ಯವನ್ನಾಡಲು ಫಿಟ್‌ನೆಸ್ ಪರೀಕ್ಷೆ ತೇರ್ಗಡೆಯಾಗಬೇಕು ಹಾರ್ದಿಕ್ ಪಾಂಡ್ಯ

ಮುಂದಿನ ಪಂದ್ಯವನ್ನಾಡಲು ಫಿಟ್‌ನೆಸ್ ಪರೀಕ್ಷೆ ತೇರ್ಗಡೆಯಾಗಬೇಕು ಹಾರ್ದಿಕ್ ಪಾಂಡ್ಯ

ಹೀಗೆ ಗಾಯದ ಸಮಸ್ಯೆಗೆ ಒಳಗಾಗಿ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಾ, ಬೌಲಿಂಗ್ ಕೂಡ ಮಾಡಲಾಗದೇ ಇದ್ದ ಹಾರ್ದಿಕ್ ಪಾಂಡ್ಯ ಕಳೆದ ಬುಧವಾರದಂದು ಅಭ್ಯಾಸದ ವೇಳೆ 15 ನಿಮಿಷಗಳ ಕಾಲ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದರು. ಹೀಗೆ ಮುಂಬರುವ ಭಾನುವಾರದಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸ ನಡೆಸಿದ್ದು ಇದೀಗ ಅದಕ್ಕೂ ಮುನ್ನ ಫಿಟ್‌ನೆಸ್ ಪರೀಕ್ಷೆಯೊಂದನ್ನು ಹಾರ್ದಿಕ್ ಪಾಂಡ್ಯ ಎದುರಿಸಲಿದ್ದಾರೆ. ಹೌದು, ಇಂದು ( ಅಕ್ಟೋಬರ್ 29 ) ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಪರೀಕ್ಷೆಯನ್ನು ಎದುರಿಸಲಿದ್ದು ಇದರಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, October 29, 2021, 18:28 [IST]
Other articles published on Oct 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X