ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!

Shakib fastest to score 5000 runs and take 250 wickets in ODI

ಲಂಡನ್‌, ಜೂನ್‌ 02: ಬಾಂಗ್ಲಾದೇಶ ತಂಡದ ಸ್ಟಾರ್‌ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿಅತಿ ವೇಗವಾಗಿ 250 ವಿಕೆಟ್‌ ಪಡೆದು ಮತ್ತು 5000 ರನ್‌ಗಳನ್ನೂ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಇಲ್ಲಿನ ಕೆನ್ನಿಂಗ್ಟನ್‌ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಮಿಂಚಿದ ಶಾಕಿಬ್‌, ಮೊದಲಿಗೆ ಬ್ಯಾಟಿಂಗ್‌ನಲ್ಲಿ 84 ಎಸೆತಗಳಲ್ಲಿ 8 ಫೋರ್‌ ಮತ್ತೊಂದು ಸಿಕ್ಸರ್‌ ಒಳಗೊಂಡ 75 ರನ್‌ಗಳನ್ನು ದಾಖಲಿಸಿ ತಂಡಕ್ಕೆ 330/6 ರನ್‌ಗಳ ಬೃಹತ್‌ ಮೊತ್ತ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಳಿಕ ಬೌಲಿಂಗ್‌ನಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿ 50ಕ್ಕೆ 1 ವಿಕೆಟ್‌ ಪಡೆದು ಜಯದ ರೂವಾರಿ ಎನಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!

ಅವರ ಈ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಗೌರವವೂ ಒಲಿಯಿತು. ಬಾಂಗ್ಲಾದೇಶ ತಂಡ ಪಂದ್ಯದಲ್ಲಿ 21 ರನ್‌ಗಳ ಜಯ ದಾಖಲಿಸಿ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ವಿಶ್ವಕಪ್‌: ಟೀಮ್‌ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ವಿಶ್ವಾಸದಲ್ಲಿ ಆಮ್ಲಾವಿಶ್ವಕಪ್‌: ಟೀಮ್‌ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ವಿಶ್ವಾಸದಲ್ಲಿ ಆಮ್ಲಾ

ಶಾಕಿಬ್‌, ಇದೇ ವೇಳೆ 5000 ರನ್‌ಗಳನ್ನು ದಾಖಲಿಸಿ ಹಾಗೂ 250 ವಿಕೆಟ್‌ಗಳನ್ನು ಪಡೆದ ಎರಡು ಮಹತ್ವದ ಮೈಲುಗಲ್ಲು ಮುಟ್ಟಿದರು. ಕೇವಲ 198 ಪಂದ್ಯಗಳಲ್ಲಿ ಈ ಸಾಧನೆ ಮಾಡುವ ಮೂಲಕ ಅತ್ಯಂತ ವೇಗವಾಗಿ 5000 ರನ್‌ ಮತ್ತು 250 ವಿಕೆಟ್‌ಗಳನ್ನು ಪಡೆದ ಆಲ್‌ರೌಂಡರ್‌ ಎಂಬ ವಿಶ್ವ ದಾಖಲೆ ಬರೆದರು.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!

ಶ್ರೀಲಂಕಾದ ಮಾಜಿ ಆಟಗಾರ ಸನತ್‌ ಜಯಸೂರ್ಯ ಈ ಸಾಧನೆ ಮಾಡಲು 304 ಪಂದ್ಯಗಳನ್ನು ತೆಗೆದುಕೊಂಡರೆ, ಪಾಕಿಸ್ತಾನದ ಸ್ಟಾರ್‌ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ 273 ಪಂದ್ಯಗಳಲ್ಲಿ ಈ ಸಾಧನೆ ಮೆರೆದಿದ್ದರು. ಇನ್ನು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ (296 ಪಂದ್ಯ) ಮತ್ತು ಪಾಕಿಸ್ತಾನದ ಅಬ್ದುಲ್‌ ರಝಾಕ್‌ (234) ಈಪಟ್ಟಿಯಲ್ಲಿ ಇರುವ ಆಲ್‌ರೌಂಡರ್‌ಗಳಾಗಿದ್ದಾರೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!

ಬಾಂಗ್ಲಾದೇಶ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ ತಂಡವನ್ನು ಎದುರಾಗಲಿದ್ದು, ಸತತ 2 ಸೋಲುಂಡಿರುವ ದಕ್ಷಿಣ ಆಫ್ರಿಕಾ ತಂಡ ಜೂನ್‌ 5ರಂದು ಸೌತ್‌ಹ್ಯಾಂಪ್ಟನ್‌ನಲ್ಲಿ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಭಾರತ ವಿರುದ್ಧ ಪೈಪೋಟಿ ನಡೆಸಲಿದೆ.

Story first published: Sunday, June 2, 2019, 23:48 [IST]
Other articles published on Jun 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X