ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಬ್ದುಲ್ ಸಮದ್ ಭವಿಷ್ಯದ ವಿಶೇಷ ಆಟಗಾರ: ಯುವರಾಜ್ ಸಿಂಗ್

SRHs Abdul Samad can be a special player in the future, says Yuvraj Singh

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್‌ನ ಯುವ ಬ್ಯಾಟ್ಸ್‌ಮನ್‌ ಅಬ್ದುಲ್ ಸಮದ್ ಭವಿಷ್ಯದಲ್ಲಿ ವಿಶೇಷ ಆಟಗಾರ ಅನ್ನಿಸಿಕೊಳ್ಳುತ್ತಾರೆ ಎಂದು ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ. 19ರ ಹರೆಯದ ಅಬ್ದುಲ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮೂರನೇ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಕಳೆದ ಭಾನುವಾರ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಬ್ದುಲ್ ಸಮದ್ ಕೇವಲ 16 ಎಸೆತಗಳಲ್ಲಿ 33 ರನ್ ಬಾರಿಸಿದ್ದರು. ಆದರೆ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 17 ರನ್‌ನಿಂದ ಸೋತು ಫೈನಲ್‌ ಅವಕಾಶ ಕೈ ತಪ್ಪಿಸಿಕೊಂಡಿತು.

ಮುಂಬೈ ಇಂಡಿಯನ್ಸ್‌ಗೆ ಎಚ್ಚರಿಕೆ ನೀಡಿದ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್ಮುಂಬೈ ಇಂಡಿಯನ್ಸ್‌ಗೆ ಎಚ್ಚರಿಕೆ ನೀಡಿದ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್

'ಭವಿಷ್ಯದಲ್ಲಿ ಅಬ್ದುಲ್ ಸಮದ್ ವಿಶೇಷ ಮತ್ತು ದೊಡ್ಡ ಆಟಗಾರನಾಗುತ್ತಾನೆ. ಇವತ್ತು (ಭಾನುವಾರ) ಅನ್ರಿಕ್ ನಾರ್ಟ್ಜ್ ವಿರುದ್ಧ ಕೆಲವು ಅದ್ಭುತ ಶಾಟ್‌ಗಳನ್ನು ಆಡಿದ್ದಾರೆ,' ಎಂದು ಟ್ವೀಟ್‌ ಮೂಲಕ ಹರ್ಭಜನ್ ಸಿಂಗ್ ಯುವ ಆಟಗಾರನನ್ನು ಶ್ಲಾಘಿಸಿದ್ದಾರೆ.

ಸಿಕ್ಸರ್ ಕಿಂಗ್ ಯುವರಾಜ್ ಕೂಡ ಟ್ವೀಟ್‌ನಲ್ಲಿ ಸಮದ್ ಶ್ಲಾಘಿಸಿದ್ದಾರೆ. 'ಸಮದ್ ತನ್ನ ಆಟದ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಭವಿಷ್ಯದಲ್ಲಿ ಆತನೊಬ್ಬ ವಿಶೇಷ ಆಟಗಾರ ಆಗುತ್ತಾನೆ ಎಂದು ನನಗನ್ನಿಸುತ್ತದೆ,' ಎಂದು ಯುವಿ ಬರೆದುಕೊಂಡಿದ್ದಾರೆ.

Story first published: Monday, November 9, 2020, 22:38 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X