ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜರ್ಮನಿಯಲ್ಲಿ ಕೆಎಲ್ ರಾಹುಲ್ ಶಸ್ತ್ರಚಿಕಿತ್ಸೆ; ಟ್ವೀಟ್ ಮಾಡಿ ಮಾಹಿತಿ ತಿಳಿಸಿದ ಉಪನಾಯಕ

Successful Surgery To Indian Batsman KL Rahul In Germany; On The Oath Of Recovery

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಉಪ ನಾಯಕ ಕೆಎಲ್ ರಾಹುಲ್ ಅವರು ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದರು ಮತ್ತು ಯಶಸ್ವಿಯಾಗಿದೆ. ತೊಡೆಸಂದು ಗಾಯದಿಂದ ಬಳಲುತ್ತಿರುವ ನಂತರ ಚೇತರಿಕೆಯ ಹಾದಿಯಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ನಡೆದ ಭಾರತದ ಟಿ20 ಸರಣಿಯಿಂದ ಮತ್ತು ನಂತರ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇನ್ನು ಶಸ್ತ್ರಚಿಕಿತ್ಸೆಯ ನಂತರ ತಮ್ಮ ಆರೋಗ್ಯದ ನಗ್ಗೆ ಮಾಹಿತಿ ತಿಳಿಸಿರುವ ಕೆಎಲ್ ರಾಹುಲ್, ಟ್ವಿಟ್ಟರ್‌ನಲ್ಲಿ ಚೇತರಿಕೆಯ ಹಾದಿ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

ICC T20 Ranking: ವಿರಾಟ್ ಕೊಹ್ಲಿಯ ಸುದೀರ್ಘ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಮ್ICC T20 Ranking: ವಿರಾಟ್ ಕೊಹ್ಲಿಯ ಸುದೀರ್ಘ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಮ್

"ಎಲ್ಲರಿಗೂ ನಮಸ್ಕಾರ. ಇದು ಒಂದೆರಡು ವಾರಗಳ ಕಠಿಣ ಸಮಯವಾಗಿದ್ದು, ಆದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ನನ್ನ ಚೇತರಿಕೆಯ ಹಾದಿ ಪ್ರಾರಂಭವಾಗಿದೆ. ನನ್ನ ಆರೋಗ್ಯದ ಬಗ್ಗೆ ನಿಮ್ಮ ಸಂದೇಶಗಳಿಗೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ," ಎಂದು ಕೆಎಲ್ ರಾಹುಲ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಗೈರುಹಾಜರಿ

ಸದ್ಯ ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಅವರ ಗೈರುಹಾಜರಿ ಕಾಡುತ್ತಿದ್ದು, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಒಬ್ಬ ಆರಂಭಿಕ ಆಟಗಾರನ ಕೊರತೆಯನ್ನು ಹೊಂದಿತ್ತು. ಆದರೆ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರು ಆರಂಭಿಕರಾಗಿ ಇನ್ನಿಂಗ್ಸ್ ಮೈದಾನಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಭಾರತೀಯ ನಾಯಕ ರೋಹಿತ್ ಶರ್ಮಾ ಕೋವಿಡ್ -19 ಸೋಂಕಿನಿಂದ ಬಳಲುತ್ತಿದ್ದು, ಇದು ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂಗ್ಲೆಂಡ್ ಕೊನೆಯ ಟೆಸ್ಟ್ ಪಂದ್ಯಕ್ಕೆ ಬ್ಯಾಕ್‌ಅಪ್‌ ಬ್ಯಾಟರ್ ಆಗಿ ಮಯಾಂಕ್ ಅಗರ್ವಾಲ್‌ರನ್ನು ತಂಡಕ್ಕೆ ಸೇರಿಸಕೊಳ್ಳಲಾಗಿದೆ.

ಭಾರತದ ಸರಣಿಗಳಿಗೆ ಉಪ ನಾಯಕ ಕೆಎಲ್ ರಾಹುಲ್ ನಿರ್ಣಾಯಕ

ಭಾರತದ ಸರಣಿಗಳಿಗೆ ಉಪ ನಾಯಕ ಕೆಎಲ್ ರಾಹುಲ್ ನಿರ್ಣಾಯಕ

ಮುಂಬರುವ ತಿಂಗಳುಗಳಲ್ಲಿ ಭಾರತದ ಸರಣಿಗಳಿಗೆ ಉಪ ನಾಯಕ ಕೆಎಲ್ ರಾಹುಲ್ ನಿರ್ಣಾಯಕರಾಗಿದ್ದಾರೆ. ಆಟದ ಎಲ್ಲಾ ಸ್ವರೂಪಗಳಲ್ಲಿ ಬ್ಯಾಟರ್ ಭಾರತೀಯ ತಂಡದ ಬೆನ್ನೆಲುಬಾಗಿದ್ದಾರೆ. ರಾಹುಲ್ ಅವರು ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಜೊತೆಗೂಡಿ ಭಾರತೀಯ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಸ್ಥಿರತೆಯನ್ನು ಮರಳಿ ತರಬೇಕಾಗಿದೆ. ಹೊಸ ಚೆಂಡಿನಲ್ಲಿ ಎದುರಾಳಿ ತಂಡಕ್ಕೆ ಪ್ರತಿದಾಳಿ ಮಾಡುವ ಶಕ್ತಿ ರಾಹುಲ್ ಮತ್ತು ರೋಹಿತ್ ಜೋಡಿಗಿದೆ.

ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್

ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್

ಮುಂದಿನ ಎರಡು ವಿಶ್ವಕಪ್‌ಗಳು ಸಾಲಾಗಿ ಇರುವುದರಿಂದ ಕೆಎಲ್ ರಾಹುಲ್ ಸಂಪೂರ್ಣ ಫಿಟ್‌ನೆಸ್‌ಗೆ ಮರಳುತ್ತಾರೆ ಮತ್ತು ಪಂದ್ಯಾವಳಿಗಳಿಗೆ ಸ್ವಲ್ಪ ಸಮಯ ನೀಡುತ್ತಾರೆ ಎಂದು ಭಾರತ ತಂಡದ ಮ್ಯಾನೇಜ್‌ಮೆಂಟ್ ಭಾವಿಸಿದೆ.

ಭಾರತವು ತನ್ನ ಏಕದಿನ ವಿಶ್ವಕಪ್‌ಗಾಗಿ ತಯಾರಿಯನ್ನು ಪ್ರಾರಂಭಿಸುವ ಮೊದಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಅನ್ನು ಆಡಲು ನಿರ್ಧರಿಸಿದೆ. ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 2011ರಲ್ಲಿ ಕೊನೆಯದಾಗಿ ವಿಶ್ವಕಪ್ ಗೆದ್ದಿತ್ತು. ಅದಕ್ಕೂ ಮುನ್ನ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು.

Virat Kohli ಶತಕದ ಬದ್ಲು ನಮ್ಗೆ ಬೇಕಾಗಿರೋದು ಇದು...ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ | *Cricket |OneIndia
ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಸಂಭಾವ್ಯ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹದ್ ಸಿರಾಜ್ , ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್

Story first published: Thursday, June 30, 2022, 18:21 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X