ಚೆಂಡು ವಿರೂಪ ಪ್ರಕರಣ: ಐಸಿಸಿಗೆ ಕ್ರಿಕೆಟ್ ದಿಗ್ಗಜರ ತಪರಾಕಿ

Posted By:
Seniour cricketers slams on ICC for soft on Australian team

'ರೌಡಿ ಕ್ರಿಕೆಟರ್ಸ್' ಎಂದೇ ಕರೆಸುಕೊಳ್ಳುವ ಆಸ್ಟ್ರೇಲಿಯನ್ನರು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ರೆಡ್ ಹ್ಯಾಂಡ್‌ ಆಗಿ ಸಿಕ್ಕಿ ಹಾಕಿಕೊಂಡು ಜಗತ್ತಿನೆಲ್ಲೆಡೆ ಕ್ರಿಕೆಟ್ ಪ್ರೇಮಿಗಳಿಂದ ಮೂದಲಿಕೆ ಒಳಗಾಗಿದ್ದಾರೆ.

ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸಿ ನಡೆದುಕೊಂಡ ರೀತಿಯೂ ಸಾಕಷ್ಟು ಚರ್ಚೆ ಮತ್ತು ಮೂದಲಿಕೆಗೆ ಕಾರಣವಾಗಿದೆ. ಚೆಂಡನ್ನು ವಿರೂಪಗೊಳಿಸಿ ಸಾಕ್ಷಿ ಸಮೇತ ದೊರಕಿದ ಆಸ್ಟ್ರೇಲಿಯಾ ಆಟಗಾರರಿಗೆ ಕೇವಲ ದಂಡ ಮತ್ತು ಒಂದು ಪಂದ್ಯಕ್ಕೆ ನಿಷೇಧ ಹೇರಿ ಶಿಕ್ಷೆ ನೀಡಲಾಗಿದೆ.

ನಾಯಕ ಸ್ಟೀವ್ ಸ್ಮಿತ್ ಅವರಿಗೆ ದಂಡ ಮತ್ತು ಒಂದು ಪಂದ್ಯಕ್ಕೆ ನಿಷೇಧ, ಡೇವಿಡ್ ವಾರ್ನರ್‌ಗೆ ದಂಡ ಮತ್ತು ಒಂದು ಪಂದ್ಯ ನಿಷೇಧ ಮಾಡಲಾಗಿದೆ ಆದರೆ ಚೆಂಡನ್ನು ಸ್ಯಾಂಡ್‌ ಪೇಪರ್‌ನಿಂದ ಉಜ್ಜಿದ ಪ್ರಮುಖ ಅಪರಾಧಿ ಕೆಮರಾನ್ ಬ್ಯಾಂಕ್ರೊಫ್ಟ್‌ ಅವರಿಗೆ ಪಂದ್ಯದ 25% ದಂಡ ಹಾಗೂ ಮೂರು ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ.

ಪಂದ್ಯ ಗೆಲ್ಲಲು ಚೆಂಡು ವಿರೂಪಗೊಳಿಸಿ ಹೀನ ಕೃತ್ಯಕ್ಕೆ ಮೊರೆ ಹೊದ ಕ್ರಿಕೆಟಿಗರ ನಡೆ ಕ್ಯಾಮೆರಾದಲ್ಲಿ ಸೆರೆಯಾಗಿ ವಿಶ್ವ ಕ್ರಿಕೆಟ್ ಎದುರು ಬೆತ್ತಲಾದವರ ವಿರುದ್ಧ ಐಸಿಸಿಯು ಇಷ್ಟು ಸೌಮ್ಯವಾಗಿ ನಡೆದುಕೊಂಡಿರುವ ಬಗ್ಗೆ ಕ್ರಿಕೆಟ್ ಪ್ರಿಯರು ಮಾತ್ರವಲ್ಲದೆ ಕ್ರಿಕೆಟ್ ದಿಗ್ಗಜರು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

