ಟೆಸ್ಟ್ ಇನ್ನಿಂಗ್ಸ್ ಬೆಳೆಸಬೇಕಿರುವುದೇ ಹೀಗೆ: ರೋಹಿತ್ ಆಟಕ್ಕೆ ತಲೆದೂಗಿದ ಗವಾಸ್ಕರ್

ಲಂಡನ್, ಸೆಪ್ಟೆಂಬರ್ 5: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಎರಡನೇ ಇನ್ನಿಂಗ್‌ನಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ನೀಡಿದ ಪ್ರದರ್ಶನ ಅಮೋಘವಾಗಿದೆ. ಅದರಲ್ಲೂ ರೋಹಿತ್ ಶರ್ಮಾ ಸಿಡಿಸಿದ ಶತಕ ಭಾರತದ ಎರಡನೇ ಇನ್ನಿಂಗ್ಸ್‌ನ ಪ್ರಮುಖ ಅಂಶ. ಇನ್ನಿಂಗ್ಸ್‌ನ ಉದ್ದಕ್ಕೂ ರೋಹಿತ್ ಶರ್ಮಾ ಆಡಿದ ರೀತಿಯಿಂದಾಗಿ ಭಾರತ ಸದ್ಯ ಪಂದ್ಯದಲ್ಲಿ ಉತ್ತಮ ಸ್ಥಿತಿಯತ್ತ ಸಾಗುತ್ತಿದೆ.

ನಾಲ್ಕನೇ ಟೆಸ್ಟ್ ಪೊಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್‌ಗಳ ಹಿನ್ನೆಡೆಯನ್ನು ಮೊದಲಕ ಇನ್ನಿಂಗ್ಸ್‌ನಲ್ಲಿ ಅನುಭವಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅದಕ್ಕೆ ಭರ್ಜರಿ ತಿರುಗೇಟು ನೀಡುವಂತಾ ಪ್ರದರ್ಶನ ನೀಡಿದೆ ಟೀಮ್ ಇಂಡಿಯಾ. ಮೂರನೇ ದಿನದಾಟದ ಅಂತ್ಯದಲ್ಲಿ ಭಾರತ 270 ರನ್‌ಗಳನ್ನು ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಸದ್ಯ ವಿರಾಟ್ ಕೊಹ್ಲಿ ಪಡೆ 171 ರನ್‌ಗಳ ಮುನ್ನಡೆಯಲ್ಲಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದು ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

ರೋಹಿತ್ ಶರ್ಮಾ ನಿಡಿದ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಟೆಸ್ಟ್ ಇನ್ನಿಂಗ್ಸ್‌ಅನ್ನು ಹೇಗೆ ಬೆಳೆಸಬೇಕು ಎಂಬುದನ್ನು ರೋಹಿತ್ ಶರ್ಮಾ ಅವರ ಈ ಇನ್ನಿಂಗ್ಸ್‌ನಿಂದ ನೋಡಿ ಕಲಿಯಬೇಕು ಎಂದಿದ್ದಾರೆ ಸುನಿಲ್ ಗವಾಸ್ಕರ್.

ಇಸೋಲೇಷನ್ ಗೆ ಒಳಗಾದ ಟೀಮ್ ಇಂಡಿಯಾ ಕೋಚ್! | Oneindia Kannada
ಶರ್ಮಾ ಆಟಕ್ಕೆ ತಲೆದೂಗಿದ ಗವಾಸ್ಕರ್

ಶರ್ಮಾ ಆಟಕ್ಕೆ ತಲೆದೂಗಿದ ಗವಾಸ್ಕರ್

"ಅದ್ಭುತವಾದ ಶತಕ. ತುಂಬಾ ಮೆಚ್ಚುಗೆಯಾಗಿದೆ. ಇದಕ್ಕೆ ಕಾರಣ ಅವರು ಹೊಸ ಚೆಂಡು ಸ್ವಿಂಗ್ ಪಡೆಯುತ್ತಿದ್ದಾಗ ಅದನ್ನು ಆವರಿಸಿದ ರೀತಿಗೆ. ಕೇವಲ ಇಲ್ಲಿ ಮಾತ್ರವಲ್ಲ. ಇದಕ್ಕೂ ಹಿಂದಿನ ಪಂದ್ಯದಲ್ಲಿಯೂ ಅವರು ಇದೇ ಪ್ರದರ್ಶನವನ್ನು ನೀಡಿದ್ದರು. ಅವರು ತಡವಾಗಿ ಆಡುತ್ತಿದ್ದ ರೀತಿ, ಬ್ಯಾಟ್ ಮತ್ತು ಪ್ಯಾಡ್‌ಗಳನ್ನು ಹತ್ತಿರದಲ್ಲಿಟ್ಟು ಆಡಿದ ವಿಧಾನ ಗಮನಾರ್ಹ. ಕ್ರೀಸ್‌ನಲ್ಲಿ ನೆಲೆಯೂರಿದ ನಂತರ ತಮ್ಮ ಎಲ್ಲಾ ಹೊಡೆತಗಳನ್ನು ಕೂಡ ಸರಾಗವಾಗಿ ಬಾರಿಸಲು ಆರಂಭಿಸಿದರು. ಇನ್ನೂ ಪ್ರಮುಖವಾಗಿ ಅವರು ರಕ್ಷಣಾತ್ಮಕವಾಗಿ ಆಡುವ ವೇಳೆ ಬ್ಯಾಟನ್ನು ನೇರವಾಗಿ ಆಡಿದ ರೀತಿ ಬಳಹ ಪ್ರಮುಖವಾಗಿದೆ. ನಂತರ ತಮ್ಮ ಅದ್ಭುತವಾದ ಕಾಲ್ಚಳಕವನ್ನು ಪ್ರದರ್ಶಿಸಿ ಬ್ಯಾಟಿಂಗ್‌ ನಡೆಸಿದ್ದಾರೆ. ಇದು ಕೂಡ ರೋಹಿತ್ ಶತಕದ ಆಟದಲ್ಲಿ ಬಹಳ ಮುಖ್ಯವಾಗಿತ್ತು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ರೋಹಿತ್ ಶರ್ಮಾ ಮುಕ್ತ ಆಟ

