ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸುರೇಶ್ ರೈನಾ ನಿವೃತ್ತಿ: ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಮಹತ್ವದ ಹೇಳಿಕೆ

CSK CEO

ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ಸುರೇಶ್ ರೈನಾ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸದಲ್ಲಿ ಪ್ರಮುಖ ಆಟಗಾರ. ಆದ್ರೂ ಕಳೆದ ಋತುವಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ರೈನಾವನ್ನು ಖರೀದಿಸಲು ಆಸಕ್ತಿ ತೋರಿಸಲಿಲ್ಲ.

ಸುರೇಶ್ ರೈನಾ ಇತ್ತೀಚೆಗಷ್ಟೇ ಸಿಎಸ್‌ಕೆ ಜೆರ್ಸಿಯಲ್ಲಿ ಅಭ್ಯಾಸ ನಡೆಸುತ್ತಿರುವುದರಿಂದ ಮುಂದಿನ ಸೀಸನ್‌ನಲ್ಲಾದರೂ ಸುರೇಶ್ ರೈನಾಗೆ ಅವಕಾಶ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಈ ವೇಳೆ ಐಪಿಎಲ್ ಸರಣಿಗೂ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

Ind vs SL: ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್‌ : ಸೆಕ್ಯುರಿಟಿಗೆ ಬಡಿದ ಚೆಂಡು, ವೀಡಿಯೋ ವೈರಲ್Ind vs SL: ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್‌ : ಸೆಕ್ಯುರಿಟಿಗೆ ಬಡಿದ ಚೆಂಡು, ವೀಡಿಯೋ ವೈರಲ್

ಈಗಾಗಲೇ ಈ ಕುರಿತು ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐಗೆ ಅಧಿಕೃತ ಪತ್ರಗಳನ್ನು ಕಳುಹಿಸಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೇ ವಿದೇಶಿ ಟಿ20 ಲೀಗ್‌ಗಳಲ್ಲಿ ಭಾಗವಹಿಸಬಹುದು. ಮುಂದೆ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ರೀತಿಯ ಬೆಳವಣಿಗೆಯ ಮಧ್ಯೆ ಸಿಎಸ್ ಕೆ ಸಿಇಒ ಕಾಶಿ ವಿಶ್ವನಾಥನ್ ರೈನಾ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಅದರಲ್ಲಿ ರೈನಾ ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ 2 ದಿನಗಳ ಹಿಂದೆ ಹೇಳಿದ್ದರು. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ. ಕಳೆದ 10 ವರ್ಷಗಳಲ್ಲಿ ಸಿಎಸ್ ಕೆಗಾಗಿ ಸಾಕಷ್ಟು ಸಾಧನೆ ಮಾಡಿರುವ ರೈನಾ ಸಿಎಸ್ ಕೆ ಖಾಯಂ ಭಾಗವಾಗಲಿದ್ದಾರೆ ಎಂದಿದ್ದಾರೆ.

IPL ನಿವೃತ್ತಿ ಬಳಿಕ ಸುರೇಶ್ ರೈನಾ ಆಡಬಲ್ಲ 4 ವಿದೇಶಿ ಟಿ20 ಲೀಗ್‌ ಫ್ರಾಂಚೈಸಿಗಳುIPL ನಿವೃತ್ತಿ ಬಳಿಕ ಸುರೇಶ್ ರೈನಾ ಆಡಬಲ್ಲ 4 ವಿದೇಶಿ ಟಿ20 ಲೀಗ್‌ ಫ್ರಾಂಚೈಸಿಗಳು

ಟಿ20 ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಅನೇಕ ದಾಖಲೆಗಳ ಒಡೆಯನಾಗಿದ್ದಾನೆ. ಅದ್ರಲ್ಲೂ ಐಪಿಎಲ್‌ನಲ್ಲಂತೂ ಈತ ಸಾರ್ವಕಾಲಿಕ ಬೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬಾತ. ನಾಲ್ಕು ಬಾರಿ ಐಪಿಎಲ್ ಟ್ರೋಫಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸದಸ್ಯರಾಗಿದ್ದರು.

ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 6000 ಮತ್ತು 7000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಐಪಿಎಲ್‌ನಲ್ಲಿ 5,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ. 205
ಐಪಿಎಲ್ ಪಂದ್ಯಗಳಲ್ಲಿ 5528 ರನ್ ಕಲೆಹಾಕಿರುವ ರೈನಾ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಅರ್ಧಶತಕ ಹಾಗೂ ಒಂದು ಶತಕ ಈತನ ಹೆಸರಿನಲ್ಲಿದೆ.

Asia Cup 2022- Cold War Rishab Pant ಕಂಡ್ರೆ ಪಾಂಡ್ಯಗೆ ಆಗಲ್ವಾ !? | *Cricket | OneIndia Kannada

ಐಪಿಎಲ್‌ನ ಮೊದಲ ಏಳು ಸೀಸನ್‌ಗಲ್ಲಿ ಸ್ಥಿರವಾಗಿ 400ಕ್ಕೂ ಹೆಚ್ಚು ರನ್ ಕಲೆಹಾಕಿರುವ ಸುರೇಶ್ ರೈನಾ, ಮಿಸ್ಟರ್ ಐಪಿಎಲ್ ಎಂಬ ಬಿರುದನ್ನ ಸಹ ಪಡೆದಿದ್ದಾರೆ.

Story first published: Tuesday, September 6, 2022, 23:47 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X