'ಜಂಟಲ್‌ಮನ್ ಗೇಮ್', ಸಂಭಾವಿತರ ಆಟ ಎಂದು ಕರೆಯಲಾಗುವ ಕ್ರಿಕೆಟ್‌ಗೆ ಮಸಿ ಬಳಿದ ಆಟಗಾರರಿಗೆ ಕೇವಲ ದಂಡ ಮತ್ತು ಒಂದು ಪಂದ್ಯದ ನಿಷೇಧವಷ್ಟೆ ವಿಧಿಸಿರುವುದು ಹಲವು ಹಿರಿಯ ಆಟಗಾರರನ್ನು ಕೆರಳಿಸಿದೆ. ಐಸಿಸಿಯು ಇಂತಹಾ ಆಟಗಾರರ ವಿರುದ್ಧ ಕಠಿಣವಾಗಿ ವರ್ತಿಸಿ ಭವಿಷ್ಯದಲ್ಲಿ ಆಟಗಾರರಿಂದ ಇಂತಹಾ ತಪ್ಪುಗಳು ಆಗದಂತೆ ತಡೆಯುವ ಛಾತಿ ತೋರಬೇಕಿತ್ತು ಎಂಬುದು ಹಲವರ ಆಗ್ರಹ.

ಹಿರಿಯ ಆಟಗಾರರು ಐಸಿಸಿಯ ನಿರ್ಣಯದ ಬಗ್ಗೆ ಏನು ಮಾತನಾಡಿದ್ದಾರೆ ತಿಳಿಯಲು ಮುಂದೆ ಓದಿರಿ....

ಒಬ್ಬೊಬ್ಬರಿಗೆ ಒಂದೊಂದು ನಿಯಮವೇ?

ಭಾರತದ ಸ್ಪಿನ್ನರ್ ಐಸಿಸಿ ವಿರುದ್ಧ ಹರಿಹಾಯ್ದಿದ್ದಾರೆ, 2008ರ ಮಂಕಿಗೇಟ್ ಮತ್ತು 2001ರಲ್ಲಿ 6 ಆಟಗಾರರನ್ನು ನಿಷೇಧಿಸಿದ್ದ ಐಸಿಸಿ ನಿಯಮವನ್ನು ಉಲ್ಲೇಖಿಸಿ, ಕೇವಲ ಅಪೀಲ್ ಮಾಡಿದ್ದಕ್ಕೆ, ಸಾಕ್ಷ್ಯವಿಲ್ಲದೇ ಆರು ಜನ ಆಟಗಾರ ಮೇಲೆ ಒಂದು ಪಂದ್ಯ ನಿಷೇಧ ಹೇರಿದ್ದರಿ, 2008 ರಲ್ಲಿ ನನ್ನ ವಿರುದ್ಧ ಸಾಕ್ಷ್ಯ ಇಲ್ಲದಿದ್ದರೂ ಒಂದು ಪಂದ್ಯ ನಿಷೇಧ ಹೇರಿದ್ದಿರಿ ಆದರೆ ಕೆಮರಾನ್ ಬ್ಯಾಂಕ್ರೊಫ್ಟ್‌ ವಿರುದ್ಧ ಸಾಕ್ಷ್ಯ ಇದ್ದರೂ ಏನೂ ಮಾಡಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಐಸಿಸಿ ಬಳಿ ಒಬ್ಬೊಬ್ಬರಿಗೆ ಒಂದೊಂದು ನಿಯಮವೇ? ಎಂದಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಇಂಗ್ಲೆಂಡ್ ಆಟಗಾರ

