ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್

Shubman Gill ತನ್ನ ಮತ್ತು Sara Tendulkar ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ | Oneinda Kannada

ನವದೆಹಲಿ: ಟೀಮ್ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನ ಯುವ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್‌ಗೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್‌ಗೂ ಸಂಬಂಧವಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಪೋಸ್ಟ್‌ಗಳು, ಪೋಸ್ಟ್‌ಗೆ ಕೊಡುತ್ತಿದ್ದ ಕಾಮೆಂಟ್ಸ್‌ನಿಂದ ಇಂಥದೊಂದು ಅನುಮಾನ ಶುರುವಾಗಿತ್ತು.

ICC WTC Final Tickets: ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ತನ್ನ ಮತ್ತು ಸಾರಾ ತೆಂಡೂಲ್ಕರ್ ಬಗೆಗಿನ ಗಾಳಿ ಸುದ್ದಿಯ ಬಗ್ಗೆ ಶುಬ್ಮನ್ ಗಿಲ್ ಬಾಯ್ತೆರೆದಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ ಪ್ರಶ್ನೋತ್ತರದ ಮೂಲಕ ತನ್ನ ರಿಲೇಶನ್‌ಶಿಪ್‌ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೇಟಸ್ ಮೂಲಕ ಗಿಲ್ ಪ್ರತಿಕ್ರಿಯಿಸಿದ್ದಾರೆ.

ಗಿಲ್ ಅವರ ಇನ್‌ಸ್ಟಾ ಫಾಲೋವರ್ ಒಬ್ಬರು ಗಿಲ್ ಅವರಲ್ಲಿ ನೀವು ಸಿಂಗಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ಗಿಲ್, 'ನಾನು ನಿಜಕ್ಕೂ ಸಿಂಗಲ್. ಸದ್ಯಕ್ಕಂತೂ ರೊಮಾಂಟಿಕ್ ರಿಲೇಶನ್‌ಶಿಪ್‌ಗೆ ಬೀಳುವ ಯೋಚನೆಯಿಲ್ಲ,' ಎಂದು ಬರೆದುಕೊಂಡಿದ್ದಾರೆ.

WTC final: ಭಾರತ vs ನ್ಯೂಜಿಲೆಂಡ್ ಪಂದ್ಯ ಡ್ರಾ ಆದರೆ ಏನಾಗುತ್ತೆ?!

ಜನವರಿಯಲ್ಲಿ ಗಿಲ್‌ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಪೋಸ್ಟ್‌ ಮಾಡಿದ್ದರು. ಇದರಲ್ಲಿ 'ನಾನು ಕಣ್ಣಿಡುತ್ತೇನೆ' ಎಂದು ಬರೆದುಕೊಂಡಿದ್ದರು. ಗಮ್ಮತ್ತೆಂದರೆ ಸಾರಾ ತೆಂಡೂಲ್ಕರ್ ಕೂಡ ಇಂಥದ್ದೇ ಪೋಸ್ಟ್‌ ಹಾಕಿ ಅವರೂ 'ನಾನು ಕಣ್ಣಿಡುತ್ತೇನೆ' ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲ, ಐಪಿಎಲ್ ಪಂದ್ಯವೊಂದರ ವೇಳೆ ಗಿಲ್ ಫೀಲ್ಡಿಂಗ್ ಮೆಚ್ಚಿ ಸಾರಾ ಇನ್‌ಸ್ಟಾ ಪೋಸ್ಟ್ ಹಾಕಿಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Saturday, May 29, 2021, 11:45 [IST]
Other articles published on May 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X