ರೋಹಿತ್ ಶರ್ಮಾ ಮುಕ್ತ ಆಟ

"ಒಂದು ಬಾರಿ ಅರ್ಧ ಶತಕದ ಗಡಿಯನ್ನು ದಾಟಿದ ನಂತರ ರೋಹಿತ್ ಮುಕ್ತವಾಗಿ ಆಡಲು ಪ್ರಾರಂಭಿಸಿದರು. ತಮ್ಮ ಹೊಡೆತಗಳ ವಿಸ್ತಾರವನ್ನು ಹೆಚ್ಚಿಸಿದರು. ಕಟ್ ಮತ್ತು ಸ್ವೀಪ್‌ ಶಾಟ್‌ನಂತಾ ಹೊಡೆತಗಳನ್ನು ಕೂಡ ಬಾರಿಸಿದರು. ಟೆಸ್ಟ್ ಇನ್ನಿಂಗ್ಸ್‌ವೊಂದು ಬೆಳೆಯಬೇಕಿರುವುದು ಇದೇ ಮಾದರಿಯಲ್ಲಿ. ಇದು ಆಟಗಾರರಿಗೆ ಇರುವ ದೊಡ್ಡ ಸವಾಲು ಕೂಡ ಆಗಿದೆ. ರೋಹಿತ್ ಶರ್ಮಾ ರೀತಿಯ ಆಟಗಾರ ಅಥವಾ ಜಿಆರ್ ವಿಶ್ವನಾಥ್, ಅಜರುದ್ಧೀನ್ ಇವರೆಲ್ಲರೂ ಕೂಡ ಒಂದು ಎಸೆತಗಳಿಗೆ ಹೆಚ್ಚಿನ ಹೊಡೆತದ ಆಯ್ಕೆಗಳನ್ನು ಹೊಂದಿರುತ್ತಾರೆ. ಅವರು ಆನ್ ಸೈಡ್ ಮತ್ತು ಆಫ್ ಸೈಡ್ ನಲ್ಲಿ ಆಡಬಹುದು. ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಪ್ರದರ್ಶನವನ್ನು ಅವರು ನೀಡಬೇಕಿರುವುದು ಬಹಳ ಮುಖ್ಯ. ರೋಹಿತ್ ಶರ್ಮಾ ಇಂದು ಅದನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ" ಎಂದು ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.

ಮತ್ತಷ್ಟು ಶತಕ ರೋಹಿತ್ ಬ್ಯಾಟ್‌ನಿಂದ ಬರಲಿದೆ

ಮತ್ತಷ್ಟು ಶತಕ ರೋಹಿತ್ ಬ್ಯಾಟ್‌ನಿಂದ ಬರಲಿದೆ

ಇನ್ನು ಈ ಸಂದರ್ಭದಲ್ಲಿ ಮಾತು ಮುಂದುವರಿಸಿದ ಸುನಿಲ್ ಗವಾಸ್ಕರ್ ರೋಹಿತ್ ಶರ್ಮಾ ಮೇಲೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ಮತ್ತಷ್ಟು ಶತಕಗಳನ್ನು ಮುಂದಿನ ದಿನಗಳಲ್ಲಿ ಬಾರಿಸಲಿದ್ದಾರೆ. ಇದಕ್ಕೆ ಓವಲ್ ಮೈದಾನ ಆತ್ಮವಿಶ್ವಾಸವನ್ನು ನೀಡಿದೆ ಎಂದು ಗವಾಸ್ಕರ್ ಹೇಳಿದರು. "ತಾನು ಇದನ್ನು ಮಾಡಬಲ್ಲೆ ಎಂಬುದನ್ನು ರೋಹಿತ್ ಶರ್ಮಾ ತಮಗೆ ತಾವು ಸಾಬೀತುಪಡಿಸಿದ್ದಾರೆ. ಇಂತಾ ಶತಕಗಳು ಇನ್ನು ಕೂಡ ಅವರ ಹಾದಿಯಲ್ಲಿದೆ. ತಮ್ಮ ಜವಾಬ್ಧಾರಿಯನ್ನು ಅವರು ಅದ್ಭುತವಾಗಿ ಅರಿತುಕೊಂಡಿದ್ದಾರೆ. 30, 40 ರನ್‌ಗಳಿಗಿಂತ ತಾನು ಹೆಚ್ಚು ಆಡಬೇಕು ಎಂದು ಅವರು ಅರ್ಥ ಮಾಡಿಕೊಂಡಿದ್ದಾರೆ" ಎಂದಿದ್ದಾರೆ ಮಾಜಿ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 5, 2021, 12:02 [IST]
Other articles published on Sep 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X