ಸರಣಿ ಟ್ವೀಟ್ ಮಾಡಿರುವ ಇಂಗ್ಲೆಂಡ್‌ನ ಮಾಜಿ ಸ್ಟಾರ್ ಆಟಗಾರ ಕೆವಿನ್ ಪಿಟರ್ಸನ್‌ 'ಐಸಿಸಿ ನೀಡಿರುವ ದುರ್ಬಲ ಶಿಕ್ಷೆ ಆಸ್ಟ್ರೇಲಿಯನ್‌ ಕ್ರಿಕೆಟ್‌ ತಂಡಕ್ಕೆ ಶಾಕ್‌ ನೀಡಿದೆ, ಅವರು ಇನ್ನೂ ದೊಡ್ಡ ಶಿಕ್ಷೆ ಸಿಗಬಹುದೆಂದು ಹೆದರಿದ್ದರು' ಎಂದು ಕಾಲೆಳೆದಿದ್ದಾರೆ. ಸ್ಯಾಂಡ್‌ಪೇಪರ್‌ಗೇಟ್ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಿಟರ್ಸನ್‌ ಆಸ್ಟ್ರೇಲಿಯಾದ ಕೋಚ್ ಲೆಹ್ಮನ್‌ ಅವರ ಮೌನವನ್ನು ಪ್ರಶ್ನಿಸಿದ್ದಾರೆ.

ಐಸಿಸಿಯ ವಿಶ್ವಾಸರ್ಹತೆಗೆ ಧಕ್ಕೆ

ಸ್ಯಾಂಡ್‌ಪೇಪರ್‌ಗೇಟ್ ಪ್ರಕರಣ ಮತ್ತು ಅದನ್ನು ಐಸಿಸಿ ನಿರ್ವಹಿಸಿದ ರೀತಿ ಮತ್ತು ನೀಡಿದ ಶಿಕ್ಷೆಯು ಆಸ್ಟ್ರೇಲಿಯಾ ಕ್ರಿಕೆಟ್ ಮತ್ತು ಐಸಿಸಿ ಎರಡರ ವಿಶ್ವಾಸಾರ್ಹತೆಗೆ ದೊಡ್ಡ ಧಕ್ಕೆ ನೀಡಲಿದೆ ಎಂದಿದ್ದಾರೆ. ಅಲೋಪತಿಯನ್ನು ಜನ ಎಷ್ಟು ನಂಬುತ್ತಾರೊ ಅಷ್ಟೆ ಆಸ್ಟ್ರೇಲಿಯಾ ಕ್ರಿಕೆಟ್ ಮತ್ತು ಐಸಿಸಿಯನ್ನು ನಂಬುತ್ತಾರಷ್ಟೆ ಎಂದು ಕಾಲೆಳೆದಿದ್ದಾರೆ.

ಕೆಲಸಕ್ಕೆ ಬಾರದ ಶಿಕ್ಷೆ

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾ ಕೂಡಾ ಐಸಿಸಿ ನೀಡಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಗೆ ಮೋಸ ಮಾಡಿದವರಿಗೆ ಪಂದ್ಯದ ಶುಲ್ಕ ಹಾಗೂ ಕೆಲಸಕ್ಕೆ ಬಾರದ ಡೀಮೆರಿಟ್ ಪಾಯಿಂಟ್ ಮಾತ್ರವನ್ನೇ ಕಡಿತ ಮಾಡಿರುವ ಐಸಿಸಿ ನಡೆ ವಿರೋಧಾರ್ಹ ಎಂದಿರುವ ಅವರು ವಿಶೇಷ ತನಿಕೆ ಮತ್ತು ಶಿಕ್ಷೆಗೆ ವಿಶೇಷ ತಂಡದ ಅವಶ್ಯಕತೆ ಇದೆ ಎಂದಿದ್ದಾರೆ.

ಆಸ್ಟ್ರೇಲಿಯನ್ನರು ಮುಸಿ-ಮುಸಿ ನಗುತ್ತಿರಬೇಕು

ಮಾಜಿ ಕ್ರಿಕೆಟಿಗ ಮ್ಯಾಟ್ ಪ್ರಿಯರ್ ಕೂಡಾ ಐಸಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಐಸಿಸಿ ನೀಡುರವ ತೀರ್ಪನ್ನು ನೋಡಿ ಆಸ್ಟ್ರೇಲಿಯನ್ ಆಟಗಾರರು ಮುಸಿ-ಮುಸಿ ನಗುತ್ತಿರಬೇಕು ಎಂದಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 26, 2018, 18:52 [IST]
Other articles published on Mar 26, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